ಹಿಂದೂ ಸಮಾಜೋತ್ಸವ : ತೊಗಾಡಿಯಾ ಭಾಷಣ ಪ್ರಸಾರ?
ಬೆಂಗಳೂರು, ಫೆ.7 : ಬೆಂಗಳೂರಿನಲ್ಲಿ ಹಿಂದೂ ಸಮಾಜೋತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರವೀಣ್ ತೊಗಾಡಿಯಾ ಅವರು ಸಮಾಜೋತ್ಸವದಲ್ಲಿ ಭಾಗಿಯಾಗುತ್ತಿಲ್ಲ. ಆದರೆ, ಅವರ ಭಾಷಣದ ನೇರ ಪ್ರಸಾರವನ್ನು ಸಮಾಜೋತ್ಸವದಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆ.8ರ ಭಾನುವಾರ ಸಂಜೆ 4 ಗಂಟೆಗೆ 'ವಿರಾಟ ಹಿಂದೂ ಸಮಾಜೋತ್ಸವ' ನಡೆಯಲಿದೆ. ಇಲ್ಲಿ ತೊಗಾಡಿಯಾ ಅವರ ಧ್ವನಿ-ದೃಶ್ಯ ಮುದ್ರಿತ ಭಾಷಣ ಅಥವಾ ಬೇರೊಂದು ಭಾಗದಿಂದ ಮಾಡುವ ಭಾಷಣವನ್ನು ನೇರ ಪ್ರಸಾರದ ಮೂಲಕ ಜನರಿಗೆ ತಲುಪಿಸುವ ಸಾಧ್ಯತೆ ಇದೆ. [ತೊಗಾಡಿಯಾ ಬೆಂಗಳೂರಿಗೆ ಬರುವಂತಿಲ್ಲ : ಹೈಕೋರ್ಟ್]

ಹಿಂದೂ ಸಮಾಜೋತ್ಸವದ ಮುಖ್ಯ ಆಕರ್ಷಕಣೆ ಪ್ರವೀಣ್ ತೊಗಾಡಿಯಾ ಅವರ ಭಾಷಣವಾಗಿತ್ತು. ಆದರೆ, ಅವರು ಬೆಂಗಳೂರು ಪ್ರವೇಶಿಸದಂತೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರ ಆದೇಶ ನೀಡಿದ್ದಾರೆ. ಇದನ್ನು ತೆರವುಗೊಳಿಸುವಂತೆ ಕೋರಿ ತೊಗಾಡಿಯಾ ಅವರು ಸಲ್ಲಿಸಿದ್ದ ಅರ್ಜಿಯೂ ಹೈಕೋರ್ಟ್‌ನಲ್ಲಿ ವಜಾಗೊಂಡಿದೆ. [ತೊಗಾಡಿಯಾ ಬೆಂಗಳೂರಿಗೆ ಬರದಂತೆ ನಿಷೇಧ]
ಶನಿವಾರ ತೊಗಾಡಿಯಾ ಅವರು ಬೆಂಗಳೂರು ನಗರದ ಸಮೀಪದಲ್ಲಿನ ತಮಿಳುನಾಡು ಗಡಿ ಭಾಗದಲ್ಲಿರುವ ಹೊಸೂರಿಗೆ ಆಗಮಿಸಲಿದ್ದು, ಈ ವೇಳೆ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ನಗರ ಕೇಸರಿ ಮಯ : ಹಿಂದೂ ಸಮಾಜೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಬಸವನಗುಡಿ ಸುತ್ತ-ಮುತ್ತ ರಸ್ತೆಗಳಲ್ಲಿ ಕೇಸರಿ ಧ್ವಜಗಳು ಜನರನ್ನು ಸ್ವಾಗತಿಸುತ್ತಿವೆ. ಜಯನಗರ 4ನೇ ಬ್ಲಾಕ್‌ನಿಂದ ನ್ಯಾಷನಲ್ ಕಾಲೇಜು ಮೈದಾನದ ವರೆಗೆ ರಸ್ತೆಯಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲಾಗಿದೆ.












Click it and Unblock the Notifications