ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರಂಡಿ ನೀರಿನಿಂದ ಬೆಳ್ಳಂದೂರು, ಹಲಸೂರು ಕೆರೆಗೆ ಶೀಘ್ರ ಮುಕ್ತಿ

|
Google Oneindia Kannada News

ಬೆಂಗಳೂರು, ಮಾರ್ಚ್ 03: ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯಲ್ಲಿ ಹಲವಾರು ಬಾರಿ ಬೆಂಕಿ ಕಾಣಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದಿದ್ದು ಈಗ ಹಳೆಯ ಸುದ್ದಿ. ಈ ಕಲುಷಿತ ಕೆರೆಯನ್ನು ಸ್ವಚ್ಛ ಕೆರೆಯನ್ನಾಗಿ ಮಾಡಲು 104ಕೋಟಿ ರೂ ಗಳ ಯೋಜನೆ ಅನುಷ್ಠಾನಕ್ಕೆ ಸರ್ಕಾರವು ಚಾಲನೆ ನೀಡಲಿದೆ.

ಕೊಳಚೆ ನೀರು ಕೆರೆಗೆ ಸೇರದಂತೆ ಮಾಡಲು ಕೊಳಚೆ ನೀರು ಸಂಸ್ಕರಣಾ ಕೇಂದ್ರ ಸ್ಥಾಪನೆಗೆ ನ್ಯಾಷನಲ್ ಗೇಮ್ಸ್ ವಿಲೇಜ್ ಬಳಿ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಕೆ.ಜೆ. ಜಾರ್ಜ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

2 ತಿಂಗಳೊಳಗೆ ಬೆಳ್ಳಂದೂರು ಕೆರೆ ಕಳೆ ತೆಗೆಯಿರಿ: ಜಾರ್ಜ್2 ತಿಂಗಳೊಳಗೆ ಬೆಳ್ಳಂದೂರು ಕೆರೆ ಕಳೆ ತೆಗೆಯಿರಿ: ಜಾರ್ಜ್

210 ಮಿಲಿಯನ್ ನೀರು ಹಿಡಿಯುವ ಕಲುಷಿತ ನೀರು ಸಂಸ್ಕರಣಾ ಘಟಕವನ್ನು 38.61 ಕೋಟಿ ಮತ್ತು 5.3 ಕಿ.ಮೀ ಪೈಪ್ ಲೈನ್ ನಿರ್ಮಿಸಲಾಗುತ್ತಿದ್ದು ಅದಕ್ಕೆ 65.64 ಕೋಟಿ ರೂ ವೆಚ್ಚವಾಗಲಿದೆ. ಈ ಕಾಮಗಾರಿಯು ಅಮೃತ್ ಯೋಜನೆಯಡಿ 24 ತಿಂಗಳೊಳಗಾಗಿ ಮುಕ್ತಾಯವಾಗಲಿದೆ.

Bellandur, Ulsoor lakes to soon get relief from sewage water

ಪ್ರಸ್ತುತ ಕೆಆರ್ ಮಾರುಕಟ್ಟೆ, ಲಾಲ್ ಬಾಗ್, ಸಿದ್ದಾಪುರ, ವಿನಾಯಕನಗರ, ರಾಜೇಂದ್ರ ನಗರ, ಆಡುಗೋಡಿ, ಕೋರಮಂಗಲ, ಈಜಿಪುರದಿಂದ 160 ಎಂಎಲ್ ಡಿಯಷ್ಟು ಕಲುಷಿತ ಮೀರು ಕೆರೆಗಳಿಗೆ ಹರಿದುಬರುತ್ತಿದೆ. ಪಂಪಿಂಗ್ ಸ್ಟೇಷನ್ ನಲ್ಲಿ 300 ಪಿಎಚ್ ಪಿಯ 12 ಯಂತ್ರಗಳಿರುತ್ತವೆ.ಹಾಗೂ ನಾಲ್ಕು ಸ್ಟ್ಯಾಂಡ್ ಬೈ ಯಂತ್ರಗಳಿರುತ್ತದೆ. ಕಳಚೆ ನೀರು ಶುದ್ಧೀಕರಣ ಘಟಕವು ಕೆರೆಗೆ ನೀರು ಹೋಗುವ ಮುನ್ನ ನೀರನ್ನು ಶುದ್ಧೀಕರಿಸಲಿವೆ.

ಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನ

English summary
The contaminated Bellandur Lake is set to recieve some much needed relief from sewage water in the feature. To achive this, foundation were laid for two project costing Rs.140 crore at the National Games village on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X