ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಟೋಲ್‌ ಸಂಗ್ರಹ ಆರಂಭ: ಯಾವ ವಾಹನಗಳಿಗೆ ಎಷ್ಟು? ಇಲ್ಲಿದೆ ಮಾಹಿತಿ

Bengaluru-Chennai Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಿದೆ. ಮತ್ತೊಂದೆಡೆ, ಕೆಲ ಎಕ್ಸ್‌ಪ್ರೆಸ್‌ವೇ ಗಳು ಕಾಮಗಾರಿ ಹಂತದಲ್ಲಿದ್ದರೆ, ಇನ್ನೂ ಕಲವು ಉದ್ಘಾಟನೆ ಹಂತದಲ್ಲಿವೆ. ಈ ಸಾಲಿನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕೂಡ ಇದ್ದು, ಲೋಕಾರ್ಪಣೆಗೂ ಮುನ್ನವೇ ಟೋಲ್‌ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಯಾವ ವಾಹನಗಳಿಗೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಾಮಾನ್ಯವಾಗಿ ಯಾವುದೇ ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕವೇ ಟೋಲ್‌ ಸಂಗ್ರಹ ಆರಂಭಿಸಲಾಗುತ್ತದೆ. ಆದರೆ, ಕರ್ನಾಟಕದ ಹಲವು ಜಿಲ್ಲೆಗಳ ಮೂಲಕ ಹಾದುಹೋಗುವ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆಯಾಗುವ ಮುನ್ನವೇ ಟೋಲ್‌ ಶುಲ್ಕಗಳನ್ನು ಬಿಡುಗಡೆ ಮಾಡಲಾಗಿತ್ತು. ಎನ್‌ಎಚ್‌ಎಐ ಒಪ್ಪಿಗೆ ನೀಡಿದ ಬಳಿಕವೇ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತು. ಆದರೆ, ಇದೀಗ ಟೋಲ್‌ ಸಂಗ್ರಹ ಆರಂಭವಾಗಿದೆ. ಹಾಗಾದ್ರೆ ಯಾವ ಭಾಗದಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

Bengaluru Chennai Expressway Toll Collection Begins on Karnataka Stretch Before Inauguration

ಕರ್ನಾಟಕ ಭಾಗದಲ್ಲಿನ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ 71 ಕಿಲೋ ಮೀಟರ್ ಪೂರ್ಣಗೊಂಡಿದ್ದು, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ಬಾಕಿ ಉಳಿದ ಕಾರಣ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲೇ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ 2026ರ ಜುಲೈ ವೇಳೆಗೆ ಲೋಕಾರ್ಪಣೆ ಆಗಲಿದೆ.

ಇನ್ನೂ ಈಗಾಗಲೇ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡು ಯಾವುದೇ ಟೋಲ್‌ ಶುಲ್ಕ ಇಲ್ಲದೆ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಇದೀಗ ಟೋಲ್ ಸಂಗ್ರಹ ಆರಂಭ ಆಗಿದೆ. ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇಯ ಹೊಸಕೋಟೆ-ಕೋಲಾರ ಗೋಲ್ಡ್ ಫೀಲ್ಡ್ಸ್ ನಡುವಿನ 71 ಕಿಲೋ ಮೀಟರ್‌ ಮಾರ್ಗವನ್ನು ಬಳಸಲು ಇದೀಗ ಟೋಲ್ ಪಾವತಿ ಮಾಡಬೇಕಿದೆ.

ಈ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭ ಮಾಡಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಭಾಗದಲ್ಲಿ ಮಾರ್ಚ್‌ನಲ್ಲೇ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅನುನು ಮಾಡಿಕೊಡಲಾಗಿತ್ತು.

15,188 ಕೋಟಿ ರೂಪಾಯಿ ವೆಚ್ಚದ 262 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ ವೇನ ಕರ್ನಾಟಕ ಭಾಗದಲ್ಲಿ ವಾಹನ ಸಂಚಾರ ಮಾರ್ಚ್ನಿಂದಲೇ ಆರಂಭ ಆಗಿದೆ. ಹೊಸಕೋಟೆ ಬಳಿಯ ಹೆಡಿಗೆನಬೆಲೆ, ಕೆಜಿಎಫ್‌ ಬಳಿ ಸುಂದರಪಾಳ್ಯ ಏಕಮುಖ ಪ್ರಯಾಣಕ್ಕೆ 185 ರೂಪಾಯಿ ಮತ್ತು ದ್ವಿಮುಖ ಪ್ರಯಾಣಕ್ಕೆ 275 ರೂಪಾಯಿ ನಿಗದಿ ಮಾಡಲಾಗಿದೆ. ಸುಂದರಪಾಳ್ಯದಿಂದ ಹೆಡಿಗೆನಬೆಲೆಗೆ ಏಕಮುಖ ಪ್ರಯಾಣಕ್ಕೆ 190 ರೂಪಾಯಿ ಹಾಗೂ ದ್ವಿಮುಖ ಪ್ರಯಾಣಕ್ಕೆ 280 ರೂಪಾಯಿ ನಿಗದಿಪಡಿಸಲಾಗಿದೆ.

ಯಾವಾ ವಾಹನಗಳಿಗೆ ಎಷ್ಟು?: ಲಘು ಸರಕು ವಾಹನಗಳು, ಮಿನಿ ಬಸ್‌ಗಳು, ಬಸ್‌ಗಳು ಮತ್ತು ಟ್ರಕ್‌ಗಳಂತಹ ಇತರ ವಾಹನಗಳಿಗೆ ಮಾರ್ಗ ಮತ್ತು ಟ್ರಿಪ್‌ ಸಂಖ್ತೆಗಳ ಆಧಾರದ ಮೇಲೆ 295-955ರ ವರೆಗೆ ಹೆಚ್ಚಿನ ದರಗಳನ್ನು ಪಾವತಿ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಹೆಡಿಗೆನಬೆಲೆ, ಅಗ್ರಹಾರ, ಕೃಷ್ಣರಾಜಪುರ, ಸುಂದರಪಾಳ್ಯ ಸೇರಿ ಒಟ್ಟು 4 ಟೋಲ್ ಪ್ಲಾಜಾಗಳು ಇವೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಟೋಲ್‌ ಪ್ಲಾಜಗಳಿವೆ?

* ಹೆಡಿಗೆನಬೆಲೆ
* ಅಗ್ರಹಾರ
* ಕೃಷ್ಣರಾಜಪುರ
* ಸುಂದರಪಾಳ್ಯ

ಫಾಸ್ಟ್‌ಟ್ಯಾಗ್ ಹೊಂದಿರುವವರು ವಾರ್ಷಿಕ 3,000 ರೂಪಾಯಿ ಪಾವತಿಸಿ ಪಾಸ್ ಖರೀದಿ ಮಾಡುವವರು ಪ್ರತಿ ಟ್ರಿಪ್‌ಗೆ ಪಾವತಿ ಮಾಡದೆ ಈ ಮಾರ್ಗವನ್ನು ಬಳಸಬಹುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಆಗಾಗ ಪ್ರಯಾಣ ಮಾಡುವವರಿಗೆ ಕಾರುಗಳಿಗೆ 50 ಏಕಮುಖ ಪ್ರಯಾಣಕ್ಕೆ ಮಾಸಿಕ ಪಾಸ್‌ಗಳ ಬೆಲೆ 6,105 ರೂಪಾಯಿ ಅಥವಾ ದ್ವಿಮುಖ ಪ್ರಯಾಣಕ್ಕೆ 6,260 ರೂಪಾಯಿ ನಿಗದಿ ಮಾಡಲಾಗಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು 6ರಿಂದ ಕೇವಲ 3 ಗಂಟೆಗಳಿಗೆ ಇಳಿಕೆ ಮಾಡಲಿದೆ. ಇದರಿಂದ ಹಲವು ಪ್ರಯೋಜನೆಗಳಿವೆ. ಸಂಚಾರ ದಟ್ಟಣೆ ನಿಯಂತ್ರಣ ಆಗುವುದಲ್ಲದೆ, ಸರಕು ಸಾಗಣೆ ವೆಚ್ಚ ಕಡಿಮೆ ಆಗಲಿದೆ. ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಂತಾಗಲಿದೆ. ಈ ಭಾಗಗಳ ಆಸ್ತಿಗಳಿಗೆ ಚಿನ್ನದ ಬೆಲೆ ಬರಲಿದೆ. ಈಗಾಗಲೇ ದಿನದಿಂದ ದಿನಕ್ಕೆ ಭೂಮಿ ಬೆಲೆ ಏರಿಕೆ ಆಗುತ್ತಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದ್ದು, ಭೂಮಿ ಮಾಲೀಕರು ಕೋಟ್ಯಾಧಿಪತಿಗಳಾಗಳಾಗುವುದರಲ್ಲಿ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+