Bengaluru Rain: ರಜಾದಿನದ ಮಜಾ ಕಸಿದ ಮಳೆ, ಭಾನುವಾರದ ಹೆಚ್ಚಾದ ವರುಣಾರ್ಭಟ

ಬೆಂಗಳೂರು, ಜಲೈ 02: ಕರ್ನಾಟಕದಾದ್ಯಂತ ಚುರುಕಾಗಿರುವ ಮುಂಗಾರು ಮಳೆ ಭಾನುವಾರ ಸಂಜೆ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಅಬ್ಬರಿಸಲು ಆರಂಭಿಸಿದೆ. ಸಂಜೆ 5.30ರ ನಂತರ ಶುರುವಾದ ಮಳೆ ಧಾರಾಕಾರವಾಗಿ ಸುರಿಯಿತು. ಐಟಿ ಉದ್ಯೋಗಿಗಳು ಸೇರಿದಂತೆ ಅನೇಕರ ರಜಾದಿನದ ಮಜಾ ಮಳೆ ಕಸಿಯಿತು.

ನಗರದಲ್ಲಿ ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಎಂದಿನಂತೆ ಭಾನುವಾರ ಸಂಜೆ ಪ್ರತ್ಯಕ್ಷವಾಗಿದ್ದಾನೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಸಂಜೆ ಮಳೆ ತಂಪೆರೆಯಿತು. ಗುಡುಗು, ಸಿಡಿಲು ಹಾಗೂ ಗಾಳಿ ರಭಸ ಹೆಚ್ಚಾಗಿದ್ದದ್ದು ಕಂಡು ಬಂತು.

Bengaluru City So Many Places Receiving Heavy Rain Today Sunday July 2, Know More

ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯ ಆಗಮನವಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಬಾಪೂಜಿನಗರ, ನಾಯಂಡಹಳ್ಳಿ, ಕೆಂಗೇರಿ, ಆರ್‌ಆರ್‌ನಗರ, ಚಂದ್ರಾಲೇಔಟ್, ಜ್ಞಾನಭಾರತಿ, ಹೆಬ್ಬಾಳ, ಚೌಡೇಶ್ವರಿ, ಜಕ್ಕೂರು, ಮಹಾದೇವಪುರ, ಕೋರಮಂಗಲ, ಚಾಮರಾಜಾಪೇಟೆ, ಜಯನಗರ, ಜಕ್ಕಸಂದ್ರ, ರಾಜ್‌ಮಹಲ್ ಗುಟ್ಟಹಳ್ಳಿ, ವಿದ್ಯಾರಣ್ಯಪು ಸೇರಿದಂತೆ ನಾನಾ ಕಡೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಈ ಮಳೆ ತಡರಾತ್ರಿವರೆಗೂ ಮುಂದುವರಿಯುವ ಲಕ್ಷಣಗಳು ಇದೆ.

ರಸ್ತೆಗಳ ಮೇಲೆಲ್ಲ ನೀರು
ಕಾವೇರಿ ಜಂಕ್ಷನ್ ಅಂಡರ್‌ಪಾಸ್, ಶಿವಾನಂದ ವೃತ್ತದ ರೈಲ್ವೆ ಬ್ರಿಡ್ಜ್, ಕೆ.ಆರ್.ವೃತ್ತ ಅಂಡರ್‌ಪಾಸ್ ಸೇರಿದಂತೆ ವಿವಿಧ ರಸ್ತೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಉಕ್ಕಿಹರಿಯಿತು. ಕೆಆರ್ ಮಾರುಕಟ್ಟೆ ರಸ್ತೆ ಮತ್ತು ಮೇಲ್ಸೇತುವೆ, ಹೊಸೂರು ರಸ್ತೆ, ಟೌನ್‌ಹಾಲ್ ಮುಂಭಾಗ, ಚಾಲುಕ್ಯ ವೃತ್ತ, ಮಲ್ಲೇಶ್ವರಂ, ರಾಜಾಜಿನಗರ ಶ್ರೀರಾಮ ದೇವಾಸ್ಥಾನ, 80 ಅಡಿ ರಸ್ತೆ, ಪಾದರಾಯನಪುರ, ಮೈಸೂರು ರಸ್ತೆ ಹಾಗೂ ಮೆಜೆಸ್ಟಿಕ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಳೆ ನೀರು ನಿಂತರದ್ದು ಕಂಡು ಬಂತು.

ಜಿಟಿಜಿಟಿಯಾಗಿ ಆರಂಭವಾದ ಮಳೆ ಜೋರಾಗಿ ಸುರಿಯಲು ಆರಂಭಿಸಿದ್ದೇ ತಡ ರಸ್ತೆ ಅಂಗಡಿ ಮಾಲೀಕರು ಅಂಗಡಿ ಬಂದ್ ಮಾಡಿಕೊಂಡರು. ಭಾನುವಾರ ರಜಾದಿನವಾಗಿದ್ದರಿಂದ ಸಂಜೆ ಶಾಪಿಂಗ್, ಸಿನಿಮಾ, ಮೋಜು ಮಸ್ತಿಗೆ ತೆರಳಬೇಕಿದ್ದವರು ಖುಷಿ ಮಳೆ ಕಸಿದುಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+