ರಂಗಶಂಕರದಲ್ಲಿ ಬೆಳವಾಡಿ ನಿರ್ದೇಶನದ 'ಬೆಕೆಟ್' ನೋಡಿ
ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗವಾದ 'ಬೆಕೆಟ್' ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನದ ಬೆಕೆಟ್ ನಾಟಕದ 12 ನೇ ಪ್ರದರ್ಶನ ಇದಾಗಿದ್ದು, ಜನವರಿ 4 ರಂದು ರಂಗ ಶಂಕರದಲ್ಲಿ ನಡೆಯಲಿದೆ.
ಬೆಂಗಳೂರು, ಜನವರಿ 01: ಬೆಂಗಳೂರು ಥಿಯೇಟರ್ ಕಂಪನಿ ತನ್ನ ಎರಡನೇ ಪ್ರಯೋಗವಾದ 'ಬೆಕೆಟ್' ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ. ಪ್ರಕಾಶ್ ಬೆಳವಾಡಿ ನಿರ್ದೇಶನದ ಬೆಕೆಟ್ ನಾಟಕದ 12 ನೇ ಪ್ರದರ್ಶನ ಇದಾಗಿದ್ದು, ಜನವರಿ 4 ರಂದು ರಂಗ ಶಂಕರದಲ್ಲಿ ನಡೆಯಲಿದೆ.
ಜಾನ್ ಆನ್ವಿ ರಚಿಸಿದ ಬೆಕೆಟ್ (ಮೂಲ ಫ್ರೆಂಚ್ ನಾಟಕ)ನಾಟಕದ ಐತಿಹಾಸಿಕ ನೆಲೆ 12 ನೇ ಶತಮಾನದ ಇಂಗ್ಲೆಂಡಿನ ನಾರ್ಮನ ಜನಾಂಗದ ದೊರೆ ಎರಡನೆ ಹೆನ್ರಿ ಮತ್ತು ಕ್ಯಾಥೋಲಿಕ್ ಚರ್ಚಿನ ಥಾಮಸ್ ಬೆಕೆಟ್ ನಡುವೆ ಆದ ಸಮರ. (ಆನ್ವಿಯವರು ನಾಟಕ ಬರೆಯುವಾಗ ಮುಂದೆ ಸಂತರೆಂದು ಘೋಷಿತರಾದ ಬೆಕೆಟ್ ಅವರನ್ನು ಸಾಕ್ಸನ್ ಜನಾಂಗದವರೆಂದು ತಪ್ಪಾಗಿ ಗ್ರಹಿಸಿದ್ದರು).
ರಾಜನಾದ ಎರಡನೇ ಹೆನ್ರಿ, ಬೆಕೆಟ್‌ನನ್ನು ಧರ್ಮಾಧಿಕಾರಿಯಾಗಿ ನೇಮಿಸಿದಾಗ, ಬೆಕೆಟ್ ಪರಿಹರಿಸಬೇಕಾದ ಸಮಸ್ಯೆ ನಿಷ್ಠೆಯದು ಅದನ್ನು ತಾನು ರಾಜನಿಂದ ದೇವರಿಗೆ ವರ್ಗಾಯಿಸಬೇಕು. ಬಗೆಹರಿಸಲಾಗದ ಬಿಕ್ಕಟ್ಟು ಏನಂದರೆ ರಾಜನ ಸೇವೆ, ದೇವರ ಸೇವೆ ಎರಡೂ ಏಕಕಾಲಕ್ಕೆ ತನಗೆ, ರಾಜನ ಸ್ನೇಹಿತ ಮತ್ತು ಪ್ರೀತಿಪಾತ್ರನಾಗಿಯೂ, ಮಾಡಲು ಸಾಧ್ಯವಿಲ್ಲ ಅನ್ನಿಸುವುದು.ಧರ್ಮದ ಮೂಲಕ ತನ್ನ ಆಡಳಿತದ ಹಿಡಿತ ಸಾಧಿಸಲು ಹುನ್ನಾರ ನಡೆಸುವ ಧರ್ಮಾಧಿಕಾರಿ.
ಆಡಳಿತದ ಮೇಲೆ ಹಿಡಿತ ಸಾಧಿಸಲು ತನ್ನ ಜೀವದ ಗೆಳೆಯ ಬೆಕೆಟ್ ನನ್ನು ಧರ್ಮಾಧಿಕಾರಿಯನ್ನಾಗಿಸುವ ಇಮ್ಮಡಿ ಹೆನ್ರಿಯ ರಾಜ ಕಾರಣ ಮತ್ತು ಧರ್ಮಾಧಿಕಾರಿಯಾದ ಮೇಲೆ, ರಾಷ್ಟ್ರದ ಆಡಳಿತ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಹೊರಟ ಬೆಕೆಟ್‌ನ ಧರ್ಮಾಂಧತೆ, ಧರ್ಮ ಮತ್ತು ರಾಜಕಾರಣದ ನಡುವಣ ಸಂಬಂಧ ಮತ್ತು ಒಂದರ ಒಳಗೊಂದು ಹಾಸು ಹೊಕ್ಕಾಗಿರುವ ಪರಿಯನ್ನು ಬಿಂಬಿಸುತ್ತದೆ.

ಇದಲ್ಲದೆ ವಸಾಹತುಷಾಹಿ ಪ್ರತಿಮೆಗಳು, ಜಾತಿ ಪ್ರಜ್ಞೆ, ರಾಷ್ಟ್ರ ಮತ್ತು ಅಸ್ಮಿತೆಯ ಸಂಕಟಗಳು ಮತ್ತು ಹೆಣ್ಣಿನ ಬಗ್ಗೆ ಇರುವ ಧೋರಣೆ ಕುರಿತಂತೆ ಆನ್ವಿಯ ವ್ಯಂಗ್ಯ ನಾಟಕದಲ್ಲಿದೆ. ಎಲ್ಲಕ್ಕೂಮೀರಿ ಈ ನಾಟಕ ರಾಜಕೀಯವಾಗಿ ತುರ್ತಾಗಿ ಸಮಕಾಲೀನ ಅನ್ನಿಸುವುದು ಆಶ್ಚರ್ಯ ಮೂಡಿಸುತ್ತದೆ.
2015 ರಲ್ಲಿ ರಂಗ ಶಂಕರ ಕನ್ನಡ ನಾಟಕೋತ್ಸವದಲ್ಲಿ ವಂಕಟೇಶ್ ಪ್ರಸಾದ್ ರವರ ನಿರ್ದೇಶನದ ನಾಟಕ ಚೆರ್ರಿ ಆರ್ಚರ್ಡ್ನ ಪ್ರದರ್ಶನದ ಮೂಲಕ ತನ್ನ ಹುಟ್ಟು ಪಡೆದ ಬೆಂಗಳೂರು ಥಿಯೇಟರ್ ಕಂಪನಿ 'ಚೆರ್ರಿ ತೋಟ' ನಾಟಕದ ಯಶಸ್ವಿ 15 ಪ್ರದರ್ಶನ ನೀಡಿ ಈಗ ಪ್ರಕಾಶ್ ಬೆಳವಾಡಿ ನಿರ್ದೇಶನದ ಪ್ರೆಂಚ್ ಮೂಲದ ಜಾನ್ ಆನ್ವಿಯವರ 'ಬೆಕೆಟ್' ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ.
ನಾಟಕ : ಬೆಕೆಟ್
ಪ್ರಸ್ತುತಿ: ಬೆಂಗಳೂರು ಥಿಯೇಟರ್ ಕಂಪನಿ
ಫ್ರೆಂಚ್ ಮೂಲ : ಜಾನ್ ಆನ್ವಿ
ನಿರ್ದೇಶನ : ಪ್ರಕಾಶ್ ಬೆಳವಾಡಿ
ಸ್ಥಳ :ರಂಗ ಶಂಕರ
ದಿನಾಂಕ : ಜನವರಿ 4
ಟಿಕೆಟ್ ದರ: 100 ರು/
ಸಂಪರ್ಕಿಸಿ : 99001 82400
ಟಿಕೆಟ್ ಬುಕ್ ಮಾಡಲು : www.bookmyshow.com
(ಒನ್ಇಂಡಿಯಾ ಸುದ್ದಿ)
-
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ









Click it and Unblock the Notifications