Pink Hoysala: ತುರ್ತು ವೇಳೆ 8 ನಿಮಿಷದಲ್ಲಿ ಸಮಸ್ಯೆಗೆ ಸ್ಪಂದನೆ, ಏನಿದು ಹೊಸ ಉಪಕ್ರಮ?
ಬೆಂಗಳೂರು, ಆಗಸ್ಟ್ 02: ಬೆಂಗಳೂರಿನಂಥಹ ಮಹಾನಗರಗಳಲ್ಲಿ ರಾತ್ರಿ ಅಡ್ಡಹಾಕಿ ಸಮಸ್ಯೆ ಉಂಟು ಮಾಡುವುದು, ಕಳ್ಳತನ, ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಇದು ರಾತ್ರಿ ಸಮಯದಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಇಂಥಹ ತುರ್ತು ಸಂದರ್ಭದಲ್ಲಿ ಅಗತ್ಯ ಸೇವೆ ನೀಡುವ ಸಲುವಾಗಿ ಬೆಂಗಳೂರು ನಗರ ಪೊಲೀಸರು 'ರಿಯಲ್ ಟೈಮ್ ಟ್ರ್ಯಾಕಿಂಗ್ ಆಫ್ ಹೊಯ್ಸಳ' ಉಪಕ್ರಮ ಅನ್ನು ಪರಿಚಯಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಬೆರಳ ತುದಿಯಲ್ಲೇ ಪೊಲೀಸ್ ಸೇವೆ ಸಿಗಲಿದೆ ಎಂದು ಉಪಕ್ರಮದಲ್ಲಿ ಹೇಳಲಾಗಿದೆ. ಹಾಗಾದರೆ ಈ 'ರಿಯಲ್ ಟೈಮ್ ಟ್ರ್ಯಾಕಿಂಗ್ ಆಫ್ ಹೊಯ್ಸಳ' ಸಿಬ್ಬಂದಿಯನ್ನು ಹೇಗೆ ಸಂಪರ್ಕಿಸಬೇಕು? ತುರ್ತು ಸೇವೆ ಲಭ್ಯ ಹೇಗೆ? ಏನಿದು ಟ್ರ್ಯಾಕಿಂಗ್? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಬೆಂಗಳೂರು ನಗರ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ನಗರದಲ್ಲಿ ಹಗಲು, ರಾತ್ರಿ ಪಿಂಕ್ ಹೊಯ್ಸಳ ಗಸ್ತು ತಿರುತ್ತಿರುತ್ತದೆ. ನಿರಂತರ ಕಾರ್ಯ ನಿರ್ವಹಿಸುವ ಈ ಸಿಬ್ಬಂದಿಯು ತುರ್ತು ಸಂದರ್ಭದಲ್ಲಿ ನಿಮಗೆ ಲಭಿಸಲು ಈ ಉಪಕ್ರಮ ಪರಿಚಯಿಸಲಾಗಿದೆ.
ಸಹಾಯವಾಣಿಗೆ ಕರೆ ಮಾಡಿದರೆ 8 ನಿಮಿಷದಲ್ಲಿ ಸೇವೆ
ನಿಮಗೇನಾದರೂ ತೊಂದರೆ ಆದಲ್ಲಿ ನೀವು ಕೂಡಲೇ ನಿಮ್ಮ ಮೊಬೈಲ್ ಮೂಲಕ "ನಮ್ಮ112" ಸಹಾಯವಾಣಿಗೆ ಕರೆ ಮಾಡಿದರೆ, ದೂರಿನ ವಿವರ ಹಾಗೂ ಹೊಯ್ಸಳ ಗಸ್ತು ವಾಹನದ ಟ್ರ್ಯಾಕಿಂಗ್ ಲಿಂಕ್ SMS ಮೂಲಕ ನಿಮಗೆ ಸಂದೇಶ ಬರಲಿದೆ.

ಇನ್ನೂ ಕರೆ ಮಾಡಿದ ಕೇವಲ 8 ನಿಮಿಷಗಳ ಒಳಗೆ ನಿಮ್ಮ ಹತ್ತಿರದಲ್ಲಿನ ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ನೀವಿರುವ ಸ್ಥಳಕ್ಕೆ ಬರುತ್ತಾರೆ. ಸಮಸ್ಯೆಗೆ ಪರಿಹಾರ ಒದಗಿಸುವವರೆಗೂ ಪೊಲೀಸ್ ಸಿಬ್ಬಂದಿ, ಸಹಾಯವಾಣಿ ನಿಮ್ಮ ಮೇಲೆ ನಿಗಾ ಇಟ್ಟಿರುತ್ತಾರೆ.
ಇದರ ಬಳಕೆಯಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರಾತ್ರಿ ಅಪರಾಧ ಕೃತ್ಯಗಳು, ತೊಂದರೆಗಳು ತಪ್ಪಲಿವೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೇವೆಯ ಸಂಕ್ಷಿಪ್ತ ವಿವರ
* ಸಾರ್ವಜನಿಕರು ತೊಂದರೆ ವೇಳೆ "ನಮ್ಮ112" ಸಹಾಯವಾಣಿಗೆ ಕರೆ ಮಾಡುತ್ತಾರೆ.
* ಕಂಟ್ರೋಲ್ ರೂಮ್ ಆಪರೇಟರ್ ನಿಮ್ಮ ದೂರನ್ನು ನೋಂದಾಯಿಸಿಕೊಳ್ಳುತ್ತಾರೆ.
* ನಂತರ ಆಪರೇಟರ್ ಸಿಬ್ಬಂದಿ ನಿಮಗೆ ದೂರಿನ ವಿವರ ಹಾಗೂ ಹೊಯ್ಸಳ ಗಸ್ತು ವಾಹನದ ಟ್ರ್ಯಾಕಿಂಗ್ ಲಿಂಕ್ ಅನ್ನು ನಿಮಗೆ ಸಂದೇಶ ಕಳುಹಿಸುತ್ತಾರೆ.
* ನೀವು ಟ್ರ್ಯಾಕಿಂಗ್ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆ ನಿಮಗೆ ನಿಮ್ಮ ಹತ್ತಿರದಲ್ಲಿನ ಹೊಯ್ಸಳ ವಾಹನ ದೂರು, ಆಗಮಿಸಲು ಸಮಯ ಕಾಣುತ್ತದೆ.
* ದೂರು ದಾಖಲಿಸಿಕೊಂಡು ಕಂಟ್ರೋಲ್ ರೂಮ್ ಆಪರೇಟರ್ ತಕ್ಷಣವೇ ನಿಮ್ಮ ಹತ್ತಿರದ ಹೊಯ್ಸಳ ವಾಹನ ಆಯ್ಕೆ ಮಾಡುತ್ತಾರೆ.
* ನಿಮ್ಮ ಹತ್ತಿರದ ಹೊಯ್ಸಳ ಗಸ್ತು ಸಿಬ್ಬಂದಿಗೆ ದೂರು, ನೀವಿರುವ ಸ್ಥಳದ ಮಾಹಿತಿ ರವಾನಿಸಿರುತ್ತಾರೆ.
* ಇದಾಗಿ ಕೇವಲ ಎಂಟೇ ನಿಮಿಷಗಳಲ್ಲಿ ಗಸ್ತಲ್ಲಿರುವ ಪೊಲೀಸ್ ಸಿಬ್ಬಂದಿ ತ್ವರಿತವಾಗಿ ನಿಮ್ಮಲ್ಲಿಗೆ ಬಂದು ಪರಿಹಾರ ನೀಡುತ್ತಾರೆ.












Click it and Unblock the Notifications