ಬಾಯಿಂದ ದುರ್ನಾತ, ಅಪ್ಪಿಕೊಳ್ಳಲು ನಿರಾಕರಿಸಿದ ಸ್ನೇಹಿತನಿಗೆ ಚೂರಿ ಇರಿತ
ಬೆಂಗಳೂರು, ಜುಲೈ 3: ಬಾಯಿಂದ ದುರ್ನಾತ ಬರುತ್ತಿದ್ದ ಕಾರಣ ಅಪ್ಪಿಕೊಳ್ಳಲು ನಿರಾಕರಿಸಿದ್ದಕ್ಕೆ ಸ್ನೇಹಿತನಿಗೆ ಚೂರಿ ಇರಿದ ಘಟನೆ ಬೆಂಗಳೂರಿನ ಕಲಾಸಿಪಾಳ್ಯದ ಬಳಿ ನಡೆದಿದೆ.
ಶೋಯಬ್ ಪಾಷಾ ಹಾಗೂ ನಬಿ ಸ್ನೇಹಿತರಾಗಿದ್ದರು. ಎಲ್‌ಬಿಎಫ್ ರಸ್ತೆಯಲ್ಲಿ ಅಕಸ್ಮಾತ್ ಆಗಿ ಇಬ್ಬರು ಎದುರು ಬದುರಾಗಿದ್ದಾರೆ. ಆ ಸಂದರ್ಭದಲ್ಲಿ ನಬಿ ಶಾಯಿಬ್‌ನನ್ನು ಹಗ್ ಮಾಡಿಕೊಳ್ಳಲು ಮುಂದಾಗಿದ್ದಾನೆ. ನಿನ್ನ ಬಾಯಿಯಿಂದ ದುರ್ವಾಸನೆ ಬರುತ್ತಿದೆ ದೂರ ಹೋಗು ಎಂದು ಶಾಯಿಬ್ ನಬಿಯನ್ನು ತಳ್ಳಿದ್ದಾನೆ.

ಬಳಿಕ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ.ಬಳಿಕ ನಬಿ ಶೋಯಬ್ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾನೆ. ಬೆಂಗಳೂರು ಪೊಲೀಸರು ನಬಿ ವಿರುದ್ಧ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶೋಯಬ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications