ಬೆಂಗಳೂರಲ್ಲಿ ಒಂದೆರೆಡು ಮಳೆಗೆ ಈ ಅವಸ್ಥೆ, ಮಳೆಗಾಲ ಕಳೆಯೋದ್ಹೇಗೆ?

ಬೆಂಗಳೂರು, ಮೇ 14: ರಾಜಧಾನಿಯದ್ದು ಎಂಥಾ ಅವಸ್ಥೆ ಸ್ವಾಮಿ, ಒಂದು ಮಳೆ ಬರುವ ಹಾಗಿಲ್ಲ ನೀರೆಲ್ಲಾ ನಿಂತಲ್ಲೇ ನಿಂತು ಬಿಡುತ್ತದೆ. ಇನ್ನು ಕರೆಂಟ್ ಬಗ್ಗೆ ಅಂತೂ ಮಾತಾಡೋ ಹಾಗೆ ಇಲ್ಲ. ಯಾವಾಗ ಬೆಸ್ಕಾಂಗೆ ಕರೆ ಮಾಡಿದ್ರೂ ಈಗ ಒಂದರ್ಧ ಗಂಟೇಲಿ ಬರುತ್ತೆ ಎಂದು ಹೇಳಿ 2 ತಾಸು ಆದ್ರೂ ಕರೆಂಟ್ ಪತ್ತೇನೆ ಇರೊಲ್ಲ.

ಇನ್ನೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ ಎಂದರೆ ಮಳೆಗಾಲ ನಿರ್ವಹಣೆ ಮಾಡುವುದಂತೂ ತುಂಬಾನೆ ಕಷ್ಟ. ಮಳೆಯ ನೀರು ಯಾವುದೂ ಚರಂಡಿ ನೀರು ಯಾವುದು ಎಂದು ಗುರುತು ಸಿಗುವುದಿಲ್ಲ ಎಲ್ಲವೂ ಮಿಶ್ರಣವಾಗಿ ರಸ್ತೆಯಲ್ಲಿ ತುಂಬಿಕೊಂಡಿದೆ.

ಸೋಮವಾರ ನಗರದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಬಿಟಿಂಎ ಲೇಔಟ್‌ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ನೀರು ನುಗ್ಗುವುದು ಹೊಸತೇನಲ್ಲ 2016ರ ಮಳೆಯಲ್ಲಿಯೂ ಬಿಟಿಎಂ ಲೇಔಟ್ ಸಂಪೂರ್ಣ ಜಲಾವೃತವಾಗಿತ್ತು.

Bengaluru BTM layout inundated after Monday rain

ಬಿಟಿಎಂ ಲೇಔಟ್‌ನ ಆರನೇ ಹಂತ 29ನೇ ಮುಖ್ಯರಸ್ತೆ, ಬಿಳೇಕಳ್ಳಿ ಮುಖ್ಯರಸ್ತೆ ಸೇರಿದಂತೆ ಅನೇಕ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಸುಮಾರು 2 ಅಡಿಗಳಷ್ಟು ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಸಮಸ್ಯೆಗಳು ಹೊಸದಲ್ಲ ಆದರೆ ಅದಕ್ಕೆ ಶಾಶ್ವತ ಪರಿಹಾರವನ್ನು ಕೊಡಿಸುವಲ್ಲಿ ಬಿಬಿಎಂಪಿ ಸೋತಿದೆ ಅಷ್ಟೆ.

ಕೋಡಿ ಚಿಕ್ಕನಹಳ್ಳಿಯಲ್ಲಿ ಸುರಿದ ಮಳೆಯಿಂದ ಅಂಗನವಾಡಿಯೊಂದು ಜಲಾವೃತಗೊಂಡಿದೆ. ಆಹಾರ ಪದಾರ್ಥಗಳೆಲ್ಲವೂ ನೀರು ಪಾಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+