ಬೆಂಗಳೂರಲ್ಲಿ 7,00,00,000 ರೂಪಾಯಿ ಮನಿ ಹೈಸ್ಟ್ ಮೀರಿಸುವಂತೆ ದಿಢೀರ್ ದರೋಡೆ... Bengaluru ATM Money
ಮನಿ ಹೈಸ್ಟ್... ಈ ವೆಬ್ ಸೀರಿಸ್ ಹೆಸರು ಕೇಳಿದರೆ ಸಾಕು ಕೋಟ್ಯಂತರ ಜನರ ಕಿವಿ ತಕ್ಷಣವೇ ಅಲರ್ಟ್ ಆಗಿಬಿಡುತ್ತದೆ. ಯಾಕಂದ್ರೆ ಬ್ಯಾಂಕ್ ದರೋಡೆಗಳ ವೆಬ್ ಸೀರಿಸ್ ಪಾಲಿನ ಕಿಂಗ್ ಅಂತಾ ಮನಿ ಹೈಸ್ಟ್ ಅನ್ನ ಕರೆಯಲಾಗುತ್ತದೆ. ಯಾಕಂದ್ರೆ ಅಷ್ಟು ಭಯಾನಕ ರೀತಿಯಲ್ಲಿ ದರೋಡೆಯನ್ನ ಮಾಡುತ್ತಾರೆ ವಿಲನ್‌ಗಳು. ಕನ್ನಡ ನಾಡಿನಲ್ಲಿ ಕೂಡ ಮನಿ ಹೈಸ್ಟ್... ನೋಡಿದವರ ಸಂಖ್ಯೆಯು ಹತ್ತಾರು ಲಕ್ಷ ಇದೆ. ಆದರೆ ಇದೀಗ ಮನಿ ಹೈಸ್ಟ್ ದರೋಡೆಯನ್ನೇ ಮೀರಿಸುವ ಘಟನೆಯು ನಮ್ಮ ಬೆಂಗಳೂರು ಹೃದಯ ಭಾಗದಲ್ಲಿ ನಡೆದೇ ಬಿಟ್ಟಿದೆ. ಬೆಂಗಳೂರಲ್ಲಿ 7,00,00,000 ರೂಪಾಯಿ...
ಹೌದು, ರಾಜಧಾನಿ ಬೆಂಗಳೂರು ಬೆಳೆದು ನಿಂತಂತೆ ಭಾರಿ ದೊಡ್ಡ ಪ್ರಮಾಣದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರಿನ ಹೃದಯ ಭಾಗದಲ್ಲೇ ಸಾಲು ಸಾಲು ಕ್ರೈಂ ನಡೆಯುತ್ತಾ ಇರುವುದು ಪೊಲೀಸರಿಗೆ ಕೂಡ ದೊಡ್ಡ ತಲೆನೋವು ತರಿಸಿದೆ. ಇದನ್ನೆಲ್ಲಾ ಕಂಟ್ರೋಲ್ ಮಾಡಲು ಪೊಲೀಸರು ಕೂಡ ತಪ್ಪು ಮಾಡಿದವರ ಕಾಲಿಗೆ ಗುಂಡು ಹೊಡೆಯುವುದು ಸೇರಿದಂತೆ ಹಲವಾರು ರೀತಿ ಪಾಠ ಕಲಿಸುವ ಪ್ರಯತ್ನ ಮಾಡ್ತಾನೇ ಇದ್ದಾರೆ. ಹೀಗಿದ್ದಾಗಲೇ, ಬೆಂಗಳೂರಲ್ಲಿ 7,00,00,000 ರೂಪಾಯಿ ಮನಿ ಹೈಸ್ಟ್ ಮೀರಿಸುವಂತೆ ದಿಢೀರ್ ದರೋಡೆ...

ರಾಜಧಾನಿಯಲ್ಲಿ ಭಾರಿ ದೊಡ್ಡ ದರೋಡೆ!
ಹೌದು, ಬೆಂಗಳೂರಿನಲ್ಲಿ ಇಂದು ನಡೆದ ಭೀಕರ ದರೋಡೆ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ದಿಢೀರ್ ಅಂತಾ ನುಗ್ಗಿದ ಕೆಲವರು ಭಾರಿ ದೊಡ್ಡ ಪ್ರಮಾಣದಲ್ಲಿ ಹಣ ಇದ್ದ ವಾಹನವನ್ನೇ ಹೈಜಾಕ್ ಮಾಡಿ ದರೋಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಈ ಸುದ್ದಿ ಇಡೀ ಇಂಡಿಯಾ ಪೂರ್ತಿ ದೊಡ್ಡ ಸೌಂಡ್ ಮಾಡುವ ಜೊತೆಗೆ, ಬೆಂಗಳೂರಿನಲ್ಲಿ ಭಾರಿ ಭಯ ಕೂಡ ಹುಟ್ಟುಹಾಕಿದೆ. ಬರೋಬ್ಬರಿ 7 ಕೋಟಿ ರೂಪಾಯಿ ಈ ಘಟನೆಯಲ್ಲಿ ದರೋಡೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಪಡೆ
ಘಟನೆ ವರದಿಯಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದು, ಹೊರ ವಲಯ ಸೇರಿದಂತೆ ರಾಜ್ಯದ ಗಡಿ ಭಾಗದಲ್ಲಿ ಕೂಡ ಹೈಅಲರ್ಟ್ ಘೋಷಣೆ ಮಾಡಿದ್ದಾರೆ. ಮತ್ತೊಂದು ಕಡೆ ಈ ಘಟನೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಆತಂಕ ಹುಟ್ಟುಹಾಕಿದೆ. ಹಾಡಹಗಲೇ ಈ ರೀತಿಯ ಕೃತ್ಯ ನಡೆದಿರುವ ಕಾರಣ, ಪೊಲೀಸರು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.












Click it and Unblock the Notifications