ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ: ಕಿರಾತಕ ಮಧುಕರ್ ಗೆ 12 ವರ್ಷ ಜೈಲು ಶಿಕ್ಷೆ
ಬೆಂಗಳೂರು,
ಫೆಬ್ರವರಿ 02: ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಆಗುಂತಕನಿಗೆ ತಕ್ಕ ಶಿಕ್ಷೆಯಾಗಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕೆ. ಮಧುಕರರೆಡ್ಡಿಗೆ ಹನ್ನೆರಡು ವರ್ಷ ಶಿಕ್ಷೆ ನೀಡಿ 65 ನೇ ಸಿಟಿ ಸಿವಿಲ್ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. id="toptextpromo"> id='are-slot-1' class='oiad oi-axt oiadv'>ಜ್ಯೋತಿ
ಉದಯ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಣೆ ಮಾಡಿದ್ದ ನ್ಯಾಯಾಧೀಶರಾದ ರಾಜೇಶ್ವರ ಅವರು ಮಂಗಳವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಆರೋಪಿಗೆ ಹನ್ನೆರಡು ವರ್ಷ ಕಠಿಣ ಕಾರಾಗೃಹ ಶೀಕ್ಷೆ ವಿಧಿಸಿ ತೀರ್ಪು ನೀಡಿದರು. ಏಳು ವರ್ಷದ ಹಿಂದೆ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಮಧುಕರರೆಡ್ಡಿಗೆ ಶಿಕ್ಷೆ ನೀಡಿದಂತಾಗಿದೆ. id='are-slot-2' class='oiad oi-axt oiadv'>
ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ
ನವೆಂಬರ್ 19, 2013 ರಂದು ಬೆಳಗಿನ ಜಾವ ಕಾರ್ಪೋರೇಷನ್ ವೃತ್ತದಲ್ಲಿರುವ ಬ್ಯಾಂಕ್ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಮಚ್ಚಿನಲ್ಲಿ ಕ್ರೂರವಾಗಿ ಹಲ್ಲೆ ಮಾಡಿದ್ದ. . ಕೈ ಮುಗಿದು ಕೇಳಿಕೊಂಡರೂ ಕೇಳದ ವಿಕೃತವಾಗಿ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಎಸ್ ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲವು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಜ್ಯೋತಿ ಉದಯ್ ಜೀವ ಉಳಿದಿತ್ತು.

300 ಪೊಲೀಸ್ ಸಿಬ್ಬಂದಿ ತಂಡ
ಪ್ರಕರಣ ತನಿಖೆಗೆ 300 ಪೊಲೀಸ್ ಸಿಬ್ಬಂದಿ ತಂಡ: ಇನ್ನು ಜ್ಯೋತಿ ಉದಯ್ ಪ್ರಕರಣ ಇಡೀ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ, ಪ್ರಕರಣವ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು 300 ಪೊಲೀಸರನ್ನು ಒಳಗೊಂಡ ತಂಡ ವನ್ನು ರಚಿಸಿದ್ದರು. ಸತತ ಮೂರು ವರ್ಷ ಹುಡು ಕಾಡಿದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿತ್ತಾದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಆರೋಪಿ ಯಾವುದೇ ಮೊಬೈಲ್ ಕೂಡ ಬಳಸಿರಲಿಲ್ಲ. ಜತೆಗೆ ಏಕಾಂಗಿಯಾಗಿ ಕೃತ್ಯ ಎಸಗಿದ್ದ.

ನಾಲ್ಕು ವರ್ಷವಾದ್ರೂ ಸುಳಿವು ಇಲ್ಲ
ಮಧುಕರರೆಡ್ಡಿ ಬಗ್ಗೆ ಎಲ್ಲೆಲ್ಲಿ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. 2017 ರಲ್ಲಿ ಆಂಧ್ರ ಪ್ರದೇಶದ ಅನಂತಪುರದಲ್ಲಿ ಎಟಿಎಂ ನಲ್ಲಿ ಮಹಿಳೆಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ, ಬೆಳರು ಮುದ್ರೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದರು. ಮಧುಕರರೆಡ್ಡಿ ತಪ್ಪೊಪ್ಪಿಕೊಂಡಿದ್ದ. ನ್ಯಾಯಾಲಯದ ಮುಂದೆಯೇ ತಾನು ಜ್ಯೋತಿ ಉದಯ್ ಅವರನ್ನು ಹಲ್ಲೆ ಮಾಡಿದ್ದಾಗಿ ಹೇಳಿಕೆ ದಾಖಲಿಸಿದ್ದ. ಈ ಕುರಿತು ಎಸ್.ಜೆ. ಪಾರ್ಕ್ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಬಿಡಿಗಾಸಿಗೆ ಬೇಟೆಯಾಡಿದ್ದ
ಬೆಂಗಳೂರಿಗೆ ಬರುವ ಮುನ್ನ ಮೆಹಬೂಬ್ ನಗರದಲ್ಲಿ ನಾರಾಯಣ ಎಂಬ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಈ ಕಿರಾತಕ ಧರ್ಮವರಂ ನಲ್ಲಿ ವೃದ್ಧೆಯನ್ನು ಹತ್ಯೆ ಮಾಡಿ ಹಣ ದೋಚಿದ್ದ. ನವೆಂಬರ್ 10, 2013 ರಂದು ವೃದ್ಧೆಯನ್ನು ಹತ್ಯೆ ಮಾಡಿದ ಬಳಕ ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದ. ಹಣವಿಲ್ಲದೇ ಎರಡು ದಿನ ಹಸಿವಿನಿಂದ ಕಂಗಾಲಾಗಿದ್ದ ಈತ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿದ್ದ. ಅದೆಲ್ಲವೂ ವಿಫಲವಾಗಿತ್ತು. ನವೆಂಬರ್ 19 ರಂದು ತನ್ನ ಕ್ರೌರ್ಯ ತೋರಿಸಿದ್ದ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಶೆಟರ್ ಎಳೆದು ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈತನ ಸಿಸಿಟಿವಿ ದೃಶ್ಯ ಸಿಕ್ಕರೂ ಆತನನ್ನು ಪೊಲೀಸರು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
Recommended Video

ಮದನಪಲ್ಲಿನ ಮಧುಕರರೆಡ್ಡಿ
ಚಿತ್ತೂರು ಜಿಲ್ಲೆ ಮದನಪಲ್ಲಿ ತಾಲೂಕಿನ ದಿಗುವಪಲ್ಲಿ ಗ್ರಾಮದ ನಿವಾಸಿ ಮಧುಕರರೆಡ್ಡಿ, ಸಾರ್ವಜನಿಕ ನಲ್ಲಿ ನೀರಿನ ವಿಚಾರವಾಗಿ ಆನಂದರೆಡ್ಡಿ ಎಂಬುವರನ್ನು ಹತ್ಯೆ ಮಾಡಿ ಜೈಲಿಗೆ ಹೋಗಿದ್ದ. ಈ ಪ್ರಕರಣದಲ್ಲಿ 2005 ರಲ್ಲಿ ಶಿಕ್ಷೆಗೆ ಗುರಿಯಾಗಿ ಕಡಪ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಅನಾರೋಗ್ಯ ದಿಂದ ಈತನನ್ನು ಆಸ್ಪತ್ರೆಗೆ ದಾಖಲಿಸಿದಾಗ 2011 ರಲ್ಲಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈತನಿಗಾಗಿ ಕಡಪ ಜೈಲು ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಆದರೆ ಎಲ್ಲೂ ಈತ ಸಿಕ್ಕಿರಲಿಲ್ಲ. ಇದಾದ ಎರಡು ವರ್ಷದ ಬಳಿಕ ಮೆಹಬೂಬ್ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಂದಿನಿಂದ ಸರಣಿ ಕೃತ್ಯಗಳನ್ನು ಎಸಗುತ್ತಿದ್ದ.












Click it and Unblock the Notifications