ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ರೈಲ್ವೆ ವೇಳಾಪಟ್ಟಿಯಲ್ಲಿ ಹಲವು ಬದಲಾವಣೆ

|
Google Oneindia Kannada News

ಬೆಂಗಳೂರು, ಮೇ 08 : ಬೆಂಗಳೂರಿನಿಂದ ಹೊರಡುವ ಮತ್ತು ಬೆಂಗಳೂರಿಗೆ ಆಗಮಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಮೇ 10 ಮತ್ತು ಜುಲೈ 1ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿಗೆ ಆಗಮಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಮೇ 10ರಿಂದ ಬದಲಾವಣೆಯಾಗಲಿದೆ. ಅದೇ ರೀತಿ ಬೆಂಗಳೂರಿನಿಂದ ಹೊರಡುವ ರೈಲುಗಳ ಸಮಯ ಜುಲೈ 1ರಿಂದ ಬದಲಾವಣೆಯಾಗಲಿದೆ. [ಬೆಂಗಳೂರು ರೈಲು ನಿಲ್ದಾಣಕ್ಕೆ ಹೊಸ ಹೆಸರು]

Indian Railways

ಬದಲಾವಣೆಯಾದ ರೈಲುಗಳ ವೇಳಾಪಟ್ಟಿ ಇಲ್ಲಿದೆ

* ದಾದರ್-ತಿರುನೇಲ್ವಿ ಎಕ್ಸ್‌ಪ್ರೆಸ್ (11021) ರೈಲು ಯಶವಂತಪುರದಿಂದ ರಾತ್ರಿ 10 ಗಂಟೆ ಬದಲು 9.50ಕ್ಕೆ ಹೊರಡಲಿದೆ. [ರೈಲ್ವೆ ಟಿಕೆಟ್ ಖರೀದಿಗೆ ಮೊಬೈಲ್ ಅಪ್ಲಿಕೇಶನ್]

* ನಿಜಾಮುದ್ದೀನ್-ಕೊಯಮತ್ತೂರು ಎಕ್ಸ್‌ಪ್ರೆಸ್ (12648) ರೈಲು ಯಶವಂತಪುರದಿಂದ ಮಧ್ಯಾಹ್ನ 1.20ರ ಬದಲು, 1 ಗಂಟೆಗೆ ಹೊರಡಲಿದೆ.

* ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಹೊರಡುವ ಲೋಕಮಾನ್ಯ ತಿಲಕ್-ಕೊಯಮತ್ತೂರು ರೈಲು ರಾತ್ರಿ 10.15ರ ಬದಲು 10.10ಕ್ಕೆ ಹೊರಡಲಿದೆ.

* ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಹೊರಡುವ ಮೈಸೂರು-ಮೈಲಾಡು ತುರೈ ಎಕ್ಸ್‌ಪ್ರೆಸ್ ರೈಲು (16232) ಸಂಜೆ 7.05ರ ಬದಲಾಗಿ 7 ಗಂಟೆಗೆ ಹೊರಡಲಿದೆ

ಆಗಮಿಸುವ ರೈಲುಗಳು

* ಕಣ್ಣೂರು-ಯಶವಂತಪುರ (16528) ಎಕ್ಸ್‌ಪ್ರೆಸ್ ರೈಲಯ ಯಶವಂತಪುರ ನಿಲ್ದಾಣಕ್ಕೆ ಬೆಳಗ್ಗೆ 7.40ರ ಬದಲು 8 ಗಂಟೆಗೆ ಬಂದು ತಲುಪಲಿದೆ. (ಮೇ 10ರಿಂದ)

* ಪುದುಚೇರಿ-ಯಶವಂತಪುರ (16574) ಎಕ್ಸ್‌ಪ್ರೆಸ್ ರೈಲು ಯಶವಂತಪುರ ನಿಲ್ದಾಣಕ್ಕೆ ಬೆಳಗ್ಗೆ 8ರ ಬದಲು 8.20ಕ್ಕೆ ಆಗಮಿಸಲಿದೆ. (ಮೇ 10ರಿಂದ)

* ಮೈಲಾಡುರುರೈ-ಮೈಸೂರು ಎಕ್ಸ್‌ಪ್ರೆಸ್ ರೈಲು (16231) ರೈಲು ಮೈಸೂರಿಗೆ ಬೆಳಗ್ಗೆ 8.50ರ ಬದಲು 9 ಗಂಟೆಗೆ ಆಗಮಿಸಲಿದೆ. (ಮೇ 10ರಿಂದ)

English summary
Bangalore city railway station : Train timetable is changed. New timetable came into effect from May 10, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X