ಅನಂತ್ ಕುಮಾರ್ ಹೆಗಡೆ ಪತ್ನಿಯದ್ದು ಯಾವ ಜಾತಿ: ಬೇಳೂರು ಗೋಪಾಲಕೃಷ್ಣ
ಬೆಂಗಳೂರು. ಫೆಬ್ರವರಿ 04: ಇತ್ತೀಚೆಗಷ್ಟೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿಯ ಧರ್ಮದ ವಿಷಯ ತೆಗೆದು ದಿನೇಶ್ ಗುಂಡೂರಾವ್ ಅವರಿಗೆ ಅವಹೇಳನ ಮಾಡಿದ್ದ ಕೇಂದ್ರ ಬಿಜೆಪಿ ಮಂತ್ರಿ ಅನಂತ್ ಕುಮಾರ್ ಹಗಡೆ ವಿರುದ್ಧ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ಹಿಂದೂ ಮಹಾಸಭಾ ಕಾರ್ಯಕರ್ತರು ಮಹಾತ್ಮಾ ಗಾಂಧಿ ಅವರ ಪ್ರತಿಕೃತಿಗೆ ಗುಂಡಿಟ್ಟಿದ್ದನ್ನು ವಿರೋಧಿಸಿ ನಗರದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದರು ಈ ಸಮಯ ಬೇಳೂರು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಏಕವಚನದಲ್ಲಿಯೇ ಅನಂತ್‌ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಬೇಳೂರು ಗೋಪಾಲಕೃಷ್ಣ, ಅನಂತ್‌ಕುಮಾರ್ ಹೆಗಡೆ ಪತ್ನಿಯದ್ದು ಯಾವ ಜಾತಿ ಎಂಬುದು ಮೊದಲು ಆತ ತಿಳಿದುಕೊಳ್ಳಲಿ. ಜಾತಿ ಪತ್ತೆಗೆ ಡಿಎನ್‌ಎ ಪರೀಕ್ಷೆ ಮಾಡಿಸಲಿ ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಹೆಣ್ಣು ಮಕ್ಕಳ ಮೈ ಮುಟ್ಟಿದವರು ಕೈ ಕತ್ತರಿಸಿ ಎಂದು ಅನಂತ್‌ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ತಿರುಗೇಟ ನೀಡಿದ ಅವರು, ಅತ್ಯಾಚಾರ ಮಾಡಿದವರ, ಬ್ಲೂಫಿಲ್ಮ್ ನೋಡಿದವರ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ ಎಷ್ಟು ಜನರ ಕೈ ನೀವು ಕತ್ತಿಸಿದ್ದೀರಿ ಎಂದು ಮರು ಪ್ರಶ್ನೆ ಮಾಡಿದರು.
ಗಾಂಧಿ ಅವರ ಪ್ರತಿಕೃತಿಗೆ ಗುಂಡು ಹೊಡೆದ ಬಗ್ಗೆ ವೀರಾವೇಶದಿಂದ ಮಾತನಾಡಿದ ಅವರು, 'ಬಾಬ್ರಿ ಮಸೀದಿ ಕಟ್ಟಲಿಲ್ಲವೆಂದರೆ ನೀವು ಮೊದಿಗೂ ಗುಂಡು ಹೊಡೆಯುತ್ತೀರೇನು' ಎಂದು ಪ್ರಶ್ನಿಸಿದರು. ರಾಮ ಮಂದಿರ ಎನ್ನುವ ಬದಲಿಗೆ ಬಾಬ್ರಿ ಮಸೀದಿ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿ.ಆರ್.ಸುದರ್ಶನ್, ಲಕ್ಷ್ಮಿನಾರಾಯಣ್ ಸೇರಿ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿದ್ದರು.












Click it and Unblock the Notifications