ಬೆಂಗಳೂರಿನಾದ್ಯಂತ ವ್ಯಾಪಿಸುತ್ತಿದೆ ಡೆಂಗ್ಯೂ: ಪ್ರಕರಣಗಳಲ್ಲಿ ಭಾರೀ ಏರಿಕೆ-ಲಕ್ಷಣಗಳೇನು? ಆರೋಗ್ಯ ಇಲಾಖೆಯ ಸಲಹೆಗಳೇನು? ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 20: ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸೆಪ್ಟೆಂಬರ್ 15 ರ ವರೆಗೆ ಬೆಂಗಳೂರಿನಲ್ಲಿ 9147 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜನರಿಗೆ ಉಪಯುಕ್ತ ಸಲಹೆಗಳನ್ನು ನೀಡಿದೆ.
ಡೆಂಗ್ಯೂ ಲಕ್ಷಣಗಳು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಡೆಂಗ್ಯೂ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಉಂಟಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ತಗುಲುತ್ತದೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

1- ಹಠಾತ್ ಜ್ವರ ಕಾಣಿಸಿಕೊಳ್ಳುತ್ತದೆ
2- ಕಣ್ಣು, ಕಿವಿ ಮತ್ತು ತಲೆ ನೋವು ಉಂಟಾಗುತ್ತದೆ
3- ವಾಂತಿ ಆರಂಭವಾಗುತ್ತದೆ
4- ತೀವ್ರ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
5- ಬಾಯಿ, ಮೂಗು ಮತ್ತು ಒಸಡುಗಳಲ್ಲಿ ಕೆಂಪು ತೇಪೆಗಳು ಕಂಡುಬರುತ್ತವೆ
6- ಬಾಯಿ ಒಣಗುತ್ತದೆ
7- ಕಡಿಮೆ ರಕ್ತದೊತ್ತಡ ಉಂಟಾಗುತ್ತದೆ
ಡೆಂಗ್ಯೂ ಸಮರ್ಪಕವಾದ ಔಷಧಿ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದ್ದರೂ ರೋಗ ಲಕ್ಷಣಗಳ ಪ್ರಕಾರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
ನೀವೇನು ಮಾಡಬೇಕು?
1- ಮೇಲ್ಛಾವಣಿಯ ಟ್ಯಾಂಕ್‌ಗಳು ಸೇರಿದಂತೆ ಎಲ್ಲಾ ನೀರಿನ ಪಾತ್ರೆಗಳನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಬೇಕು. ಟ್ಯಾಂಕ್‌ಗಳನ್ನು ತೊಳೆದು, ಒಣಗಿಸಿ ಮತ್ತು ಪುನಃ ತುಂಬಿಸಬೇಕು.
2- ಮನೆಗಳ ಸುತ್ತಮುತ್ತಲಿನ ತ್ಯಾಜ್ಯ ಟಿನ್‌ಗಳು, ಟೈರ್‌ಗಳು ಮತ್ತು ಬಾಟಲಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು.
3- ಏರ್ ಕೂಲರ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆಯಾದರೂ ಬದಲಾಯಿಸಬೇಕು
4- ಕೈ ಮತ್ತು ಕಾಲುಗಳನ್ನು ಮುಚ್ಚುವ ಪೂರ್ಣ ಉಡುಪುಗಳನ್ನು ಧರಿಸಬೇಕು
5- ಹಗಲಿನಲ್ಲಿ ಮಲಗುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಸೊಳ್ಳೆ ಪರದೆಯನ್ನು ಬಳಸಬೇಕು.
6- ಡೆಂಗ್ಯೂ ಪೀಡಿತರು ತಪ್ಪದೇ ಸೊಳ್ಳೆ ಪರದೆ ಬಳಸಬೇಕು
7- ಡೆಂಗ್ಯೂ ಇರುವವರು ಸಾಕಷ್ಟು ದ್ರವವನ್ನು ಸೇವಿಸಬೇಕು ಮತ್ತು ಗರಿಷ್ಠ ವಿಶ್ರಾಂತಿ ತೆಗೆದುಕೊಳ್ಳಬೇಕು
8- ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಬೇಕು

ನೀವೇನು ಮಾಡಬಾರದು?
1- ಡೆಂಗ್ಯೂ ರೋಗ ಲಕ್ಷಣಗಳ ಸಂದರ್ಭದಲ್ಲಿ, ರೋಗಿಗಳು ಸ್ವಯಂ- ಔಷಧಿಗಳನ್ನು ತೆಗೆದುಕೊಳ್ಳುವ ಬದಲಿಗೆ ಆಸ್ಪತ್ರೆಗೆ ಭೇಟಿ ನೀಡಬೇಕು
2- ರಕ್ತಸ್ರಾವವನ್ನು ಉಂಟುಮಾಡುವ ಡೆಂಗ್ಯೂ ರೋಗಲಕ್ಷಣಗಳ ಸಂದರ್ಭದಲ್ಲಿ ಜನರು ನೋವು ನಿವಾರಕಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ತಪ್ಪಿಸಲು ಮನೆಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆಯು ಜನರಿಗೆ ಮನವಿ ಮಾಡಿದೆ.












Click it and Unblock the Notifications