RRR Program: ಜಲಮೂಲಗಳ ಪುನಶ್ಚೇತನಕ್ಕೆ 'RRR ಜನಾಂದೋಲನ': BWSSB
ಬೆಂಗಳೂರು, ಏಪ್ರಿಲ್ 10: ಬೆಂಗಳೂರಿನ ಜಲಮೂಲಗಳನ್ನ ಪುನಶ್ಚೇತನಗೊಳಿಸುವ ಮೂಲಕ ನಗರವನ್ನು ಮುಂದಿನ ಎರಡು ವರ್ಷದ (2026) ಒಳಗಾಗಿ ವಾಟರ್ ಸರ್‌ಪ್ಲಸ್ ಮಾಡಲು ಜಲಮಂಡಳಿ ತಿಳಿಸಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 'ತ್ರಿಬ್ಬಲ್ಆರ್ ಜನಾಂದೋಲನ' ಆರಂಭಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಬುಧವಾರ ಬೆಂಗಳೂರಿನ 'ಅರ್ಕಾವತಿ' ಮತ್ತು 'ವೃಷಭಾವತಿ' ನದಿ ಪಾತ್ರದ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಈ ಜನಾಂದೋಲನಕ್ಕೆ ಬೆಂಗಳೂರು ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸುವಂತೆ ಅವರು ಕರೆ ನೀಡಿದರು.

ಅರ್ಕಾವತಿ-ವೃಷಭಾವತಿ ನೀರಿನ ಸಂಪರ್ಕಕ್ಕೆ ತೊಂದರೆ
ನಗರದ ಪ್ರಮುಖ ಜಲಾಶಗಳಾದ ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದೆ ಎಂಬುದನ್ನು ಅಧಿಕಾರಿಗಳು ಗಮನಿಸಿದರು. ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಇಂದು ವೃಷಭಾವತಿ ಹಾಗೂ ಅರ್ಕಾವತಿ ವ್ಯಾಲಿಯಲ್ಲಿನ ನೀರಿನ ಹರಿವಿನ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಕೆರೆಗಳ ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರೀಕರ ಪಾತ್ರವೂ ಬಹಳ ಮುಖ್ಯವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪುನರುಜ್ಜೀವನಕ್ಕೆ ಕೈಜೋಡಿಸಬೇಕು ಎಂದರು.
ಮಳೆ ನೀರು ಕೊಯ್ಲು-ಮರುಪೂರಣಕ್ಕೆ ಒತ್ತು
ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ಹಾಗೂ ಅದರ ಮರುಪೂರಣ ಕಡ್ಡಾಯಗೊಳಿಸಲಾಗಿದೆ. ಆದರೆ, ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರನ್ನ ಕೊಯ್ಲು ಅಳವಡಿಸಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆ ಕಲ್ಪಿಸಿರುವುದಿಲ್ಲ.

ಹೀಗಾಗಿ ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿರುವಂತಹ ಹಾಗೂ ಆ ನೀರಿನ ಸದ್ಬಳಕೆ (ಮರುಪೂರಣ ಅಥವಾ ಬಳಕೆ) ಮಾಡಲು ವ್ಯವಸ್ಥೆ ಮಾಡಿರುವಂತಹ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದಕ್ಕೆ "ಹೆಮ್ಮೆಯ ಬೆಂಗಳೂರು ನಾಗರಿಕ" ಎನ್ನುವ ಅಭಿಯಾನವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ರೈನ್ ವಾಟರ್ ರಿಚಾರ್ಜಿಂಗ್
ಈ ಅಭಿಯಾನದ ಮೂಲಕ ಸಮರ್ಪಕವಾಗಿ ರೈನ್ ವಾಟರ್ ರಿಚಾರ್ಜಿಂಗ್ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿಯ ವತಿಯಿಂದ ನಮ್ಮ "ಹೆಮ್ಮೆಯ ಬೆಂಗಳೂರು ನಾಗರೀಕ" ಎನ್ನುವ ಭಿತ್ತಿಪತ್ರವನ್ನು (ಸ್ಟಿಕ್ಕರ್ ಅನ್ನ) ಅಂಟಿಸಲಾಗುವುದು ಹಾಗೂ ಅವರ ನೀರಿನ ಬಿಲ್‌ನಲ್ಲೂ ಹೆಮ್ಮೆಯ ಬೆಂಗಳೂರು ನಾಗರೀಕ ಎನ್ನುವುದನ್ನ ನಮೂದಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬರೋಬ್ಬರಿ 185 ಕೆರೆಗಳ ಪುನಶ್ಚೇತನಕ್ಕೆ ನಿರ್ಧಾರ
ಬೆಂಗಳೂರಿನಲ್ಲಿ ನೂರಾರು ಕೆರೆಗಳು ಇದ್ದವು ಎಂದು ಇತಿಹಾಸ ಹೇಳುತ್ತದೆ. ಒತ್ತುವರಿ ಆಗಿ ಆಗಿ ಕೆರೆಗಳ ಸಂಖ್ಯೆ ಕಡಿಮೆ ಆಗಿದೆ. ಹಾಲಿ ಇರುವ ಕೆರೆಗಳ ಪೈಕಿ 185 ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ 15 ಕ್ಕೂ ಹೆಚ್ಚು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವಂತಹ 185 ಕೆರೆಗಳನ್ನು ಪುನಃಶ್ಚೇತನಗೊಳಿಸುವುದು ಜಲಮಂಡಳಿಯ ಗುರಿಯಾಗಿದೆ. ಅವುಗಳಲ್ಲಿನ ಹೂಳು ತೆಗೆಯುವುದು, ಉತ್ತಮ ನೀರನ್ನ ತುಂಬಿಸುವುದು ಈ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರು ವಿವರಿಸಿದರ.
RRR ಕಾರ್ಯಕ್ರಮಗಳ ಪಟ್ಟಿ
* ರಿವೈವಲ್ ಆಫ್ ಅರ್ಕಾವತಿ ಮತ್ತು ವೃಷಭಾವತಿ
* ರಿಚಾರ್ಜಿಂಗ್ ಆಫ್ ರೈನ್ ವಾಟರ್ ಗೆ ಪ್ರೋತ್ಸಾಹ
* ನಗರದ 185 ಕೆರೆಗಳ ರಿಜ್ಯೂವಿನೇಷನ್
-
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ












Click it and Unblock the Notifications