• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೇಳೂರು ಬಾಯರ್ಸ್ ಬಯೋಟೆಕ್‌ಗೆ ರಾಷ್ಟ್ರೀಯ ಪ್ರಶಸ್ತಿ ಗರಿ

By Madhusoodhan
|

ಬೆಂಗಳೂರು, ಜುಲೈ, 13: ಆಯುರ್ವೇದ ಔಷಧಗಳು ಮತ್ತು ಪರ್ಯಾಯ ಪೌಷ್ಠಿಕ ಉತ್ಪನ್ನಗಳ (ಫುಡ್ ಸಪ್ಲಿಮೆಂಟ್ಸ್) ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿರುವ ಬೇಳೂರು ಬಾಯರ್ಸ್ ಬಯೋಟೆಕ್ ಕಂಪನಿ ಈ ವರ್ಷದ ಅತ್ಯುತ್ತಮ ಆಯುರ್ವೇದ ಔಷಧ ಮತ್ತು ಪರ್ಯಾಯ ಪೌಷ್ಠಿಕ ಉತ್ಪನ್ನಗಳ ಕಂಪನಿ-2016'ಯಾಗಿ ಹೊರಹೊಮ್ಮಿದೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅನೇಕ ಔಷಧಿ ಉತ್ಪನ್ನ ಕಂಪನಿಗಳಿಗೆ ಪ್ರಮುಖ ಪೂರೈಕೆದಾರನಾಗಿಯೂ ಬೇಳೂರು ಬಾಯರ್ಸ್ ಗುರುತಿಸಿಕೊಂಡಿದೆ.[56 ಔಷಧ ದರಗಳ ಮೇಲೆ ಶೇ 25 ರಷ್ಟು ಕಡಿತ!]

'ASSOCHAM INDIA' ಪ್ರತಿ ವರ್ಷ ನೀಡುವ ರಾಷ್ಟ್ರೀಯಮಟ್ಟದ ನ್ಯೂಟ್ರಾಸ್ಯುಟಿಕಲ್ ಕಂಪನಿ ಆಫ್ ದಿ ಇಯರ್' ಪ್ರಶಸ್ತಿಯ ಗರಿಯನ್ನು ಬೇಳೂರು ಬಾಯರ್ಸ್ ಬಯೋಟೆಕ್ ತನ್ನ ಮುಡಿಗೇರಿಸಿಕೊಂಡಿದೆ.['ಕರ್ನಾಟಕ ಸೇರಿ ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪನೆ']

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಳೂರು ಬಾಯರ್ಸ್ ಕಾರ್ಯನಿರ್ವಾಹಕ ನಿರ್ದೇಶಕ (ಎಂಡಿ) ಬಿ.ಜಿ ಬಾಯಿರಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಬಿ.ಜಿ. ಬಾಯರಿ, ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಶ್ರೀಯುತರಾದ ವೈ.ಎಸ್. ಚೌಧರಿ, ಎಫ್‍ಎಸ್‍ಎಸ್‍ಎಐನ ಸಿಇಒ ಪವನ್ ಕುಮಾರ್ ಅಗರ್ ವಾಲ್ ಮತ್ತು ನಿಫ್ಟೀಮ್ ಉಪಕುಲಪತಿ ಡಾ.ಅಜಿತ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪೌಷ್ಠಿಕ ಆಹಾರ ಹಾಗೂ ವನಸ್ಪತಿ ಔಷಧ ಉತ್ಪಾದನೆಯಲ್ಲಿ ಗಣನೀಯ ಸಾಧನೆಯನ್ನು ತೋರಿಸಿರುವ ಬೇಳೂರು ಬಾಯರ್ಸ್ ಬಯೋಟೆಕ್ ಕಂಪನಿಯನ್ನು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಕಂಪನಿಯ ಎಂಡಿ ಬಿ.ಜಿ ಬಾಯಿರಿ ಅವರ ಉದ್ಯಮ ಸಾಹಸಕ್ಕಾಗಿ 2014ರಲ್ಲಿ ಆರ್ಯಭಟ ಪ್ರಶಸ್ತಿಗೂ ಭಾಜನರಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Beloor Bayir Biotech Ltd.(BBTL), a leading manufacturer of food and dietary supplements, botanical extracts and nutraceuticals in bulk and finished formulations, has won ‘Nutraceuticals Company of the Year-2016' award by ASSOCHAM. Beloor Bayir Biotech is a supplier to many well-known pharma companies. It has won the "Nutraceuticals Company of the Year" award given by ASSOCHAM for the year 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more