BLR Airport: 10 ವಿಮಾನಗಳ ಹಾರಾಟ ವಿಳಂಬ, 6 ವಿಮಾನ ಮಾರ್ಗ ಬದಲಾವಣೆ
ಬೆಂಗಳೂರು, ನವೆಂಬರ್ 10: ಬೆಂಗಳೂರು ವ್ಯಾಪ್ತಿಯಲ್ಲಿ ಭಾನುವಾರ ಅತ್ಯಧಿಕ ಮಂಜಿನ ವಾತಾವರಣ ನಿರ್ಮಾಣವಾಗಿದೆ. ಇದು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವಿವಿಧ ವಿಮಾನಗಳ ಹಾರಾಟದ ಮೇಲೆ ಪ್ರಭಾವ ಬೀರಿದೆ. ದೇವನಹಳ್ಳಿ ಸುತ್ತಮುತ್ತಲಿನ ಭಾಗದಲ್ಲಿ ಏರ್‌ಪೋರ್ಟ್ ಗೋಚರವಾಗದಷ್ಟು 50 ರಿಂದ 100 ಮಿಲಿ ಮೀಟರ್ ನಡುವೆ ಮಂಜು ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ದೇವನಹಳ್ಳಿ ಏರ್‌ಪೋರ್ಟ್ ಭಾಗದಲ್ಲಿ ಇಂದು ಭಾನುವಾರ ನವೆಂಬರ್ 10ರ ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು. ಇದರಿಂದ ಹಲವು 10 ವಿಮಾನಗಳ ಪ್ರಯಾಣದಲ್ಲಿ ವಿಳಂಬವಾಗಿದೆ. 06 ವಿಮಾನಗಳು ಬೆಂಗಳೂರಿಗೆ ಬಂದಿಳಿಯದೇ ಬೇರೆ ಮಾರ್ಗಗಳ ಬದಲಾವಣೆಗೊಂಡವು ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ.

ಮಂಜು ಹೆಚ್ಚಿದ್ದಾಗ ಗೋಚರತೆಯ ಆಧಾರದ ಮೇಲೆ ಮಂಜಿನ ಪ್ರಮಾಣವನ್ನು ವಿಂಗಡಿಸಿ ಹೇಳಲಾಗುತ್ತದೆ. ಕೆಐಎ ಗೋಚರತೆಯು 500 ಮೀ.ಮೀ. ವರೆಗೆ ಬಿದ್ದಾಗ, 200 ಮೀ ವರೆಗೆ ಮಧ್ಯಮ, 50 ಮೀ.ಮೀ.ವರೆಗೆ ದಟ್ಟ ಎಂದು ಹೇಳಲಾಗುತ್ತದೆ. ಇಂದು 50ರಿಂದ 1000 ಮೀ.ಮೀ.ವರೆಗೆ ಮಂಜು ದಾಖಲಾಗಿ ವಿಮಾನ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿತು.
ನಾಲ್ಕು ತಿಂಗಳು ಕೆಐಎನಲ್ಲಿ ಗೋಚರತೆ ಕಳಪೆ?
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಿದ್ದ ಈ ಮಂಜನ್ನು ವಿಕಿರಣ ಮಂಜು ಎಂದು ಕರೆಯಲಾಗಿದೆ. ಇದೇ ನವೆಂಬರ್‌ನಿಂದ ಫೆಬ್ರುವರಿವರೆಗೆ ಅಧಿಕ ಚಳಿ ಜೊತೆಗೆ ಮಂಜು ಹೆಚ್ಚಿರಬಹುದು. ನಾಲ್ಕು ತಿಂಗಳುಗಳಲ್ಲಿ ಬೆಳಗ್ಗೆ 3ಗಂಟೆಯಿಂದ 8.30 ಗಂಟೆ ತನಕೆ ಏರ್‌ಪೋರ್ಟ್‌ನಲ್ಲಿ ಕಡಿಮೆ/ ಕಳಪೆ ಗೋಚರತೆ ಕಂಡು ಬರಲಿದೆ. ಇದು ಕೆಲವೊಮ್ಮೆ ವಿಮಾನಗಳ ಕಾರ್ಯಾಚರಣೆ ಮೇಲೆ ದುಷ್ಪರಿಣಾಮ ಭೀರುತ್ತದೆ ಎನ್ನಲಾಗಿದೆ.
ಇನ್ನು ಬೆಂಗಳೂರು ಹವಾಮಾನ ಇಲಾಖೆ ಪ್ರಕಾರ, ಭಾನುವಾರ ಬೆಳಗ್ಗೆ 8.30ಕ್ಕೆ ನಗರದಲ್ಲಿ ಕನಿಷ್ಠ ತಾಪಮಾನ 19.4 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಆಗಿದೆ. ಇನ್ನೂ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ HAL ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ ಕ್ರಮವಾಗಿ 17.9 ಮತ್ತು 18.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಹಿತಿ ನೀಡಿದೆ.
ಐಎಂಡಿ ಪ್ರಕಾರ ಇಂದು ಅತ್ಯಧಿಕ ಮಂಜು ದಾಖಲಾಗಿದೆ. ಮುಂದಿನ ಐದು ದಿನ ಅಂದರೆ ನವೆಂಬರ್ 15ರವರೆಗೆ ಅತ್ಯಧಿಕ ಬಿಸಿಲು ಹಾಗೂ ಶುಷ್ಕ ವಾತಾವರಣ ನಿರ್ಮಾಣವಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications