'ಒಂದು ಲೆಸ್ಸು, ಒಂದು ಪ್ಲಸ್ಸು' ಕಾಫಿ ಘಮದೊಂದಿಗೆ ಕಾವ್ಯ ಪರಿಮಳ
ಬೆಂಗಳೂರು, ಡಿಸೆಂಬರ್, 11: ಕಾಫಿಯ ಘಮದೊಂದಿಗೆ ಕಾವ್ಯಗಳ ಪ್ರಸ್ತುತಿ ಬೆಂಗಳೂರಲ್ಲಿ ಲಭ್ಯವಾಗುತ್ತಿದೆ. 'ಒಂದು ಲೆಸ್ಸು, ಒಂದು ಪ್ಲಸ್ಸು' ಕಾಫಿ ಕಾವ್ಯ ನಾಟಕಿಯ ಪ್ರಸ್ತುತಿ ಹೆಸರಿನ ಕಾರ್ಯಕ್ರಮ ನಡೆಯುತ್ತಿದೆ.
ಶನಿವಾರ ಮತ್ತು ಭಾನುವಾರವಿಡಿ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾ ನಂದಕುಮಾರ್, ಪೂರ್ಣಚಂದ್ರ ಮೈಸೂರು, ನಾಗಭೂಷಣ್, ಅಪೇಕ್ಷಾ ಘಳಿಗಿ, ಅಂಜಲಿ ರಾಮಣ್ಣ ಮತ್ತು ವೀಣಾ ಭಟ್ ಅವರ ಕಾವ್ಯಗಳು ಪ್ರಸ್ತುತವಾಗಲಿವೆ.[ನಾವು ವಿನಾಕಾರಣ ಕಣ್ಣೀರು ಹಾಕುವ ಮೊಸಳೆ!]

ವಿಧಾನಸೌಧದ ಸಮೀಪ ಅಂಬೇಡ್ಕರ್ ವೀದಿಯಲ್ಲಿರುವ ಸೆಂಟ್ರಲ್ ಕಾಫಿ ಬೋರ್ಡ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಸಾಹಿತ್ಯಾಸಕ್ತರು ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗೆ 9845285254ನ್ನು ಸಂಪರ್ಕ ಮಾಡಬಹುದು. ಸಿಟಿ ಬ್ಯಾಂಕ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ. ನೀವು ಸಾಹಿತ್ಯದ ಪರಿಮಳ ಸವಿಯಲು ಒಂದು ವಿಸಿಟ್ ಹಾಕಬಹುದು.












Click it and Unblock the Notifications