Double Decker Flyover: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 40 ಕಿಲೋ ಮೀಟರ್ ಮೆಟ್ರೋ-ಸಂಯೋಜಿತ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ನಿರ್ಮಿಸಲಾಗುವುದು. ಅದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಅಧಿಕೃತ ಮಾಹಿತಿ ನೀಡುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇದರಿಂದ ವಿಳಂಬವಾಗುತ್ತಿದ್ದ ನಮ್ಮ ಮೆಟ್ರೋ ಯೋಜನೆಗೂ ಶೀಘ್ರವೇ ವೇಗ ಸಿಗಲಿದೆ.
ಬಹುಕೋಟಿ (1.5 ಲಕ್ಷ ಕೋಟಿ ರೂ.) ವೆಚ್ಚದಲ್ಲಿ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ದೃಷ್ಟಿಕೋನದ ಭಾಗವಾಗಿ 2025ರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದ್ದ ಬಹು ಮಾದರಿ ಸಾರಿಗೆ ದಕ್ಷತೆ ಹೆಚ್ಚಿಸುವ ಭಾಗವಾಗಿ ನಮ್ಮ ಮೆಟ್ರೋ ಹಂತ 3ರ ಎರಡು ಎತ್ತರಿಸಿದ ಕಾರಿಡಾರ್ ಜೊತೆಗೆ ನಿರ್ಮಾಣವಾಗಲಿದೆ. ರಾಗಿಗುಡ್ಡ ಪ್ರಸನ್ನಾಂಜನೇಯ ಸ್ವಾಮಿ ಮೆಟ್ರೋ ನಿಲ್ದಾಣ (ಹಳದಿ ಮಾರ್ಗ) ದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್ ನಂತೆ ಈ ಎರಡು ಕಾರಿಡಾರ್ ಜೊತೆಗೆ ನಿರ್ಮಾಣವಾಗಲಿದೆ.

ಬರೋಬ್ಬರಿ 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು 40 ಕಿಲೋ ಮೀಟರ್ ಮೆಟ್ರೋ (Metro Orange Line) ಮಾರ್ಗದೊಂದಿಗೆ ಸಂಯೋಜಿಸಲಾಗುತ್ತದೆ. ಈ ಸಂಬಂಧ ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಯೋಜನೆಯ ಡಿಪಿಆರ್ ಸಿದ್ಧತೆ ಆರಂಭವಾಗಿದೆ ಎಂದು ಅವರು ತಿಳಿಸಿದರು.
ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಎಲ್ಲಿಂದ ಎಲ್ಲಿಗೆ?
ಬೆಂಗಳೂರು ನಮ್ಮ ಮೆಟ್ರೋ ಮೂರನೇ ಹಂತದಡಿ ನಿರ್ಮಿಸಲು ಉದ್ದೇಶಿಸಿರುವ 44 ಕಿಲೋ ಮೀಟರ್ ಉದ್ದದ ಎರಡು ಮೆಟ್ರೋ ಕಾರಿಡಾರ್‌ಗಳ ಜೊತೆ ಜೊತೆಗೆ ಈ ಡಬಲ್ ಡೆಕ್ಕ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. ಜೆ.ಪಿ.ನಗರ ನಾಲ್ಕನೇ ಹಂತದಿಂದ ಹೆಬ್ಬಾಳವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಮೆಟ್ರೋ ಮಾರ್ಗದಲ್ಲಿ ಈ ಮೇಲ್ಸೇತುವೆ ಬರಲಿದೆ. ಇದು ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಮುಖ ಯೋಜನೆ ಇದಾಗಿದೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
ಡಬಲ್ ಡೆಕ್ಕರ್ ಫ್ಲೈಓವರ್‌ನಿಂದ ಮೆಟ್ರೋ ಯೋಜನೆ ವಿಳಂಬ
ನಮ್ಮ ಮೆಟ್ರೋ ಕಿತ್ತಳೆ ಮಾರ್ಗ (Metro Orange Line) ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2024ರಲ್ಲಿ ಅನುಮೋದನೆ ನೀಡಿದೆ. ಅಲ್ಲಿಂದ ಈವರೆಗೆ ಒಂದು ವರ್ಷವಾದರೆ ಯೋಜನೆಗೆ ಟೆಂಡರ್ ಕರೆಯಲಾಗಿಲ್ಲ. ಮೆಟ್ರೋ ಯೋಜನೆ ಆರಂಭ ವಿಳಂಬಕ್ಕೆ ಈ ಡಬಲ್ ಡೆಕ್ಕರ್ ಫ್ಲೈಓವರ್ ಪ್ಲಾನ್ ಅಡಚಣೆ ಉಂಟು ಮಾಡಿದೆ. ಏಕೆಂದರೆ ಆರಂಭದಲ್ಲಿ ಮೆಟ್ರೋ ಗೆ ಪ್ಲಾನ್ ಮಾಡಲಾಗಿತ್ತು. ನಂತರ ಅದರೊಂದಿಗೆ ಈ ಮೇಲ್ಸೇತುವೆ ನಿರ್ಮಿಸುವಂತೆ ಸರ್ಕಾರ ಸೂಚಿಸಿತ್ತು
ನಮ್ಮ ಮೆಟ್ರೋ ಪ್ಲಾನ್ ಸಿದ್ಧವಾಗಿದ್ದು, ಡಬಲ್ ಡೆಕ್ಕರ್ ಡಿಪಿಆರ್ ಸಿದ್ಧವಾಗಿರಲಿಲ್ಲ. ಇದರಿಂದ ಯೋಜನೆ ವಿಳಂಬವಾಗಿದ್ದು ಮಾತ್ರವಲ್ಲದೇ ದಿನ ಕಳೆದಂತೆ ಅಂದಾಜು ವೆಚ್ಚ ಪ್ರತಿ ದಿನಕ್ಕೆ 2ಕೋಟಿ ರೂಪಾಯಿ ಏರಿಕೆ ಆಗಬಹುದೆಂದು ಊಹಿಸಲಾಗಿದೆ. ಈ ಮಾರ್ಗವು ಬೆಂಗಳೂರು ಬೆಂಗಳೂರು ಪಶ್ಚಿಮ ಭಾಗ, ಹೊರ ವರ್ತು ರಸ್ತೆ ಕಡೆಗಿನ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಲಿದೆ.












Click it and Unblock the Notifications