Bengaluru Air Quality: ಬೆಂಗಳೂರು ವಾಯು ಗುಣಮಟ್ಟ ಕುಸಿತ, ಈ ಬಡಾವಣೆಗಳಲ್ಲಿ ಕಳಪೆ ವಾಯುಸ್ಥಿತಿ
ಬೆಂಗಳೂರು, ನವೆಂಬರ್ 01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಮೊದಲ ದಿನವಾದ ಗುರುವಾರವೇ ಅತ್ಯಧಿಕ ಪಟಾಕಿಗಳ ಸದ್ದು ಕೇಳಿ ಬಂದಿದೆ. ಸಂಜೆ ಮಳೆ ಬಿಡುವು ಕೊಡುತ್ತಿದ್ದಂತೆ ಪಟಾಕಿಗಳನ್ನು ಹಾರಿಸಲಾಯಿತು. ಶುಕ್ರವಾರ ಮಧ್ಯಾಹ್ನದಿಂದಲೂ ಪಟಾಕಿ ಹೊಡೆಯಲಾಗುತ್ತಿದೆ. ವಾಹನಗಳ ದಟ್ಟಣೆಯಿಂದಾಗಿ ಹಾಳಾಗುತ್ತಿದ್ದ ಗಾಳಿಯ ಗುಣಮಟ್ಟ ಇದೀಗ ಪಟಾಕಿಯಿಂದ ಒಂದಷ್ಟು ಕುಸಿತವಾಗಿದೆ. ಹೀಗಾಗಿಯೇ ವಿವಿಧ ಬಡಾವಣೆಗಳಲ್ಲಿ ಕಳಪೆ ಮತ್ತು ಮಧ್ಯಮ ಹಂತದಲ್ಲಿ ಗಾಳಿಯ ದಾಖಲಾಗಿದೆ.
ವರ್ಷದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಹಬ್ಬವು ಇನ್ನೂ ಎರಡು ದಿನಗಳ ಕಾಲ ಇದೆ. ಸೋಮವಾರದವರೆಗೆ ಪಟಾಕಿ ಹೊಡೆಬಹುದು ಎನ್ನಲಾಗಿದೆ. ಈವರೆಗೆ ಅತ್ಯಧಿಕ ವಾಹನಗಳು ಕಂಡು ಬರುತ್ತಿದ್ದ ಸ್ಥಳದಲ್ಲಿ ಗಾಳಿಯ ವಾತಾವರಣ ಕೊಂಚ ಹಾಳಾಗಿದ್ದು, ಆದರೆ ಇಂದು ಎಲ್ಲೆಡೆ ಗಾಳಿಯ ಗುಣಮಟ್ಟವು ಕುಸಿತ ಕಂಡಿದೆ ಎಂದು ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು AQI ವರದಿ, ಡಿಜಿಟಲ್ ವರದಿಯಲ್ಲಿ ತಿಳಿಸಿದೆ.

ಶುಕ್ರವಾರ ಸಂಜೆ ಕಂಡು ಬಂದ AQI ಪಟ್ಟಿ
ಬೆಂಗಳೂರಿನ ಜಿಗಣಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 198 ದಾಖಲಾಗಿದೆ. ಅದೇ ರೀತಿ ಸಿಲ್ಕ ಬೋರ್ಡ್‌ನಲ್ಲಿ 132 AQI, ಬಿಟಿಎಂ ಬಡಾವಣೆಯಲ್ಲಿ 196 AQI, ಜಯನಗರ 5ನೇ ಬ್ಲಾಕ್ 137 AQI, ಹೊಂಬೇಗೌಡ ನಗರ 106 AQI, ಕಸ್ತೂರಿನಗರ 141 AQI, RAVE ಮೈಲಸಂದ್ರ 121 AQI.
ಬೆಂಗಳೂರು ನಗರ ರೈಲು ನಿಲ್ದಾಣ 131 AQI, ಬಾಪೂಜಿ ನಗರ 114 AQI, ಹೆಬ್ಬಾಳ 143 AQI, ಶಿವಪುರ (ಪೀಣ್ಯ ಕಡೆ) 134 AQI, ಪೀಣ್ಯದಲ್ಲಿ 134 AQI ಗಾಳಿಯ ಗುಣಮಟ್ಟ ದಾಖಲಾಗಿದೆ.
ಈ ಮೇಲಿನ ಎಲ್ಲ ಕಡೆಗಳಲ್ಲಿಯೂ ಗಾಳಿಯು ಗುಣಟದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಉತ್ತಮ, ಮಧ್ಯಮ, ಕಳಪೆ, ಅತ್ಯಂತ ಕಳಪೆ ಮತ್ತು ಅಪಾಯಕಾರಿ ಎಂದು ವಿಂಗಡಿಸಲಾಗುತ್ತದೆ. ಈ ಮೇಲೆ ತಿಳಿಸಿರುವ ಎಲ್ಲ ಬಡಾವಣೆಗಳಲ್ಲಿ ಉತ್ತಮ ಸ್ಥಿತಿಯಿಂದ ಗಾಳಿ ಕಳಪೆ ಸ್ಥಿತಿಗೆ ತಲುಪಿದೆ. ಹಬ್ಬದ ಮುಗಿಯುವ ಹೊತ್ತಿಗೆ ಗಾಳಿ ಗುಣಮಟ್ಟ ಅನಾರೋಗ್ಯಕ ಸ್ಥಿತಿ ತಲುಪಬಹುದು ಎನ್ನಲಾಗಿದೆ. ಇನ್ನೂ ಸಾಣೆಗುರುವಹಳ್ಳಿ 87 AQI ದಾಖಲಾಗುವ ಮೂಲಕ ಇಲ್ಲಿನ ಸ್ಥಿತಿ ಉತ್ತಮವಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KPCB) ತಿಳಿಸಿದೆ.
KPCB ವಾಯು ಗುಣಮಟ್ಟ ಸೂಚ್ಯಂಕ (AQI) ಅಳತೆ ಹೇಗೆ?
* 0-50 AQI - ಉತ್ತಮ ಗಾಳಿ ಗುಣಮಟ್ಟದ ವಾತಾವರಣ ಎನ್ನಲಾಗುತ್ತದೆ.
* 51-100 AQI - ಮಧ್ಯಮ ಪ್ರಮಾಣ
* 101-200 AQI - ಕಳಪೆ ಪ್ರಮಾಣ
* 201-300 AQI - ಅನಾರೋಗ್ಯಕರ
* 301-400 AQI- ಅಪಾಯಕಾರಿ
* 401-500 AQI- ಅತ್ಯಂತ ಅಪಾಯಕಾರಿ ಸ್ಥಿತಿ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications