BMTC EV Bus: ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ 4500 ಇವಿ ಬಸ್ ಸಿಗಲಿವೆ...ಯಾವಾಗ?
ಬೆಂಗಳೂರು, ಜುಲೈ 05: ದೇಶದ ಆಯ್ದ ಪ್ರಮುಖ ನಗರ ಸಾರಿಗೆಗಳನ್ನು ಇಂಗಾಲಮುಕ್ತ ಮಾಡಲು ಹಾಗೂ ಪರಿಸರ ಸ್ನೇಹಿ ಸಾರಿಗೆಯಾದ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಹತ್ತು ಸಾವಿರಕ್ಕೂ ಅಧಿಕ ಎಲೆಕ್ಟ್ರಾನಿಕ್ ಬಸ್‌ಗಳ ಟೆಂಡರ್ ಆಹ್ವಾನಿಸಿದೆ. 'ಪ್ರಧಾನಮಂತ್ರಿ ಇ-ಡ್ರೈವ್' ಯೋಜನೆಯಡಿ ಸಾಕಷ್ಟು ಬಸ್‌ಗಳನ್ನು ಖರೀದಿಸಲು ಮುಂದಾಗಿದೆ.
ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳ ಸಾರಿಗೆ ಸುಧಾರಣೆಗೆ ಮುಂದಾಗಿದೆ. ಈಗಾಗಲೇ ಡೀಸೆಲ್, ಪೆಟ್ರೋಲ್ ಇಂಧನ ಚಾಲಿತ ಬಸ್‌ಗಳು ಓಡಾಡುತ್ತಿರುವ ಪರಿಸರ ಕಾಳಜಿ, ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಚಾಲಿತ ಬಸ್‌ಗಳ ಯೋಜನೆ ವಿಸ್ತರಣೆ ಮಾಡಿದೆ. ಅದರ ಫಲವಾಗಿ ಕೇಂದ್ರ ಸರ್ಕಾರ 10,900 ಎಲೆಕ್ಟ್ರಾನಿಕ್ ಬಸ್‌ಗಳ ಖರೀದಿಗೆ ಮುಂದಾಗಿದೆ. ಟೆಂಡರ್ ಆಹ್ವಾನಿಸಿದ್ದು, ವಿವಿಧ ಮಹಾನಗರಗಳಿಗೆ ಖರೀದಿಸಿದ ಬಳಿಕ ಇ-ಬಸ್ ಹಂಚಿಕೆ ಮಾಡಲಿದೆ.

ಸರ್ಕಾರಿ ಸ್ವಾಧೀನ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಕಂಪನಿಯು ಕಳೆದ ಜೂನ್ ಅಂತ್ಯಕ್ಕೆ ಬಸ್ ಗಳ ಖರೀದಿಗಾಗಿ ಟೆಂಡರ್ ಆಹ್ವಾನಿಸಿತ್ತು. ಟೆಂಡರ್‌ನಲ್ಲಿ ಪಾಲ್ಗೊಂಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕಂಪನಿಗಳೂ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ವೆಚ್ಚ ಒಪ್ಪಂದದ ಮಾಡದರಿಯಲ್ಲಿ ಬಸ್ ಒದಗಿಸಲಿವೆ. ಚಾರ್ಜಿಂಗ್, ನಾಗರಿಕ ಮೂಲಸೌಕರ್ಯ, ನಿರ್ವಹಣೆ ಎಲ್ಲವು ಒಳಗೊಂಡಿದೆ. ಆಗಸ್ಟ್ ಎರಡನೇ ವಾರ (ಆ.12) ಬಿಸಡ್‌ಗಳನ್ನು ತೆರೆಯಲಾಗುತ್ತದೆ.
ಬೆಂಗಳೂರಿಗೆ ಎಷ್ಟು ಬಸ್ ಸಿಗಲಿವೆ?
ಭಾರತದ ಐಟಿ ಕೇಂದ್ರ ಕರ್ನಾಟಕ ರಾಜಧಾನಿ ಬೆಂಗಳೂರಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಅತೀ ಹೆಚ್ಚು ಬಸ್‌ಗಳು ಅಂದರೆ 4500 ಇ-ಬಸ್‌ಗಳು ಹಂಚಿಕೆ ಆಗಲಿವೆ. ಇನ್ನುಳಿದಂತೆ ದೇಶದ ರಾಜಧಾನಿ ದೆಹಲಿಗೆ 2800 ಇ-ಬಸ್‌ಗಳು, ಹೈದರಾಬಾದ್‌ಗೆ 2000 ಇ-ಬಸ್‌ಗಳು, ಅಹಮದಾಬಾದ್ ಮತ್ತು ಸೂರತ್‌ಗೆ ಕ್ರಮವಾಗಿ 1100 ಮತ್ತು 600 ಇ-ಬಸ್‌ಗಳನ್ನು ನೀಡಲಿದೆ.
ಜಿಸಿಸಿ ಮಾದರಿಯಲ್ಲಿ ಪ್ರಮುಖ ಮಾದರಿಯಲ್ಲಿ ಉಪಕರಣ ತಯಾರಕ ಕಂಪನಿಗಳು, ಫ್ಲೀಟ್ ಆಪರೇಟರ್‌ಗಳು ಈ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಈ ಎಲ್ ಬಸ್‌ಗಳು ಲಭಿಸಿದರೆ ಸಂಪೂರ್ಣ ಮಹಾನಗರ ಸಾರಿಗೆ ಇಂಗಾಲ ಮುಕ್ತವಾಗಲಿದೆ ಎಂಬುದನ್ನು ಊಹಿಸಬಹುದಾಗಿದೆ.












Click it and Unblock the Notifications