ಬೆಂಗಳೂರು ಮೂಲದ ಸಂಸ್ಥೆಯಿಂದ ಲಂಡನ್‌ನಲ್ಲಿ ಸಂವಿಧಾನ ಜಾಗೃತಿ: ಎಂ.ಕೆ ಸ್ಟಾಲಿನ್ ಮೆಚ್ಚುಗೆ !
ಬೆಂಗಳೂರು ಮೂಲದ (Reclaim Constitution) ಎನ್ನುವ ಸಂಸ್ಥೆಯೊಂದು ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿದ್ದು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲಂಡನ್‌ನ SOAS ಗ್ಯಾಲರಿಯಲ್ಲಿ "ಆಫ್ಟರ್ ದಿ ಅಸೆಂಬ್ಲಿ: ಕಾನ್ಸ್ಟಿಟ್ಯೂಟಿಂಗ್ ಇಂಡಿಯಾ" ಎಂಬ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ಬೆಂಗಳೂರು ಮೂಲದ ರಿಕ್ಲೈಮ್ ಕಾನ್ಸ್ಟಿಟ್ಯೂಷನ್ ಎನ್ನುವ ಸಂಸ್ಥೆಯು ಸಂವಿಧಾನ ಸಭೆಯ ಚರ್ಚೆಗಳ ಕುರಿತು ದಾಖಲೆಗಳು ಹಾಗೂ ವಿಶೇಷವಾದ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ಸಂವಿಧಾನ ರಚನೆಯ ಆರಂಭಿಕ ದಿನಗಳ ಬಗ್ಗೆ ಹಲವಾರು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಇದೊಂದು ವಿಭಿನ್ನವಾದ ಕಾರ್ಯಕ್ರಮವಾಗಿದೆ.
ರಿಕ್ಲೈಮ್ ಕಾನ್ಸ್ಟಿಟ್ಯೂಷನ್‌ನ ವಿನಯ್ ಕುಮಾರ್ ಅವರು ಸಂವಿಧಾನ ಸಭೆಯಲ್ಲಿ ಭಾಗಿಯಾಗಿದ್ದವರು ಮಾತ್ರ ಸಂವಿಧಾನ ರಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಅಭಿಪ್ರಾಯ ಕೆಲವೊಮ್ಮೆ ಇರುತ್ತದೆ. ಆದರೆ ಕೊಡುಗೆ ನೀಡಿದ ಅನೇಕ ಸಾಮಾನ್ಯ ಜನರು ಸಹ ಇದ್ದಾರೆ. ಭಾರತದ ಸಾಮಾನ್ಯ ಜನರು ಸಹ ಸಂವಿಧಾನ ಸಭೆಗೆ ಕಳುಹಿಸಿದ ಸಾವಿರಾರು ಪತ್ರಗಳು ಇಲ್ಲಿವೆ ಎಂದಿದ್ದಾರೆ. ಈ ಸಂಬಂಧ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬೆಂಗಳೂರು ಮೂಲದ ಸಂಸ್ಥೆಯೊಂದು ಸಂವಿಧಾನ ವಿಚಾರವಾಗಿ ಅದರಲ್ಲೂ ಲಂಡನ್‌ನಲ್ಲಿ ವಿಶೇಷ ಅಭಿಯಾನ ಆಯೋಜಿಸಿರುವುದು ಗಮನ ಸೆಳೆದಿದೆ.

ಈ ಕಾರ್ಯಕ್ರಮದಲ್ಲಿ ಭಾರತೀಯ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು, ರೀಕ್ಲೈಮ್ ಕಾನ್ಸ್ಟಿಟ್ಯೂಷನ್ ಸಂವಿಧಾನದ ಮುನ್ನುಡಿಯನ್ನು ಹೊಂದಿರುವ ಬ್ಯಾಗ್‌ಗಳನ್ನು ಹಾಗೂ ವಿಶೇಷ ಕಲಾಕೃತಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಸ್ವಾತಂತ್ರ್ಯದ ನಂತರದ ಮೊದಲ ಅಂಚೆಚೀಟಿಯಿಂದ ಇಂದಿನ ಕಾಲದಲ್ಲಿ ಬಿಡುಗಡೆಯಾದ ಅಂಚೆಚೀಟಿಗಳವರೆಗೆ ಸಾಂವಿಧಾನಿಕ ವಿಷಯಗಳನ್ನು ಪ್ರದರ್ಶಿಸುವ ಅಂಚೆಚೀಟಿಗಳು ಹಾಗೂ ಅಂಚೆಚೀಟಿಗಳ ಸಂಗ್ರಹವನ್ನು ಸಹ ಈ ಪ್ರದರ್ಶನದಲ್ಲಿ ಇರಿಸಲಾಗಿದೆ.
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು 200 ಅಂಚೆಚೀಟಿಗಳ ವಸ್ತುಗಳ ಮೂಲ ಸಂಗ್ರಹವು ಸಹ ಸೇರಿದೆ.
ಇನ್ನು ಈಚೆಗೆ ಈ ತಂಡವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಭೇಟಿ ಮಾಡಿದ್ದರು. ಸಂವಿಧಾನ ವಿಷಯದ ಬಗ್ಗೆ ಜಾಗೃತಿ ಹಾಗೂ ಅಭಿಯಾನ ಉತ್ತಮವಾಗಿದೆ ಎಂದಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರು ಮೂಲದ ಸಂಸ್ಥೆಯೊಂದು ವಿದೇಶದಲ್ಲಿ ಜಾಗೃತಿ ಮೂಡಿಸುತ್ತಿರುವುದು ಹಾಗೂ ವಿದೇಶಿಗರು ಸೇರಿದಂತೆ ಹಲವರ ಗಮನ ಸೆಳೆದಿರುವುದು ಇದೀಗ ಮೆಚ್ಚಿಗೆಗೆ ಪಾತ್ರವಾಗಿದೆ.
ವಸಾಹತುಶಾಹಿಯ ದೃಷ್ಟಿಕೋನದ ಮೂಲಕ ಸಂವಿಧಾನಗಳೊಂದಿಗೆ ವ್ಯವಹರಿಸುವ ವಿದ್ವಾಂಸರನ್ನು ಭೇಟಿ ಮಾಡುವುದಕ್ಕೂ ಅವಕಾಶ ಸಿಕ್ಕಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.












Click it and Unblock the Notifications