BMTC Vayu Vajra Bus: ವಾಯು ವಜ್ರ ಬಸ್‌ಗಳ ಸೇವೆಯಲ್ಲಿ ಭಾರಿ ಇಳಿಕೆ, ಈ ಸಂಕಷ್ಟಕ್ಕೆ ಕಾರಣವೇನು?

ಬೆಂಗಳೂರು, ಏಪ್ರಿಲ್ 30: ಕೊರೊನಾ ಪೂರ್ವದಲ್ಲಿ ಸೇವೆ ನೀಡುತ್ತಿದ್ದ ಬೆಂಗಳೂರಿನ ವಾಯು ವಜ್ರ ಬಸ್‌ಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರವೂ ಪ್ರಯಾಣಿಕರನ್ನು ತನ್ನ್ತ ಸೆಳೆಯುವಲ್ಲಿ ಬಿಎಂಟಿಸಿ ವಜ್ರ ಬಸ್‌ಗಳು ವಿಫಲವಾಗಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಿಯೋಜಿಸಿದ್ದ 'ವಾಯು ವಜ್ರ' ಬಸ್‌ಗಳು ವಿಮಾನಯಾನ ಪ್ರಮಾಣಿಕರಿಗೆ, ಐಟಿಬಿಟಿ ಸೇರಿದಂತೆ ಹಲವು ವೃತ್ತಿಪರರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದವು. ಆದರೆ ಕೊರೋನಾ ನಂತರ ಈ ಬಸ್‌ಗಳ ಮಾರ್ಗದಲ್ಲಿ ಇಳಿಕೆ ಆಗಿದೆ. ಮರಳಿ ಪ್ರಯಾಣಿಕರು ವಾಯು ವಜ್ರದತ್ತು ಮುಖ ಮಾಡುತ್ತಿಲ್ಲ ಎಂದು ಕನ್ನಡ ನ್ಯೂಸ್ ಏಟಿನ್ ವರದಿ ಮಾಡಿದೆ.

Bengaluru: BMTC Vayu Vajra buses Service Is Difficult, Revenue Is Low, What Is Reason? Know

ಒಟ್ಟು 800 ವೋಲ್ವೋ ಬಸ್‌ಗಳಲ್ಲಿ ಕೊರೊನಾಗು ಮುನ್ನ ಸುಮಾರು 600ಕ್ಕೂ ಹೆಚ್ಚು ವಜ್ರಗಳನ್ನು ವಿಮಾನ ನಿಲ್ದಾಣ ಹೊರತುಪಡಿಸಿ ಬೇರೆ ಮಾರ್ಗಗಳ ಸೇವೆ ನಿಯೋಜಿಸಲಾಗಿತ್ತು. ಉಳಿದ ವಜ್ರ ಬಸ್‌ಗಳನ್ನು ನಗರದಿಂದ ವಿಮಾನ ನಿಲ್ದಾಣ ನಿಯೋಜಿಸಿತ್ತು. ಅಂದರೆ ಎಲ್ಲ ಬಸ್‌ಗಳು ಕಾರ್ಯ ನಿರ್ವಹಿಸುತ್ತಿದ್ವು. ಆದರೆ ಕೊರೊನಾ ಭೀತಿ ಕಡಿಮೆಯಾಗಿ ಎರಡು ಮೂರು ವರ್ಷವಾದರೂ ಅರ್ಧದಷ್ಟು ಮಾತ್ರವೇ ವಾಯು ವಜ್ರಗಳು ಸಂಚರಿಸುತ್ತಿವೆ.

ಸದ್ಯ ಬಿಎಂಟಿಸಿಯಿಂದ ನಿತ್ಯ ಕೇವಲ 300 ವಾಯು ವಜ್ರ ಬಸ್‌ಗಳು ಮಾತ್ರ ಸೇವೆ ನೀಡುತ್ತಿವೆ. ಇದರಿಂದ ಕೋವಿಡ್ ಪೂರ್ವದಲ್ಲಿ ಈ ಬಸ್‌ಗಳಿಂದ ಗಳಿಸುತ್ತಿದ್ದ ಆದಾಗ ಇದೀಗ ಅರ್ಧಕ್ಕಿಂತಲೂ ಕಡಿಮೆಗೆ ಇಳಿಕೆ ಆಗಿದೆ. ಬಿಎಂಟಿಸಿ ಪ್ರತಿನಿತ್ಯ ಸುಮಾರು 4 ಕೋಟಿಗೆ ರೂಪಾಯಿಯಷ್ಟು ಆದಾಯ ಗಳಿಸುತ್ತದೆ. ಅದರಲ್ಲಿ ವಜ್ರ ಬಸ್ ಪಾಲು ಈ ಮೊದಲು (50 ಲಕ್ಷ ರೂ.) ಶೇಕಡಾ 12.5 ರಷ್ಟಿತ್ತು.

ವಾಯು ವಜ್ರಕ್ಕೆ ಸಂಕಷ್ಟ ಬಂದದ್ದ ಏಕೆ?

ವಿಮಾನ ನಿಲ್ದಾಣಗಳಿಗೆ ಹೊರತಾಗಿ ಬಹುತೇಕ ಬಸ್‌ಗಳು ನಗರದ ಐಟಿ ಕಾರಿಡಾರ್ ಸೇರಿದಂತೆ ದೂರ ಪ್ರದೇಶಗಳಿಗೆ ಸೇವೆ ನೀಡುತ್ತಿದ್ದವು. ಕೊರೊನಾ ನಂತರ ಬಹುತೇಕ ಐಟಿ ಕಂಪನಿಗಳು ವರ್ಕ್‌ ಫ್ರಂ ಹೋಂ (WFH) ಮೊರೆ ಹೋಗಿವೆ. ಈ ಕಾರಣದಿಂದ ಐಟಿ, ಟಕೆ ಕಾರಿಡಾರ್‌ಗಳಲ್ಲಿ ಉದ್ಯೋಗಿಗಳ ಓಡಾಟ ಕ್ಷೀಣಿಸಿದೆ. ಈ ಭಾಗದಲ್ಲಿ ವಜ್ರದ ಸಂಚಾರ ಕಡಿಮೆಯಾಗಲು ಇದು ಸಹ ಕಾರಣ ಎಂದು ನಿಗದಮ ಅಧಿಕಾರಿಗಳು ಅಭಿಪ್ರಾಯಪಟ್ಟರು.

Bengaluru: BMTC Vayu Vajra buses Service Is Difficult, Revenue Is Low, What Is Reason? Know

ಕೋವಿಡ್ ಮುನ್ನಕ್ಕು ಮತ್ತು ನಂತರ ಕಲಾದಲ್ಲಿ ವಜ್ರ ಸವಾರರ ಸಂಚಾರದಲ್ಲಿ ಸಂಪೂರ್ಣ ಬದಲಾವಣೆಗಳು ಆಗಿವೆ.

ಪ್ರಯಾಣಿಕರನ್ನು ಆಕರ್ಷಿಸಲು, ಬಿಎಂಟಿಸಿ 40% ದರವನ್ನು ಕಡಿಮೆ ಮಾಡಿತು. ಅಲ್ಲದೇ ಸೂಕ್ತ ಮಾರ್ಗಗಳಲ್ಲಿ ವಜ್ರದಿಂದ ಸಮರ್ಪಕ ಸೇವೆ ಸಿಗುವಂತೆ ಮಾಡಿದರೂ ಸಹ ಪ್ರಯಾಣಿಕರು ಹೆಚ್ಚಿನ ಪ್ರಯಾಣದಲ್ಲಿ ಈ ಬಸ್‌ಗಳ ಸೇವೆ ಪಡೆಯುತ್ತಿಲ್ಲ. ಇನ್ನೂ ವೈಟ್‌ಫಿಲ್ಡ್‌ ಮೆಟ್ರೋ ಮಾರ್ಗ್ ಆದ ಮೇಲೆ ವಜ್ರಗಳಿಗೆ ಕೆಲಸವೇ ಇಲ್ಲದಾಗಿದೆ ಎಂದರು.

ಅಲ್ಲದೇ ಕೊರೊನಾ ವೈರಸ್ ಭೀತಿಯಿಂದಾಗಿ ಸ್ವಂತ ವಾಹನ, ಇಲ್ಲವೇ ಓಲಾ ಓಬರ್ ನಂತಹ ಸೇವೆಗಳಿಗೆ ಐಟಿ, ಕಾರ್ಪೋರೇಟ್ ಉದ್ಯೋಗಿಗಳು ಮೊರೆ ಹೋಗಿದ್ದಾರೆ. ಇದು ಸಹ ತೊಂದರೆ ನೀಡುತ್ತಿದೆ ಎನ್ನಲಾಗಿದೆ.

ಇನ್ನೂ ನಿತ್ಯ ವಜ್ರ ಬಸ್‌ ಸಂಖ್ಯೆ ನೋಡುವುದಾದರೆ ಮೊದಲ 607 ರಷ್ಟು ಬಸ್‌ ಓಡಾಟವಿತ್ತು, ಅದೀಗ 301ಕ್ಕೆ ಇಳಿಕೆ ಆಗಿದೆ. ಇದರಿಂದ ನಿತ್ಯ ಕೇವಲ 56,876 ಕಿಲೋ ಮೀಟರ್ (ಮೊದಲು 1,07,109ಕಿಮೀ) ಸಂಚರಿಸುತ್ತವೆ. ನಿತ್ಯದ ಆದಾಯ ಈಗ 28.57 ಲಕ್ಷ ರೂಪಾಯಿ ( ಮೊದಲು 50.37 ಲಕ್ಷ ರೂ.) ಪ್ರತಿ ಕೀಮಿ ವೆಚ್ಚದ 90-100 ರೂಪಾಯಿ ಇದೆ. ಪ್ರತಿ ಕಿಮೀ ಗಳಿಕೆ ಈಗ 50.81ರೂಪಾಯಿ (ಮೊದಲು ರೂ 51.95 ರೂ.) ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+