Bengaluru Bandh: ಬೆಂಗ್ಳೂರ್ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತ, ಕ್ಯಾಬ್, ಆಟೋ ಇಲ್ಲದೆ ಪರದಾಡಿದ ಜನ
ಬೆಂಗಳೂರು, ಸೆಪ್ಟೆಂಬರ್, 11: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟಗಳು ಬೆಂಗಳೂರು ಬಂದ್ ಮಾಡಿದ್ದು, ಈ ಬಂದ್‌ನಿಂದ ನಗರದಲ್ಲಿ ಹಲವು ಸಮಸ್ಯೆಗಳು ಉದ್ಭವವಾಗಿವೆ.
ಬೆಂಗಳೂರು ಬಂದ್‌ಗೇನೋ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ ಮತ್ತೊಂದೆಡೆ ಈ ಬಂದ್‌ನಿಂದ ಆಸ್ಪತ್ರೆಗೆ ಹೋಗವವರು ತೊಂದರೆ ಅನುಭವಿಸುವಂತಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಓಲಾ, ಊಬರ್ ಸ್ಟಾಂಡ್‌ಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರಿದ್ದರೂ ಕ್ಯಾಬ್‌ಗಳು ಮಾತ್ರ ಲಭ್ಯವಾಗುತ್ತಿಲ್ಲ.

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ಕ್ಯಾಬ್‌ಗಳು ಇಂದು ಇಲ್ಲದಂತಾಗಿದ್ದು, ಪ್ರಯಾಣಿಕರು ಬೇರೆ ಯಾವುದೇ ಮಾರ್ಗಗಳಿಲ್ಲದೆ ಬಿಎಂಟಿಸಿ ಬಸ್‌ಗಳಲ್ಲಿ ತೆರಳುತ್ತಿದ್ದಾರೆ. ಮತ್ತೊಂದೆಡೆ ಕ್ಯಾಬ್ ಬುಕ್ಕಿಂಗ್ ಸ್ಟಾಂಡ್‌ಗಳೆಲ್ಲ ಬಿಕೋ ಎನ್ನುತ್ತಿದ್ದು, ಈ ಹಿನ್ನೆಲೆ ಏರ್ಪೋರ್ಟ್‌ಗೆ ತೆರಳುವ ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನೇ ಬಳಸಿದ್ದಾರೆ. ಹೀಗೆ ಏರ್ಪೋಟ್ ಮಾರ್ಗದಲ್ಲು ಎಲ್ಲಿ ನೋಡಿದರೂ ವೈಟ್ ನಂಬರ್ ಪ್ಲೇಟ್‌ನ ವಾಹನಗಳು ಕಂಡುಬಂದವು.
ಆಟೋ, ಟ್ಯಾಕ್ಸಿ ಇಲ್ಲದೇ ಆಸ್ಪತ್ರೆಗೆ ಬರಲು ಜನರು ಪರದಾಡುಬವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಖಾಸಗಿ ವಾಹನಗಳಿಲ್ಲದೇ ಜನರು ಗೋಳಾಡಿದ ಘಟನೆಯೂ ನಡೆದಿದೆ. "ಆಸ್ಪತ್ರೆಗೆ ಬರಲು ಬಸ್ ಅನ್ನೇ ಕಾಯುತ್ತಿರುವ ಹಿನ್ನೆಲೆ ತುಂಬಾ ತಡವಾಗುತ್ತಿದೆ. ನನಗೆ ಹಾರ್ಟ್ ತೊಂದರೆ ಇದ್ದು, ಆಸ್ಪತ್ರೆಗೆ ಬರಲು ರಸ್ತೆಗೆ ಬಂದರೆ ಯಾವುದೇ ವಾಹನ ಕಾಣಿಸುತ್ತಿಲ್ಲ. ಈ ಬಂದ್ ಮಾಡುವ ಮುನ್ನ ಸ್ವಲ್ಪ ಯೋಚನೆ ಮಾಡಬೇಕಿತ್ತು ಎಂದು ಮಹಿಳೆಯೊಬ್ಬರು ದುಃಖ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಂದ್ ನಡುವೆಯೂ ಕೆಲ ಆಟೋಗಳು ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿವೆ.
ಬಂದ್ ಮಾಡಿದರೆ ಯಾರು ಬೇಡ ಅನ್ನುವುದಿಲ್ಲ, ಆದರೆ ಯಾವುದೇ ತೊಂದರೆ ಇಲ್ಲದೇ ಬಂದ್ ಮಾಡಿ ಎಂದು ಪ್ರತಿಭಟನಾಕಾರರಿಗೆ ಜನರು ಮನವಿ ಮಾಡಿದ್ದಾರೆ.












Click it and Unblock the Notifications