Bangaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ದಿನಾಂಕ ಮತ್ತೆ ಮುಂದೂಡಿಕೆ

Bangaluru-Chennai Expressway: ಕರ್ನಾಟಕದ ಮೂಲಕ ಹಾದುಹೋಗುವ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಕ್ತಾಯದ ದಿನಾಂಕ ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಲೇ ಇದೆ. ಹಾಗಾದ್ರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಈಗಾಗಲೇ ಕರ್ನಾಟಕ ಭಾಗದಲ್ಲಿ ಮುಕ್ತಾಯವಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಇದರ ಉದ್ಘಾಟನೆ ದಿನಾಂಕ ಮಾತ್ರ ಮುಂದೂಡಿಕೆಯಾಗುತ್ತಲಿದ್ದು, ಇದೀಗ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

Bengaluru-Chennai Expressway Work Completion Delayed Likely to be Open in 2028 What is The Reason

ಬಹುನಿರೀಕ್ಷಿತ 263 ಕಿಲೋ ಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7) ಕಾಮಗಾರಿ ಪೂರ್ಣಗೊಳ್ಳುವುದು ಮತ್ತೆ ಮತ್ತೊಂದು ವರ್ಷ ವಿಳಂಬವಾಗಲಿದೆ. ಈ ಗ್ರೀನ್‌ಫೀಲ್ಡ್‌ ಯೋಜನೆಯ ಎಕ್ಸ್‌ಪ್ರೆಸ್‌ವೇ 2028ರಲ್ಲಿ ವಾಹನ ಸಂಚಾರಕ್ಕೆ ಪೂರ್ಣಪ್ರಮಾಣದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಳಂಬಕ್ಕೆ ಪ್ರಮುಖ ಕಾರಣಗಳು

* ತಮಿಳುನಾಡಿನ ಕಾಂಚೀಪುರಂ ಮತ್ತು ಅರಕ್ಕೋಣಂ ನಡುವಿನ 25.5 ಕಿಲೋ ಮೀಟರ್ ಉದ್ದದ ಮಾರ್ಗದ ಕಾಮಗಾರಿ ವಿಳಂಬವಾಗಿದೆ. ಈ ಭಾಗದಲ್ಲಿ ಕೆಲಸ ವಹಿಸಿಕೊಂಡಿದ್ದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ಕಾಮಗಾರಿಯು ಶೇಕಡಾ 53ರಷ್ಟು ಮಾತ್ರ ಪೂರ್ಣಗೊಂಡು ಸ್ಥಗಿತಗೊಂಡಿತ್ತು.

* ಹೊಸ ಟೆಂಡರ್ ಮತ್ತು ಕಾನೂನು ಪ್ರಕ್ರಿಯೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಳೆಯ ಒಪ್ಪಂದವನ್ನು ರದ್ದುಗೊಳಿಸಿ, ಉಳಿದ ಕಾಮಗಾರಿಗೆ ಸುಮಾರು 633 ಕೋಟಿ ರೂಪಾಯಿಯ ಹೊಸ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ. ಹೊಸ ಗುತ್ತಿಗೆದಾರರಿಗೆ ಈ ಕಾಮಗಾರಿ ಪೂರ್ಣಗೊಳಿಸಲು ಸುಮಾರು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕೆಲ ಕಾನೂನು ಪ್ರಕ್ರಿಯೆಗಳು ಸಹ ಯೋಜನೆಯ ವೇಗವನ್ನು ತಗ್ಗಿಸಿವೆ.

* ತಮಿಳುನಾಡು ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಮತ್ತು ಹೈಟೆನ್ಷನ್ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಸೂಕ್ತ ಅನುಮತಿ ತಡವಾಗುತ್ತಿರುವುದು ಕಾಮಗಾರಿಗೆ ಅಡ್ಡಿಯಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು % ಕಾಮಗಾರಿ ಮುಕ್ತಾಯ?

* ಕರ್ನಾಟಕದ ವ್ಯಾಪ್ತಿಗೆ ಬರುವ ಬೆಂಗಳೂರು-ಮಾಲೂರು, ಮಾಲೂರು-ಬಂಗಾರಪೇಟೆ ಮತ್ತು ಬಂಗಾರಪೇಟೆ-ಬೇತಮಂಗಲ ಭಾಗದ ಕಾಮಗಾರಿಗಳು ಈಗಾಗಲೇ ಸಂಪೂರ್ಣವಾಗಿ ಪೂರ್ಣಗೊಂಡಿವೆ.

ಕರ್ನಾಟಕದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ

1. ಹೊಸಕೋಟೆ-ಮಾಲೂರು: 27.1 ಕಿಲೋ ಮೀಟರ್
2. ಮಾಲೂರು-ಬಂಗಾರಪೇಟೆ: 27.1 ಕಿಲೋ ಮೀಟರ್
3. ಬಂಗಾರಪೇಟೆ-ಬೇತಮಂಗಲ: 17.5 ಕಿಲೋ ಮೀಟರ್

* ಆಂಧ್ರಪ್ರದೇಶ ಮತ್ತು ತಮಿಳುನಾಡು: ಆಂಧ್ರಪ್ರದೇಶದ ಬಹುತೇಕ ಭಾಗಗಳು ಮತ್ತು ತಮಿಳುನಾಡಿನ ವಾಲಾಜಾಪೇಟೆ ಹಾಗೂ ಶ್ರೀಪೆರಂಬುದೂರ್ ಸುತ್ತಮುತ್ತಲಿನ ಭಾಗಗಳ ಕಾಮಗಾರಿ ಶೇಕಡ 90 ರಿಂದ 98 ರಷ್ಟು ಪೂರ್ಣಗೊಂಡಿದೆ.

ಯೋಜನೆಯ ಮಹತ್ವ ಮತ್ತು ಪ್ರಯೋಜನಗಳು

* ಪ್ರಯಾಣ ಸಮಯ ಕಡಿತ: ಪ್ರಸ್ತುತ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣಕ್ಕೆ 7 ರಿಂದ 8 ಗಂಟೆಗಳ ಸಮಯ ಹಿಡಿಯುತ್ತದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ ಸಂಚಾರ ಸಮಯ ಕೇವಲ 2.5 ರಿಂದ 3 ಗಂಟೆಗಳಿಗೆ ಇಳಿಕೆಯಾಗಲಿದೆ.

* ಈಗ ಇರುವ ರಸ್ತೆಗಳ ದೂರವನ್ನು 340-350 ಕಿಕೋ ಮೀಟರ್‌ನಿಂದ ಸುಮಾರು 258 ಕಿ.ಮೀಟರ್‌ಗೆ ಕಡಿಮೆ ಮಾಡಲಿದೆ.

* ಆರ್ಥಿಕ ಪ್ರಗತಿ: ದಕ್ಷಿಣ ಭಾರತದ ಈ ಪ್ರಮುಖ ನಗರಗಳ ನಡುವೆ ಕೈಗಾರಿಕಾ ಕಾರಿಡಾರ್‌ಗಳ ಬೆಳವಣಿಗೆ, ಸರಕು ಸಾಗಣೆ ಹಾಗೂ ಇಂಧನ ಉಳಿತಾಯಕ್ಕೆ ಈ ಯೋಜನೆಯು ತುಂಬಾ ಸಹಾಕಾರಿಯಾಗಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ ಕರ್ನಾಟಕ-ಆಂಧ್ರಪ್ರದೇಶ ಹಾಗೂ ತಮಿಳುನಾಡು ನಡುವೆ ಸಂಚರಿಸುವ ವಾಹನ ಸವಾರರಿಗೆ ತುಂಬಾ ಅನುಕೂಲ ಆದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+