ಬೆಂಗಳೂರು ನೀರು ಸರಬರಾಜು ಮಂಡಳಿ ಅಗೆದಿದ್ದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು
ಬೆಂಗಳೂರು ಏಪ್ರಿಲ್ 18: ಬೆಂಗಳೂರು ನೀರು ಸರಬರಾಜು ಮಂಡಳಿ ಅಗೆದಿದ್ದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಮಾಗಡಿ ಸಮೀಪದ ದೊಡ್ಡಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಎರಡೂವರೆ ವರ್ಷ ವಯಸ್ಸಿನ ಮಗುವಿನ ಹೆಸರು ಕಾರ್ತಿಕ್. ನೀರಿನ ಪೈಪ್‌ಲೈನ್ ಅಳವಡಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಹೊಂಡವನ್ನು ಅಗೆದಿತ್ತು. ಇಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ತಿಕ್ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಹೊಂಡಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮಗುವಿನ ತಂದೆ ಉತ್ತರ ಪ್ರದೇಶದಿಂದ ವಲಸೆ ಬಂದಿರುವ ಹನುಮಂತ ವೃತ್ತಿಯಲ್ಲಿ ಪೇಂಟರ್ ಆಗಿದ್ದಾರೆ. ಮಗು ಮಾಗಡಿ ರಸ್ತೆಯ ದೊಡ್ಡಗೊಲ್ಲರಹಟ್ಟಿಯಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಮನೆಯ ಹೊರಗೆ ಆಟವಾಡಲು ಹೋಗಿದೆ. ಹನುಮಂತ ಹೊರಗೆ ಕೆಲಸಕ್ಕೆ ಹೋಗಿದ್ದರು. ಬೆಳಿಗ್ಗೆ 10.30 ರ ಸುಮಾರಿಗೆ ಮಗು ಕಾರ್ತಿಕ್ ಅಗೆದ ಹೊಂಡದಲ್ಲಿ ಬಿದ್ದಿದೆ ಎಂದು ಹೆಂಡತಿಯಿಂದ ಕರೆ ಬಂದಿತು ಕೂಡಲೇ ಮನೆಗೆ ಬರುವಂತೆ ಹನುಮಂತಗೆ ಹೇಳಿದ್ದಾಳೆ. ಸ್ಥಳಕ್ಕಾಗಮಿಸಿ ಸುತ್ತಮುತ್ತಲಿನವರ ಸಹಾಯದಿಂದ ಮಗುವನ್ನು ಹೊರತೆಗೆದಾಗ ಪ್ರಜ್ಞೆ ಕಳೆದುಕೊಂಡಿತ್ತು.
ಹೊಂಡದ ಸುತ್ತಲೂ ಯಾವುದೇ ಎಚ್ಚರಿಕೆ ಫಲಕಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲದಿರುವುದು ಅಹಿತಕರ ಘಟನೆಗೆ ಕಾರಣವಾಯಿತು. ಈ ವಿಚಾರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.
ತನ್ನ ಮಗುವಿನ ಸಾವಿಗೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ ಎಂದು ಹನುಮಂತನು BWSSB ಇಂಜಿನಿಯರ್ ಮತ್ತು ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿರುವ BWSSB ನಂತಹ ನಾಗರಿಕ ಏಜೆನ್ಸಿಗಳು ಈ ಹಿಂದೆ ಇದೇ ರೀತಿಯ ಘಟನೆಗಳಿಗಾಗಿ ಟೀಕೆಗೆ ಒಳಗಾಗಿದ್ದವು. ಅವುಗಳು ಮಾಡುತ್ತಿರುವ ಕಳಪೆ ಕೆಲಸ ಮತ್ತು ನಿರ್ಲಕ್ಷ್ಯದಿಂದ ಹಲವರ ಪ್ರಾಣಕ್ಕೆ ಕುತ್ತು ಬಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.












Click it and Unblock the Notifications