Bengaluru-Chennai Expressway: ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಯಾವೆಲ್ಲ ಜಿಲ್ಲೆಗಳಲ್ಲಿ ಹಾದುಹೋಗಲಿದೆ? & ಲಾಭಗಳೇನು?
Bengaluru-Chennai Expressway: ದಕ್ಷಿಣ ಭಾರತದ ಎರಡು ಬೃಹತ್ ನಗರಗಳನ್ನು ಸಂಪರ್ಕ ಕಲ್ಪಿಸುವ, ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಿಂದ ಏನಲ್ಲ ಉಪಯೋಗಗಳಾಗಲಿದೆ ಹಾಗೂ ಕರ್ನಾಟಕದ ಯಾವೆಲ್ಲ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಏನೆಲ್ಲಾ ಉಪಯೋಗ?: ಈ ಹೆದ್ದಾರಿಯಿಂದ ಪ್ರಯಾಣದ ಸಮಯವನ್ನು ಕಡಿಮೆ ಆಗಲಿದ್ದು, ಇದು ಕರ್ನಾಟಕ ಮತ್ತು ತಮಿಳುನಾಡು ನಡುವೆ ವ್ಯಾಪಾರ, ಪ್ರವಾಸೋದ್ಯಮದ ಕೇಂದ್ರಗಳ ಅಭಿವೃದ್ಧಿಗೆ ಸಹಾಯ ಆದಂತಾಗುತ್ತದೆ. ಅಲ್ಲದೆ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.

ಯಾವೆಲ್ಲಾ ಮಾರ್ಗಗಳಲ್ಲಿ ಹಾದುಹೋಲಿದೆ?: ಈ ಹೆದ್ದಾರಿಯಿಂದ ಬೆಂಗಳೂರು-ಚನ್ನೈ ನಡುವಿನ 345 ಕಿಲೋ ಮೀಟರ್ ಇರುವ ಅಂತರವನ್ನು 262 ಕಿಲೋ ಮೀಟರ್‌ಗೆ ಇಳಿಕೆಯಾಗಲಿದ್ದು, ಪ್ರಯಾಣದ ಅವಧಿ ಎರಡು ಗಂಟೆಗಳು ಕಡಿಮೆಯಾಗಲಿದೆ. ಇನ್ನು ಇದು ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ.
ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಎಕ್ಸ್‌ಪ್ರೆಸ್‌ವೇ ಕೊನೆಗೊಳ್ಳಲಿದೆ.
ಯಾವೆಲ್ಲಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದೆ?
1. ಹೊಸಕೋಟೆ - ಕರ್ನಾಟಕ
2. ಮಾಲೂರು - ಕರ್ನಾಟಕ
3. ವಿ ಕೋಟಾ - ಆಂಧ್ರ ಪ್ರದೇಶ
4. ಪಲಮನೇರ್ - ಆಂಧ್ರಪ್ರದೇಶ
5. ಗುಡಿಯಾತಂ - ತಮಿಳುನಾಡು
6. ಅರಕ್ಕೋಣಂ - ತಮಿಳುನಾಡು
7. ಶ್ರೀಪೆರಂಬದೂರ್ - ತಮಿಳುನಾಡು
ಹೆದ್ದಾರಿಯ ಪ್ರಮುಖ ವಿಚಾರಗಳು
* ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ನಾಲ್ಕು-ಲೇನ್ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ.
* 262 ಕಿಲೋ ಮೀಟರ್‌ಗಳಲ್ಲಿ 85 ಕಿಲೋ ಮೀಟರ್ ತಮಿಳುನಾಡು, 71 ಕಿಲೋ ಮೀಟರ್ ಆಂಧ್ರಪ್ರದೇಶ ಮತ್ತು 106 ಕಿಲೋ ಮೀಟರ್ ಕರ್ನಾಟಕ ಹೊಂದಿದೆ.
* ಈ ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ಆಗಿದ್ದು, ಇದಕ್ಕೆ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದರು. ಇದರ ಉದ್ಘಾಟನೆ 2024 ವರ್ಷಾಂತ್ಯಕ್ಕೆ ಆಗಲಿದೆ ಎಂದು ಹೆದ್ದಾರಿ ಸಚಿವಾಲಯ ಇತ್ತೀಚೆಗಷ್ಟೇ ತಿಳಿಸಿದೆ.











Click it and Unblock the Notifications