Get Updates
Get notified of breaking news, exclusive insights, and must-see stories!

ಬೆಳಗಾವಿ ಭಿನ್ನಮತ ಸ್ಪೋಟ? ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಜಗದೀಶ್ ಶೆಟ್ಟರ್ ದೆಹಲಿಗೆ ದೌಡು

ಹುಬ್ಬಳ್ಳಿ, ಮಾರ್ಚ್ 18: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವರಿಷ್ಠರ ಸೂಚನೆ ಬಳಿಕವು ಬೆಳಗಾವಿ ಟಿಕೆಟ್ ನೂರಕ್ಕೆ ನೂರರಷ್ಟು ಖಚಿತವಾಗಿಲ್ಲ ಎನ್ನಲಾಗಿದೆ. ಬೆಳಗಾವಿ ಸ್ಪರ್ಧೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿ ವರಿಷ್ಠರ ಭೇಟಿಗೆ ಜಗದೀಶ್ ಶೆಟ್ಟರ್ ತೆರಳಿದ್ದಾರೆ.

ಲೋಕಸಭಾ ಚುನಾವಣೆಯ ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್‌ಗೆ ಆ ಟಿಕೆಟ್‌ಗಳು ಕೈ ತಪ್ಪಿತು. ನಂತರ ಕಾಡಿ ಬೇಡಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚು ಕಡಿಮೆ ತಮ್ಮ ಹೆಸರನ್ನ ಪೈನಲ್ ಮಾಡಿಕೊಂಡು ಬಂದಿದ್ದ ಜಗದೀಶ್ ಶೆಟ್ಟರ್ ಮತ್ತೆ ಆಘಾತ ಎದುರಾಗಿವೆ.

Belagavi Lok Sabha Jagadish Shettar Will Meet BJP High Command in Delhi after Local leaders Oppose

ಕಾಟಾಚಾರಕ್ಕೆ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ?

ಬೆಳಗಾವಿ ಟಿಕೆಟ್ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ಬಿಜೆಪಿ ವರಿಷ್ಠರ ಸೂಚನೆ ನೀಡಿರುವುದಕ್ಕೆ, ಅವರ ಸ್ಪರ್ಧೆಗೆ ಕೆಲ ಸ್ಥಳೀಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ ಎಂದು ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಶೆಟ್ಟರ್ ಸ್ಫರ್ಧೆ ವಿಚಾರ ತಿಳಿಯುತ್ತಿದ್ದಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪ್ರಭಾಕರ್ ಕೋರೆ ಸೇರಿದಂತೆ ಕೆಲ ನಾಯಕರು ತುರ್ತು ಸಭೆ ನಡೆಸಿದರು. ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ಕೆಲವರು ಆಗ್ರಹಿಸಿದರು. ಅಲ್ಲದೇ ಇಲ್ಲಿನ ಆಕಾಂಕ್ಷಿಗಳು ಯಾರಿದ್ದಾರೆ ಎಂದು ರಾಜ್ಯ ಮತ್ತು ರಾಷ್ಟ್ರ ನಾಯರಕರಿಗೆ ತಿಳಿಸಲು ಸಭೆಯಲ್ಲಿ ಅವರು ತೀರ್ಮಾನಿಸಿದ್ದಾರೆ.

Belagavi Lok Sabha Jagadish Shettar Will Meet BJP High Command in Delhi after Local leaders Oppose

ದೆಹಲಿಗೆ ತೆರಳಿರುವ ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದಂತೆ ಒತ್ತಡ ತರಲು ಕೆಲವರು ನಿರ್ಧರಿಸಿದ್ದಾರೆ. ಇದೆಲ್ಲ ಬೆಳವಣಿಗೆ ಕಿವಿಗೆ ಬೀಳುತ್ತಿದ್ದಂತೆ ಜಗದೀಶ್ ಶೆಟ್ಟರ್ ಬಿಜೆಪಿ ವರಿಷ್ಠರನ್ನು ಕಾಣಲು, ಟಿಕೆಟ್ ಅಂತಿಮಗೊಳಿಸಲು ದೆಹಲಿಗೆ ದೌಡಾಯಿಸಿದ್ದಾರೆ. ಕಾಟಾಚಾರಕ್ಕೆ ಬೆಳಗಾವಿಗೆ ಜಗದೀಶ ಶೆಟ್ಟರ್‌ ಹೆಸರು ಮುಂಚೂಣಿ ಯಲ್ಲಿದ್ದು, ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಬೆಳಗಾವಿಯಲ್ಲಿ ಭಿನ್ನಮತ: ಶೆಟ್ಟರ್ ಸ್ಫರ್ಧೆಗೆ ಭಾರಿ ವಿರೋಧ

ಒಂದು ಹಂತದಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಲ್ ಸಂತೋಷ ಬಣವಾದ ಪ್ರಭಾಕರ್ ಕೋರೆ, ಈರಣ್ಣ ಕಡಾಡಿ, ಮಹಾಂತೇಶ ಕವಟಿಗಿಮಠ ಅವರು ಬೆಳಗಾವಿಯಿಂದ ಶೆಟ್ಟರ್ ಸ್ಪರ್ಧೆಗೆ ಆಕ್ಷೇಪ ಎತ್ತಿದ್ದಾರೆ. ಇದೆಲ್ಲ ಬೆಳವಣಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್ ಸಿಗುತ್ತೋ ಇಲ್ಲವೋ? ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.

ಮತ್ತೊಂದೆಡೆ ಜಗದೀಶ್‌ ಶೆಟ್ಟರ್ ಅವರ ಬೀಗರಾದ ಹಾಲಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರನ್ನು ಬದಲಿಸಲು ಸಿದ್ಧತೆ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಿತಿ ಮೀರಿರುವ ಭಿನ್ನಮತವನ್ನು ಈ ಮೂಲಕ ನಿಯಂತ್ರಿಸಬಹುದು.

ಧಾರವಾಡ ಸಹಿತ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೆಟ್ಟರ್‌ ಪ್ರಭಾವವಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಮತ ಚದುರದಂತೆ ನೋಡಿಕೊಳ್ಳಲು ಪ್ಲಾನ್ ನಡೆಯುತ್ತಿದೆ.

ಕಾಂಗ್ರೆಸ್ ಶಾಸಕ ಸವದಿ ಸೆಳೆಯಲು ಬಿಜೆಪಿ ಪ್ಲಾನ್?

ಇತ್ತ ಕಾಂಗ್ರೆಸ್‌ನಲ್ಲಿ ಬೆಳಗಾವಿಯ ಮತ್ತೊಬ್ಬ ನಾಯಕ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿಗೆ ಲೋಕಸಭಾ ಚುನಾವಣೆ ಟಿಕೆಟ್ ಸಿಗದಿದ್ದಕ್ಕೆ ಬೇಸರವಿದೆ. ಈ ಮೊದಲು ಅವರು ಬಿಜೆಪಿ ಬಿಟ್ಟು ವಿಧಾನಸಭೆ ಮುನ್ನ ಕಾಂಗ್ರೆಸ್ ಸೇರಿದ್ದರು. ಶೆಟ್ಟರ್ ರೀತಿಯಲ್ಲಿ ಸವದಿ ಅವರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆದಿವೆ. ಚುನಾವಣೆ ಹೊತ್ತಿಗೆ ಏನು ಬೇಕಾದರೂ ನಡೆಯುವ ಸಾಧ್ಯತೆ ಇದೆ.

ಬೆಳಗಾವಿಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ಅನಧಿಕೃತವಾಗಿ ಹಂಚಿಕೆಯಾಗಿದೆ. ಬೆಳಗಾವಿ ಕ್ಷೇತ್ರ ಡಿಕೆಶಿ ಬಣದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಕಡೆಯವರಿಗಾದರೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಣದ ಸಚಿವ ಸತೀಶ್‌ ಜಾರಕಿಹೊಳಿ ಅವರ ಕಡೆಯವರಿಗೆ ನೀಡುವುದು ಬಹುತೇಕ ಅಂತಿಮವಾಗಿದೆ.

ಬೆಳಗಾವಿಯಲ್ಲಿ ಬಿಜೆಪಿ-ಕಾಂಗ್ರೆಸ್ ಲೆಕ್ಕಾಚಾರ

ಇನ್ನೂ ಬಿಜೆಪಿಯಿಂದ ಶೆಟ್ಟರ್ ಬೆಳಗಾವಿಯಿಂದಲೇ ಸ್ಪರ್ಧೆ ಮಾಡಿದರೆ ಲೆಕ್ಕಾಚಾರ ಯಾವ ರೀತಿ ಇರಲಿದೆ ಎನ್ನುವ ಕುತೂಹಲವೂ ಹೆಚ್ಚಾಗಿದೆ. ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಚಿವ ಸ್ಥಾನ ನೀಡಬೇಕು ಎನ್ನುವ ಸನ್ನಿವೇಶ ಎದುರಾದರೆ ಲಕ್ಷ್ಮಿ ಬದಲು ಲಕ್ಷ್ಮಣ ಎನ್ನುವ ಸೂತ್ರವೂ ಸಿದ್ದವಾಗಬಹುದು. ಆಗ ಲೋಕಸಭೆಗೆ ಲಕ್ಷ್ಮಿ ಹೆಬ್ಬಾಳಕರ್‌ ಇಲ್ಲವೇ ಅವರ ಪುತ್ರಗೆ ಟಿಕೆಟ್ ಸಿಗುವ ಸಾಧ್ಯತೆಗಳು ಇವೆ.

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಡುವ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವೂ ಇತ್ತು ಎನ್ನುವ ಆರೋಪ ಕೇಳಿ ಬಂದಿದ್ದವು. ಈಗ ಅವರ ಸಮ್ಮುಖದಲ್ಲೇ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಇದೀಗ ಸವದಿಯನ್ನು ಬಿಜೆಪಿಯತ್ತ ಸೆಳೆಯಲು ಪ್ಲಾನ್ ನಡೆಯುತ್ತಿವೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+