ಬೆಂಗಳೂರು: ಒಂದೇ ಕುಟುಂಬದ 6 ಜನ ಆತ್ಮಹತ್ಯೆ

ಬೆಂಗಳೂರು, ಮಾ, 12 : ಬೆಂಗಳೂರಿನ ನಾಗರಬಾವಿಯ ಗೀತಾ ಕಾಂಪ್ಲೆಕ್ಸ್ ಬಳಿಯ ಎಂಪಿಎಂ ಲೇಔಟ್ ನಲ್ಲಿ ಒಂದೇ ಕುಟುಂಬದ 6 ಜನ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಂಗಹನುಮಯ್ಯ ಕುಟುಂಬ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದೆ.

ಹಣಕಾಸಿನ ವಿಚಾರ ಇಲ್ಲವೇ ಕೌಟುಂಬಿಕ ಕಲಹದಿಂದ ಬೇಸತ್ತ ಕುಟುಂಬ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಸ್‍ಎನ್‍ಎಲ್ ಉದ್ಯೋಗಿ ಗಂಗಹನುಮಯ್ಯ (57) ಪತ್ನಿ ಜಯಮ್ಮ(55), ಪುತ್ರಿಯರಾದ ಹೇಮಲತಾ (30) ವಿಮಲಾ(28), ನೇತ್ರಾವತಿ (23) ಮಗ ಯತೀಶ(25) ಆತ್ಮಹತ್ಯೆಗೆ ಶರಣಾಗಿದ್ದಾರೆ.[ಮಾಜಿ ಪ್ರೇಯಸಿ ಸತ್ತಳೆಂದು ನೇಣು ಹಾಕಿಕೊಂಡ,ಆಕೆ ಬದುಕಿದಳು]

bengaluru

ಮನೆಯವರಿಗೆಲ್ಲ ವಿಷ ಉಣಿಸಿದ ಗಂಗಹನುಮಯ್ಯ ನಂತರ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾವುದೆ ರೀತಿಯ ಗಲಾಟೆಗಳು ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಆರ್ಥಿಕ ಸ್ಥಿತಿಯಲ್ಲಿ ಯಾವ ತೊಂದರೆ ಇರಲಿಲ್ಲ. ಮಗಳ ನಿಶ್ಚಿತಾರ್ಥ ಸಹ 15 ದಿನಗಳ ಹಿಂದೆ ನಡೆದಿತ್ತು. ಆದರೆ ಮಗ ಯತೀಶ್ ಬಗ್ಗೆ ತಂದೆ ತಾಯಿಗೆ ಅಸಮಾಧಾನವಿತ್ತು ಎಂದು ಅಕ್ಕ ಪಕ್ಕದವರು ಹೇಳಿದ್ದಾರೆ.[ಮೈಸೂರು : ಸತ್ತಂತೆ ನಾಟಕವಾಡಲು ಹೋಗಿ ಹೆಣವಾದ]

2 ದಿನದ ಹಿಂದೆಯೇ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಮನೆಯಿಂದ ವಾಸನೆ ಹೊರಬಂದುದರಿಂದ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+