Get Updates
Get notified of breaking news, exclusive insights, and must-see stories!

Bengaluru 2nd Airport: ವಿಮಾನ ನಿಲ್ದಾಣ: ಈ ಕಾರಣಕ್ಕೆ ಇಲ್ಲಿ ಭೂಮಿಗೆ ಬಂಗಾರದ ಬೆಲೆ!

Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸ ಅಪ್ಡೇಟ್‌ಗಳು ಬರುತ್ತಿವೆ. ಈಗಾಗಲೇ ಎರಡು ಜಾಗಗಳನ್ನು ಅಂತಿಮ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ‌ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ. ಅದರಲ್ಲಿ ಒಂದು ಜಾಗ ಇಲ್ಲಿಯ ವರೆಗೆ ಡಿ.ಕೆ ಶಿವಕುಮಾರ್‌ ಅವರು ಹೇಳಿಕೊಂಡು ಬರುತ್ತಿದ್ದ ಪ್ರದೇಶ! ಹೌದು ರಾಮನಗರದ ಭಾಗದ ಜನರಿಗೆ ಭೂಮಿಯನ್ನು ಮಾರಾಟ ಮಾಡಬೇಡಿ. ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ನಿರಂತರವಾಗಿ ಹೇಳಿಕೊಂಡೇ ಬರುತ್ತಿದ್ದರು. ಇದೀಗ ಡಿ.ಕೆ ಶಿವಕುಮಾರ್‌ ಅವರ ಲೆಕ್ಕಾಚಾರಗಳು ಕೈಹಿಡಿಯುತ್ತಿವೆ ಎಂದೇ ಹೇಳಲಾಗುತ್ತಿದೆ. ಕೊನೆಗೂ ಈ ಭಾಗದ ಜನರ ಅದೃಷ್ಟ ಖುಸಲಾಯಿಸಿದೆ. ಭೂಮಿಗೆ ಬಂಗಾರದ ಬೆಲೆ ಬರ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರ ಪ್ರಭಾವ ತೀವ್ರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ತುಮಕೂರು ಹಾಗೂ ನೆಲಮಂಗಲ ಸೇರಿದಂತೆ ವಿವಿಧ ಕಡೆ ಮಾಡುವುದಕ್ಕೆ ಸರ್ಕಸ್‌ ಜೋರಾಗಿದೆ. ಈ ಭಾಗದ ಸಚಿವರ ಪೈಪೋಟಿಯೂ ಜೋರಾಗಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಕೊನೆಗೆ ಡಿ.ಕೆ ಶಿವಕುಮಾರ್‌ ಅವರ ಮಾತೇ ಫೈನಲ್‌ ಆಗುತ್ತಿದೆ. ಹೀಗಾಗಿ, ಈ ಭಾಗದ ಬೆಲೆಗೆ ಚಿನ್ನದ ಬೆಲೆ ಬರುತ್ತಿದೆ.

Bengaluru 2nd Airport This is Why land Here is Worth Gold

ರಾಮನಗರ ಜಿಲ್ಲೆಗೆ ಬಂಪರ್: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಕನಕಪುರ ಅಥವಾ ಕನಕಪುರ ಸುತ್ತಮುತ್ತಲಿನ ಜಾಗದಲ್ಲೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವುದಾಗಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದರು. ಇದರಿಂದ ಬೆಂಗಳೂರು ಬ್ರ್ಯಾಂಡ್ ಹೆಸರು ಈ ಭಾಗಕ್ಕೂ ಇಲ್ಲಿಗೂ ವಿಸ್ತರಿಸಲಿದೆ ಎಂದು ಹೇಳಲಾಗುತ್ತಿದೆ. ಡಿ.ಕೆ ಶಿವಕುಮಾರ್‌ ಅವರು ಈ ರೀತಿ ಹೇಳಿದಾಗಲೇ ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ಈ ಭಾಗದಲ್ಲಿ ಭೂಮಿಯ ಬೆಲೆ ನಿಧಾನವಾಗಿ ಹೆಚ್ಚಳವಾಗುತ್ತಿದೆ.

ರಾಮನಗರಕ್ಕೆ ಮೆಟ್ರೋ: ಇನ್ನು ರಾಮನಗರ ಭಾಗಕ್ಕೂ ಮೆಟ್ರೋ ವಿಸ್ತರಣೆ ಮಾಡುವ ಬಗ್ಗೆಯೂ ಈ ಹಿಂದೆಯೇ ಚರ್ಚೆ ನಡೆದಿತ್ತು. ಈಗ ಬೆಂಗಳೂರಿನ ಮೆಟ್ರೋ ಸೇವೆಯನ್ನು ಹೊಸಕೋಟೆ, ಬಿಡದಿ ಹಾಗೂ ಹೊರ ವಲಯಕ್ಕೂ ವಿಸ್ತರಣೆ ಮಾಡುವ ಚಿಂತನೆ ಇದೆ. ಈ ಬಗ್ಗೆ ಚರ್ಚೆಗಳು ಹಾಗೂ ಪ್ರಸ್ತಾವನೆ ಬಂದಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದರು. ಈ ಮೂಲಕ ರಾಮನಗರ ಎರಡನೇ ಬೆಂಗಳೂರು ಆಗಿ ಬೆಳೆಯುವ ಲಕ್ಷಣಗಳು ಕಾಣಿಸುತ್ತಿವೆ.

ಬೆಂಗಳೂರು ವಿಮಾನ ನಿಲ್ದಾಣ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಈಗ ರಾಜ್ಯ ಸರ್ಕಾರ ಎರಡು ಜಾಗಗಳನ್ನು ಶಾರ್ಟ್‌ ಲಿಸ್ಟ್‌ ಮಾಡಿದೆ ಅದರಲ್ಲಿ ನೆಲಮಂಗಲ ಹಾಗೂ ಕನಕಪುರ ಸೇರಿದೆ. ಕನಕಪುರ ಸಹ ರಾಮನಗರ ಜಿಲ್ಲೆಗೆ ಬಂದರೆ ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ಇನ್ನು ಈ ಎಲ್ಲಾ ಕಾರಣಗಳಿಂದ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದ್ದು. ಇದರಲ್ಲಿ ಯಾವುದೇ ಆದರೂ ಭೂಮಿಗೆ ಒಳ್ಳೆಯ ಬೆಲೆ ಇದೆ. ಅಲ್ಲದೆ ಮೂರು ಕಾರ್ಯಗಳೇನಾದರೂ ಆದರೆ ಇಲ್ಲಿ ಬೆಂಗಳೂರಿಗಿಂತ ಭೂಮಿ ಬೆಲೆ ಹೆಚ್ಚಳವಾಗಲಿದೆ ಎಂದೇ ಹೇಳಲಾಗುತ್ತಿದೆ.

ಡಿ.ಕೆ ಶಿವಕುಮಾರ್‌ ಮೇಲುಗೈ: ಇನ್ನು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಮೇಲುಗೈ ಸಾಧಿಸಿದ್ದಾರೆ.

ಬಹುತೇಕ ರಾಮನಗರದ ಯಾವುದಾದರು ಭಾಗದಲ್ಲಿಯೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಹಲವು ಸಚಿವರು ವಿವಿಧ ಜಿಲ್ಲೆಗಳಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಅಂತ ಒತ್ತಡ ಹೇರಿದರೂ ಅದು ಸಕ್ಸಸ್‌ ಆಗುವ ಲಕ್ಷಣ ಕಾಣುತ್ತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+