Bengaluru: ನಗರದ ಸಮಸ್ಯೆಗಳಿಗೆ ಪರಿಹಾರ ಕೊಡಿ, ₹10 ಲಕ್ಷ ಬಹುಮಾನ ಗೆಲ್ಲಿ
ಬೆಂಗಳೂರು, ನವೆಂಬರ್ 05: ಮಳೆಗಾಲ, ಬೇಸಿಗೆ ಕಾಲ, ಚಳಿಗಾಲದಂತೆ ಬೆಂಗಳೂರು ಮಹಾನಗರದಲ್ಲಿ ಕಾಲ ಕಾಲಕ್ಕೆ ಸಮಸ್ಯೆಗಳು ಬದಲಾಗುತ್ತವೆ. ಮತ್ತದೇ ಸಮಸ್ಯೆಗಳು ಪ್ರತಿ ವರ್ಷ ಪುನರಾವರ್ತನೆ ಆಗುತ್ತವೆ. ಇಂತಹ ಸಮಸ್ಯೆಗಳಿಗೆ ನಿಮ್ಮ ಬಳಿ ಪರಿಹಾರವಿದೆಯೇ?. ಇದ್ದರೆ ನೀವು "ನಮ್ಮ ಬೆಂಗಳೂರು ಚಾಲೆಂಜ್"ನಲ್ಲಿ ಭಾಗವಹಿಸಲು ಕೂಡಲೇ ಅರ್ಜಿ ಸಲ್ಲಿಸಬಹುದು.
ಸಿಲಿಕಾನ್ ಸಿಟಿ ಬೆಂಗಳೂರು ಸಂಚಾರ ದಟ್ಟಣೆ, ಜಲಾವೃತ-ಪ್ರವಾಹ, ಕುಡಿಯುವ ನೀರಿನ ಬಿಕ್ಕಟ್ಟು, ತ್ಯಾಜ್ಯ ವಿಲೇವಾರಿ ಹೀಗೆ ಅನೇಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿಭಿನ್ನ ಆಲೋಚನೆ, ಐಡಿಯಾ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿದೆ ಉತ್ತಮ ಅವಕಾಶ.

ಅನ್‌ಬಾಕ್ಸಿಂಗ್ ಬೆಂಗಳೂರು ಹಾಗೂ WT ಫಂಡ್ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ಸೂಚಿಸುವ ಐದು ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವ "ನಮ್ಮ ಬೆಂಗಳೂರು ಚಾಲೆಂಜ್" ಉಪಕ್ರಮವನ್ನು ಘೊಷಣೆ ಮಾಡಿದೆ.
ಐದು ವ್ಯಕ್ತಿ ಅಥವಾ ಸಮುದಾಯ ಸಂಸ್ಥೆಗಳಿಗೆ ಹಣ
ಬೆಂಗಳೂರಿನ ಸಮಸ್ಯೆಗಳಿಗೆ ಉತ್ತಮ ಐಡಿಯಾ ನೀಡುವ 5 ವ್ಯಕ್ತಿಗಳು ಅಥವಾ ಸ್ಟಾರ್ಟ್‌ಅಪ್ ಅಥವಾ ಸಮುದಾಯ ಸಂಸ್ಥೆಗಳು ತಲಾ 10 ಲಕ್ಷ ರೂಪಾಯಿಗಳ ಅನುದಾನಕ್ಕಾಗಿ ಆಯ್ಕೆ ಆಗಲಿವೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ಈ ಉಪಕ್ರಮದ ಬಗ್ಗೆ ಮಾತನಾಡಿದ ಅನ್‌ಬಾಕ್ಸಿಂಗ್ ಬೆಂಗಳೂರಿನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಮಾಲಿನಿ ಗೋಯಲ್ ಅವರು, ಈ ವಿನೂತನ ಉಪಕ್ರಮದ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ನಗರ ನಮಗೆ ಸಾಕಷ್ಟು ನೀಡಿದೆ. ಅದಕ್ಕೆ ಪರ್ಯಾಯವಾಗಿ ನಾವೂ ನಗರದ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಕೊಡುಗೆ ನೀಡಲು ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದು ತಿಳಿಸಿದರು.

ಬದುಕು ನೀಡಿದ ಬೆಂಗಳೂರಿಗೆ ಕೊಡುಗೆ ಕೊಡೋಣ
WT ಫಂಡ್‌ಉದ್ಯಮಿ ನಿಖಿಲ್ ಕಾಮತ್ ಅವರು, ಈ ಮಹಾನಗರ ನನಗೆ ಎಲ್ಲವನ್ನೂ ನೀಡಿದೆ, ಮುಂದೆ ಬೆಳೆಯಬೇಕು ಎನ್ನುವ ಹಸಿವು ಸಹ ನೀಡಿದೆ. ಈ ಬೆಂಗಳೂರು ಸುಂದರವನ್ನಾಗಿ ಉಳಿಸಿಕೊಂಡು ಹೋಗಲು ಈಗಿರುವ ಒಂದಷ್ಟು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿ.ದೆ ಈ ನಿಟ್ಟಿನಲ್ಲಿ 'ಬೆಂಗಳೂರು ಚಾಲೆಂಜ್'' ಅನ್ನು ಜನಸಾಮಾನ್ಯರ ವಿಭಿನ್ನ ಆಲೋಚನೆಗೆ ಬಿಡಲಾಗಿದೆ ಎಂದು ಅವರು ಹೇಳಿದರು.
ಐಡಿಯಾವುಳ್ಳವರು ಅರ್ಜಿ ಸಲ್ಲಿಸುವುದು ಹೇಗೆ?
ನಮ್ಮ ಬೆಂಗಳೂರು ಚಾಲೆಂಜ್‌ಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನಾವೀನ್ಯತೆ, ಪ್ರಭಾವ, ಕಾರ್ಯಸಾಧ್ಯತೆ, ಸ್ಕೇಲೆಬಿಲಿಟಿ ಮತ್ತು ಬದ್ಧತೆಯ ಆಧಾರದ ಮೇಲೆ ಅವರ ಐಡಿಯಾಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಚ್ಚಿಸುವವರು ಅನ್‌ಬಾಕ್ಸಿಂಗ್ ಬೆಂಗಳೂರಿನ ಅಧಿಕೃತ ವೆಬ್‌ಸೈಟ್ https://www.unboxingblr.com/ ನಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು.
ಅರ್ಜಿಯಲ್ಲಿ ತಮ್ಮ ಸ್ವವಿವರ ಮತ್ತು ಅವರ ಐಡಿಯಾಗಳ ಪರಿಚಯಿಸುವ ಕಿರು ವೀಡಿಯೊವನ್ನು ಸಲ್ಲಿಸಬೇಕು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವರ್ಚುವಲ್ ಇಂಟರ್‌ವ್ಯೂಗಳಿಗೆ ಆಹ್ವಾನಿಸಲಾಗುತ್ತದೆ. ಇದರಲ್ಲಿ ಆಯ್ಕೆಯಾಗುವ ಟಾಪ್ 5 ಅರ್ಜಿದಾರ ವಿಜೇತರಿಗೆ ತಲಾ 10 ಲಕ್ಷ ರೂ.ಗಳ ಅನುದಾನ/ ಬಹುಮಾನ ಪಡೆಯುತ್ತಾರೆ.
ನವೆಂಬರ್ 30 ರಿಂದ ಡಿಸೆಂಬರ್ 15ರವರೆಗೆ ನಡೆಯಲಿರುವ ಬೆಂಗಳೂರು ಹಬ್ಬದಲ್ಲಿ ನಡೆಯಲಿರುವ ಕಾರ್ಯಾಗಾರಗಳಲ್ಲಿಯೂ ಸಹ ಆಯ್ಕೆಯಾದ ಐಡಿಯಾಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಹಬ್ಬದ ಕೊನೆಗೆ ವಿಜೇತರನ್ನು












Click it and Unblock the Notifications