Bengaluru: ಪತಿಯ ಫೋನ್‌ನಿಂದ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ: ಪತ್ನಿ ಕೊಟ್ಟ ಕಾರಣ ಕೇಳಿ ಗಂಡ ಶಾಕ್!
ಬೆಂಗಳೂರು ಡಿಸೆಂಬರ್ 5: 32 ವರ್ಷದ ಗೃಹಿಣಿಯೊಬ್ಬಳು ತನ್ನ ಪತಿಯ ಫೋನ್‌ನಿಂದ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ ಘಟನೆ ಆನೇಕಲ್‌ನಲ್ಲಿ ನಡೆದಿದೆ. ಇದಕ್ಕೆ ಕಾರಣ ತಿಳಿದು ಪತಿ ಶಾಕ್ ಆಗಿದ್ದಾರೆ.
ಹೀಗೆ ಬೆದರಿಕೆ ಸಂದೇಶವನ್ನು ಪೊಲೀಸರಿಗೆ ಕಳುಹಿಸಿದ ಆರೋಪಿಯನ್ನು ಆನೇಕಲ್ ಪಟ್ಟಣದ ಮಾರುತಿ ಬಡಾವಣೆ ನಿವಾಸಿ ವಿದ್ಯಾರಾಣಿ ಎಂದು ಗುರುತಿಸಲಾಗಿದೆ. ಎಫ್‌ಐಆರ್‌ನ ಪ್ರಕಾರ, ಮಹಿಳೆಯು ತನ್ನ ಗಂಡನ ಫೋನ್‌ನಿಂದ ಸುಳ್ಳು ಸಂದೇಶವನ್ನು ಕಳುಹಿಸಿದ್ದಾಳೆ. ಆರೋಪಿ ಇದಕ್ಕೆ ಕಾರಣವನ್ನೂ ಪೊಲೀಸರ ಮುಂದೆ ಹಂಚಿಕೊಂಡಿದ್ದಾಳೆ.

ಆರೋಪಿ ವಿದ್ಯಾರಾಣಿ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬನನ್ನು ಭೇಟಿಯಾಗಿದ್ದಳು. ಇವರಿಬ್ಬರೂ ನಿಯಮಿತವಾಗಿ ಮಾತನಾಡಿದ್ದಾರೆ. ವಿದ್ಯಾರಾಣಿಯ ಪತಿ ಕಿರಣ್ ಮಲ್ಲಪ್ಪ ಅರಗಿ ಅವರು ಆನ್‌ಲೈನ್‌ನಲ್ಲಿ ಪರಿಚಯವಾದ ಪುರುಷರೊಂದಿಗೆ ಚಾಟ್ ಮಾಡುತ್ತಿದ್ದಾರೆ ಎಂದು ತಿಳಿದ ನಂತರ ವಿದ್ಯಾರಾಣಿ ಅವರ ಫೋನ್ ಅನ್ನು ಒಡೆದು ಹಾಕಿದ್ದರು.
ತನ್ನ ಪತಿ ಫೋನ್ ಒಡೆದಿರುವ ಬಗ್ಗೆ ಆನ್‌ಲೈನ್‌ನಲ್ಲಿ ಭೇಟಿಯಾದ ರಾಮುಕುಮಾರ್‌ಗೆ ವಿದ್ಯಾ ತಿಳಿಸಿದ್ದಾಳೆ. ಆಗ ನಡೆದಿದ್ದೇ ಈ ಬಾಂಬ್ ಬೆದರಿಕೆ ಸಂದೇಶದ ಸಂಚು. ರಾಮ್ ಕುಮಾರ್ ಅವರ ಸ್ನೇಹಿತ ಅಜಿತ್ ಎಂಬಾತ ವಿದ್ಯಾಗೆ ಸುಳ್ಳು ಸಂದೇಶವನ್ನು ರವಾನಿಸಿದ್ದಾನೆ ಮತ್ತು ಅದನ್ನು ತನ್ನ ಗಂಡನ ಫೋನ್‌ನಿಂದ ಪೊಲೀಸರಿಗೆ ಕಳುಹಿಸುವಂತೆ ಸೂಚಿಸಿದ್ದಾನೆ. ಅಜಿತ್ ಸೂಚಿಸಿದಂತೆ ವಿದ್ಯಾ ಬಾಂಬ್ ಬೆದರಿಕೆ ಸಂದೇಶವನ್ನು ಪೊಲೀಸರಿಗೆ ಕಳುಹಿಸಿದ್ದಾಳೆ.
ಭಾನುವಾರ ವಿಧ್ಯಾ ತನ್ನ ಪತಿಯ ವಾಟ್ಸಾಪ್‌ನಿಂದ ಆರ್‌ಡಿಎಕ್ಸ್ ಸ್ಫೋಟ ನಡೆಯಲಿದೆ ಎಂದು ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಿದ್ದಾಳೆ. ಕಿರಣ್ ಅವರ ನಂಬರ್‌ನಿಂದ ಕಳುಹಿಸಿದ ಸಂದೇಶದ ಬಗ್ಗೆ ಪ್ರಶ್ನಿಸಲು ಪೊಲೀಸರು ಕಿರಣ್ ಮನೆಗೆ ಭೇಟಿ ನೀಡಿದಾಗ ಪತಿಯ ಫೋನ್‌ನಿಂದ ಸುಳ್ಳು ಸಂದೇಶ ಕಳುಹಿಸಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ತನ್ನ ಆನ್‌ಲೈನ್ ಸ್ನೇಹಿತನ ಸಲಹೆಯಂತೆ ತನ್ನ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಸಂದೇಶ ಕಳುಹಿಸಿದ್ದೇನೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.
ಈ ಬಗ್ಗೆ ಕಿರಣ್ ನೀಡಿದ ಮಾಹಿತಿ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ವಿದ್ಯಾರಾಣಿ ಮತ್ತು ಆಕೆ ಆನ್‌ಲೈನ್‌ನಲ್ಲಿ ಭೇಟಿಯಾದ ಇಬ್ಬರು ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್‌ಗಳು 419 (ವಂಚನೆ), 465 (ನಕಲಿ), 201 (ಸಾಕ್ಷಾಧಾರಗಳ ಕಣ್ಮರೆಗೆ ಕಾರಣವಾಗುವುದು), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2008 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ.












Click it and Unblock the Notifications