Bengaluru Auto: ಬೆಂಗಳೂರು ಆಟೋ ಎಲ್‌ಪಿಜಿ ಕೊರತೆ: ಪ್ರಯಾಣಿಕರಿಗೆ ಬೆಲೆ ಏರಿಕೆಯ ಡಬಲ್ ಶಾಕ್

Bengaluru Auto: ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಸಂಕಷ್ಟದಿಂದ ಬೆಂಗಳೂರಿನಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಬೆಂಗಳೂರಿನಲ್ಲಿ ಸಾವಿರಾರು ಆಟೋರಿಕ್ಷಾ ಚಾಲಕರು ಆಟೋ ಎಲ್‌ಪಿಜಿಯ ತೀವ್ರ ಕೊರತೆಯಿಂದಾಗಿ ಇನ್ನೂ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ 160ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ / ನಿಲ್ದಾಣಗಳಲ್ಲಿ ಕೇವಲ 30 ನಿಲ್ದಾಣಗಳು ಮಾತ್ರ ಆಟೋ ಎಲ್‌ಪಿಜಿ ಲಭ್ಯವಿದೆ ಎಂದು ಹೇಳಲಾಗಿದೆ. ಇನ್ನು ಆಟೋ ಎಲ್‌ಪಿಜಿಗಾಗಿ ಆಟೋ ಚಾಲಕರು ಕಿ.ಮೀ ವರೆಗೆ ಕ್ಯೂ ನಿಲ್ಲುವುದು ಬೆಂಗಳೂರಿನಲ್ಲಿ ಮುಂದುವರಿದಿದೆ. ಇದರ ಪರಿಣಾಮ ಗ್ರಾಹಕರ ಮೇಲಾಗುತ್ತಿದ್ದು, ಬೆಲೆ ಏರಿಕೆಯ ಆತಂಕ ಶುರುವಾಗಿದೆ.

Bengaluru Auto

ಬೆಂಗಳೂರಿನಲ್ಲಿ ಮಂಗಳವಾರ ಆಟೋ ಎಲ್‌ಪಿಜಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ ಲೋಡ್ ಬರುವವರೆಗೆ ಸ್ಟಾಕ್‌ಗಳು ಕಡಿಮೆಯಾಗುವ ಸಾಧ್ಯತೆ ಇದೆ. ಸೋಮವಾರ ರಸ್ತೆಯಲ್ಲಿ ಕಡಿಮೆ ಆಟೋಗಳು ಮತ್ತು ಮೀಟರ್‌ಗಿಂತ ಹೆಚ್ಚಿನ ದರದ ಬೇಡಿಕೆಗಳನ್ನು ಆಟೋ ಚಾಲಕರು ಇರಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕೆಲವು ಆಟೋ ಚಾಲಕರು ಆಟೋ ಎಲ್‌ಪಿಜಿ ಸಿಗದೆ ದುಬಾರಿ ಬಾಡಿಗೆಯನ್ನು ಪಡೆಯುವುದಕ್ಕೆ ಪ್ರಾರಂಭಿಸಿದ್ದಾರೆ.

ಆಟೋ ಚಾಲಕರು ಇಂಧನ ಬೆಲೆ ಹೆಚ್ಚಳ ಹಾಗೂ ಹೆಚ್ಚು ಸಮಯವನ್ನು ಎಲ್‌ಪಿಜಿ ತುಂಬಿಸಿಕೊಳ್ಳುವುದಕ್ಕೆ ವ್ಯಯಿಸುತ್ತಿರುವುದನ್ನು ಸರಿದೂಗಿಸಿಕೊಳ್ಳುವುದಕ್ಕೆ ಬೆಲೆ ಏರಿಕೆಯ ಮೊರೆ ಹೋಗಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಆಟೋ ಎಲ್‌ಪಿಜಿ ತೀವ್ರ ಕೊರತೆ ಎದುರಾಗಿದೆ. ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಲಾಗಿದ್ದರೂ, ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಆಟೋ ಚಾಲಕರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಭಾನುವಾರ ಹಲವು ಭಾಗಗಳಲ್ಲಿ ಕೆಲವು ಲೀಟರ್ ಗ್ಯಾಸ್ ಪಡೆಯಲು ಚಾಲಕರು ದಿನಪೂರ್ತಿ ಸರತಿ ಸಾಲಿನಲ್ಲಿ ಆಟೋ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ರಾಜಾಜಿನಗರದ ಎಲ್‌ಪಿಜಿ ನಿಲ್ದಾಣವೊಂದರಲ್ಲೇ ಕಿ.ಮೀ ಗಟ್ಟಲೆ ಆಟೋ ಚಾಲಕರು ಕ್ಯೂ ನಿಂತಿದ್ದರು. ಅದರಲ್ಲೂ ಎಲ್‌ಪಿಜಿ ಬೆಲೆ ಏರಿಕೆ ಸಹ ಆಗಿರುವುದು ಆಟೋ ಚಾಲಕರನ್ನು ಹೈರಾಣಾಗಿಸಿದೆ. ಈ ಸಮಸ್ಯೆ ಎದುರಾಗುವುದಕ್ಕೂ ಮೊದಲು ಇಂಧನ ದರಗಳಲ್ಲಿ ವ್ಯತ್ಯಾಸವಿತ್ತು ಎಂದು ಚಾಲಕರು ಹೇಳಿದ್ದಾರೆ.

ಆಟೋ ಎಲ್‌ಪಿಜಿ ದರವು ಲೀಟರ್‌ಗೆ 55 ರಿಂದ 60 ರೂಪಾಯಿಗಳಷ್ಟಿತ್ತು. ಆದರೆ, ಈಗ ಅದು ವಿವಿಧ ಖಾಸಗಿ ಬಂಕ್‌ಗಳಲ್ಲಿ ಲೀಟರ್‌ಗೆ 105 ರೂ., 120 ರೂ. ಮತ್ತು 130 ರೂ.ವರೆಗೆ ಇದೆ. ವಿವಿಧ ಭಾಗದಲ್ಲಿ ಆಟೋ ಎಲ್‌ಪಿಜಿಯ ಮಿತಿ ನಿಗದಿ ಮಾಡಲಾಗಿದೆ. ವಿವಿಧ ಬಂಕ್‌ಗಳಲ್ಲಿ ಕೇವಲ 10-12 ಲೀಟರ್‌ಗಳನ್ನು ಮಾತ್ರ ಕೊಡಲಾಗುತ್ತಿದೆ. ಇದರಿಂದ ಮತ್ತೆ ಆಟೋ ಎಲ್‌ಪಿಜಿಗಾಗಿ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹಲವು ಆಟೋ ಚಾಲಕರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

Bengaluru Auto: ಪ್ರಯಾಣಿಕರಿಗೂ ಸಂಕಷ್ಟ

ಇನ್ನು ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಸೇವೆ ವಿಳಂಬವಾಗುತ್ತಿರುವುದರಿಂದ / ಪೂರೈಕೆ ವ್ಯತ್ಯಾಸವಾಗುತ್ತಿರುವುದರ ನೇರವಾದ ಪರಿಣಾಮ ಆಟೋ ಪ್ರಯಾಣಿಕರ ಮೇಲಾಗುತ್ತಿದೆ. ಇದೀಗ ಆಟೋ ಪ್ರಯಾಣ ಸೇವೆಯೂ ಹೆಚ್ಚಾಗುವ ಆತಂಕ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+