ಆರೋಗ್ಯ ವೃದ್ಧಿ, ವಿಶ್ವಶಾಂತಿಗೆ ಬೆಂಗಳೂರಲ್ಲಿ ಓಟ

ಗಳೂರು, ಸೆಪ್ಟೆಂಬರ್. 21: ವಿಶ್ವಶಾಂತಿ ಜಾಗೃತಿ ಮೂಡಿಸಲು ಆಸ್ಫೋರ್ಟ್ ಇಂಟರ್ ನ್ಯಾಷನಲ್ ಬೆಂಗಳೂರು ಹಾಗೂ ರಾಜಾ ಹೌಸಿಂಗ್ ಲಿಮಿಟೆಡ್ ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಿದ್ದ 'ವರ್ಲ್ಡ್ ಪೀಸ್ ಮ್ಯಾರಥಾನ್ - 2015' ಜನ ಮೆಚ್ಚುಗೆಗೆ ಪಾತ್ರವಾಯಿತು.

ಮ್ಯಾರಥಾನ್ ಗೆ ಬಿಬಿಎಂಪಿ ಮೇಯರ್ ಬಿ ಎನ್ ಮಂಜುನಾಥ ರೆಡ್ಡಿ ಚಾಲನೆ ನೀಡಿದರು. ಕಬ್ಬನ್ ಪಾರ್ಕ್ ನಲ್ಲಿ ಪ್ರತಿ ಭಾನುವಾರ ನಡೆಯುವ ಕಾರ್ಯಕ್ರಮಗಳು ರಚನಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿವೆ. ಇವು ವಿಶ್ವ ಮಾನವತೆ ಬೆಳೆಸುತ್ತಿವೆ ಎಂದು ರೆಡ್ಡಿ ಹೇಳಿದರು.[ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ನೆನಪಿನ ಚಿತ್ರಗಳು]

ವಿಶ್ವ ಶಾಂತಿಯ ಪ್ರಾಮುಖ್ಯತೆ ಅರಿಯಲು ಸೆಪ್ಟೆಂಬರ್ 21 ರಂದು ಅಂತಾಷ್ಟ್ರೀಯ ಶಾಂತಿ ದಿವಸವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಮ್ಯಾರಥಾನ್ ಭಾರತೀಯ ಕ್ರೀಡಾಪಟು ಹಾಗೂ ಫಿಟ್ನೆಸ್ ಕನ್ಸಲ್ಟೆಂಟ್ ಆರ್ ರಘು ಅವರ ಕನಸಿನ ಕೂಸು. ಆರೋಗ್ಯ ವೃದ್ಧಿಯೊಂದಿಗೆ ವಿಶ್ವಶಾಂತಿಗೆ ಬದ್ಧವಾಗಿ ಜೀವನ ನಡೆಸಲು ಈ ಬಗೆಯ ಕಾರ್ಯಕ್ರಮಗಳು ಪ್ರೇರಕ ಎಂದು ರೆಡ್ಡಿ ತಿಳಿಸಿದರು.

ಚಾಲನೆ ನೀಡಿದ ರೆಡ್ಡಿ

ಚಾಲನೆ ನೀಡಿದ ರೆಡ್ಡಿ

ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಆಯೋಜಿಸಿದ್ದ 'ವರ್ಲ್ಡ್ ಪೀಸ್ ಮ್ಯಾರಥಾನ್ - 2015' ನ್ನು ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಉದ್ಘಾಟನೆ ಮಾಡಿದರು. ಕಾಲೇಜು ವಿದ್ಯಾರ್ಥಿಗಳು, ಕಾರ್ಪೋರೇಟ್ ಉದ್ಯೋಗಿಗಳು ಭಾಗವಹಿಸಿದ್ದರು.

ನೆಲ ನರೇಂದ್ರಬಾಬು ಉಪಸ್ಥಿತಿ

ನೆಲ ನರೇಂದ್ರಬಾಬು ಉಪಸ್ಥಿತಿ

ವರ್ಲ್ಡ್ ಪೀಸ್ ಮ್ಯಾರಥಾನ್ - 2015 ನಲ್ಲಿ ಕಾಂಗ್ರೆಸ್ ಮುಖಂಡ ನೆ.ಲ. ನರೇಂದ್ರಬಾಬು ಮತ್ತು ಬಿ ಪ್ಯಾಕ್ ಸದಸ್ಯರು ಹಾಜರಿದ್ದರು. ಬಲೂನು ಹಾರಿಸಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಮೇಯರ್ ವೊಂದಿಗೆ ಸೆಲ್ಫಿ

ಮೇಯರ್ ವೊಂದಿಗೆ ಸೆಲ್ಫಿ

ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ಮಿಸಿದ ವಿದ್ಯಾರ್ಥಿನಿಯರು. ವಿವಿಧ ಕಾಲೇಜುಗಳ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಏರ್ ಫೋರ್ಸ್ ಅಧಿಕಾರಿಗಳು ಭಾಗವಹಿಸಿದ್ದರು.

ಪರಿಸರ ಸಂರಕ್ಷಣೆ ನಮ್ಮ ಹೊಣೆ

ಪರಿಸರ ಸಂರಕ್ಷಣೆ ನಮ್ಮ ಹೊಣೆ

ಪರಿಸರ ಸಂರಕ್ಷಣೆ, ಆರೋಗ್ಯ ವೃದ್ಧಿ, ವಿಶ್ವಶಾಂತಿಗಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ರಾಜಕಾರಣಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೇಯರ್ ಸಹ ವಿದ್ಯಾರ್ಥಿಗಹಳೊಂದಿಗೆ ಕೆಲ ಹೆಜ್ಜೆ ಓಡಿದ್ದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+