Bengaluru Rain: ಭಾನುವಾರ ನಗರದಲ್ಲಿ ಮಳೆ ಸಿಂಚನ, ಜುಲೈ 27ವರೆಗಿನ ಹವಾಮಾನ ವರದಿ

ಬೆಂಗಳೂರು, ಜುಲೈ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಕೆಲವು ಕಡೆಗಳಲ್ಲಿ ಮಳೆ ಮುಂದುವರಿದಿದೆ. ವಿದ್ಯಾಪೀಠದಲ್ಲಿ ಭಾನುವಾರ 10 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮಳೆ ಜುಲೈ 27ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆ ಕಣ್ಮರೆಯಾಗಿತ್ತು. ಭಾನುವಾರ ಮತ್ತೆ ಮುಂದುವರಿಯುವ ಮುನ್ಸೂಚನೆ ನೀಡಿದ್ದು, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬಿದ್ದಿದ್ದು, ನಿರಂತರ ಮಳೆಗೆ ಜನರು ತತ್ತರಿಸಿದ್ದಾರೆ.

Bengaluru City May See Generally Coudy Sky And Light Rain Till July 27th

ಮುಂದಿನ ಜುಲೈ 27ರವರೆಗೆ ನಗರದಲ್ಲಿ ಮೋಡ ಕವಿದ ಮಬ್ಬು ವಾತಾವರಣ ಜೊತೆಗೆ ಆಗಾಗ ಚುದುರಿದಂತೆ ಮಳೆ ಬೀಳಲಿದೆ. ಕೆಲವೆಡೆ ಜೋರು ಮಳೆ ಬರುವ ಲಕ್ಷಣಗಳು ಇವೆ. ಈ ಅವಧಿಯಲ್ಲಿ ನಗರದ ತಾಪಮಾನ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ನಗರದ ವಿವಿಧೆಡೆ ಮಳೆ
ನಗರದ ವಿದ್ಯಾಪೀಠಲ್ಲಿ ಮಾತ್ರವಲ್ಲದೇ, ಬೊಮ್ಮಾನಹಳ್ಳಿ, ಹೂಡಿ, ನಾಗವಾರ, ಹೆಬ್ಬಾಳ, ವಿದ್ಯಾರಣ್ಯಪುರ, ಹಂಪಿನಗರ, ಬಸವನಗುಡಿ, ಚೌಡೇಶ್ವರಿ, ಮಹದೇವಪುರ, ಯಲಹಂಕ, ಸಿವಿ ರಾಮನ್ ನಗರ, ಎಚ್‌ಎಎಲ್ ವಿಮಾನ ನಿಲ್ದಾಣ, ಕೋಣನಕುಂಟೆ, ಅರಕೆರೆ, ಹಗದೂರು ಸೇರಿದಂತೆ ಅನೇಕ ಕಡೆಗಳಲ್ಲಿ ಚದುರಿದಂತೆ ಮಳೆ ಆಗಿದೆ.

Bengaluru City May See Generally Coudy Sky And Light Rain Till July 27th

ಈ ಬಾರಿ ನೈರುತ್ಯ ಮುಂಗಾರು ತಡವಾಗಿ ಆಗಮಿಸಿದರು ಸಹಿತ ಬೆಂಗಳೂರಿಗೆ ಪ್ರತಿ ವರ್ಷದಂತೆ ಈ ಬಾರಿ ಹೇಳಿಕೊಳ್ಳುವಂತಹ ದೊಡ್ಡ ಮಳೆಗಳು ಅಷ್ಟಾಗಿ ಬಂದಿಲ್ಲ. ನಿತ್ಯ ಮೋಡ ಕವಿದ ವಾತಾವರಣ, ಚಳಿ ಇದ್ದರೂ ಸಹಿತ ಸಂಜೆ ನಂತರ ಮಳೆ ಬರುತ್ತಿತ್ತು. ಇದಾದ ಬಳಿಕ ಕೆಲವು ದಿವಸಗಳಿಂದ ಮಳೆ ಮರೆಯಾಗಿದ್ದು, ಭಾನುವಾರ ನಗರದಲ್ಲಿ ಅಲ್ಲಲ್ಲಿ ಸುರಿಯಿತು ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ರಾಜ್ಯದ ಮಳೆ ಮುನ್ಸೂಚನೆ
ಕರ್ನಾಟಕದ ಕರಾವಳಿಯಲ್ಲಿ ಬಹುದಿನಗಳಿಂದಲೂ ದಾಖಲಾಗಿದ್ದ ಮಳೆ, ಉತ್ತರ ಒಳನಾಡಿಗೂ ವಿಸ್ತರಿಸಿದೆ. ಇದೀಗ ಉತ್ತರ ಒಳನಾಡಿನಲ್ಲಿ ವಾರದಿಂದಲೂ ದಿನ 24 ಗಂಟೆಯೂ ಸುರಿಯುತ್ತಿದೆ. ಇಂದು ಮತ್ತು ನಾಳೆ ಕರಾವಳಿಯ ಮೂರು ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿದೆ. ಮುಂದಿನ ಐದು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಮುಂದುವರಿಯಲಿದೆ.

ಇನ್ನೂ ಒಳನಾಡಿನ ಬೆಳಗಾವಿ, ಗದಗ, ಹಾವೇರಿ, ವಿಜಯಪುರ, ಬೀದರ್ ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+