• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೋಡುಗರ ಕಣ್ಣಲ್ಲಿ ಯೋಧರಿಗೆ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ

By Nayana
|

ಬೆಂಗಳೂರು, ಆಗಸ್ಟ್ 4: ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಿಜವಾಗಿಯೂ ದೇಶಭಕ್ತಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಯೋಧರು ದೇಶಕ್ಕಾಗಿ ಏನೆಲ್ಲಾ ತ್ಯಾಗ ಮಾಡುತ್ತಾರೆ, ಅವರ ದಿನನಿತ್ಯದ ಬದುಕು ಹೇಗಿರುತ್ತದೆ ಎಂದು ಮನಮುಟ್ಟುವ ಹಾಗೆ ಕಟ್ಟಿಕೊಡಲಾಗಿದೆ.

ನವದೆಹಲಿ ಇಂಡಿಯಾ ಗೇಟ್‌ನಲ್ಲಿರುವ ಯುದ್ಧ ಸ್ಮಾರಕ ಅಮರ್ ಜವಾನ್‌ ಜ್ಯೋತಿ ಪ್ರತಿಕೃತಿ ಬಹುವರ್ಣದ ಹೂದಗಳಿಂದ ಮೇಳೈಸಿತು. ಕರಾವಳಿ, ಹಿಮಪರ್ವತಮ ಮರುಭೂಮಿ, ಅರಣ್ಯ ಎಲ್ಲವನ್ನೂ ಒಳಗೊಂಡ ಭೂ ಸೇನೆ ದೃಶ್ಯಾವಳಿಗಳನ್ನು ನೀವು ಕಾಣಬಹುದಾಗಿದೆ.

ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ

ಇಕೆಬಾನಾ, ಇಂಡೋ ಅಮೇರಿಕನ್‌ ಹೈಬ್ರೀಡ್‌ ಸೈಡ್ಸ್‌, ಜರ್ಬೆರಾ, ಡೇಲಿಯಾ ಹೀಗೆ ಲಕ್ಷಾಂತರ ಪುಷ್ಪಗಳು ಜನರನ್ನು ಬರಸೆಳೆಯುತ್ತಿವೆ.

ಪುಷ್ಪತೋಟವೆಂದಮೇಲೆ ಯುವತಿಯರು ಇಲ್ಲವೆಂದರೆ ಹೇಗೆ ಶನಿವಾರ ಎಂದು ತರಗತಿಗಳನ್ನು ಬಂಕ್‌ ಮಾಡಿ, ಕಚೇರಿಗಳಿಗೆ ರಜೆ ಹಾಕಿ, ಮಕ್ಕಳನ್ನೂ ಕೂಡ ಶಾಲೆಗೆ ಚಕ್ಕರ್‌ ಹೊಡೆಸಿ ಬಂದು ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು ಮಗುವಿನಿಂದ ಹಿಡಿದು ವೃದ್ಧರವರೆಗೂ ಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರು. ನೋಡುಗರ ಕಣ್ಣಲ್ಲಿ ಫಲಪುಷ್ಪ ಪ್ರದರ್ಶನ ಹೇಗಿತ್ತು ಎಂದು ನೋಡೋಣ

ನಾನು ನೋಡಿದ ಮೊದಲ ಪುಷ್ಪ ಪ್ರದರ್ಶನ

ನಾನು ನೋಡಿದ ಮೊದಲ ಪುಷ್ಪ ಪ್ರದರ್ಶನ

ಬೆಂಗಳೂರಿಗೆ ಬಂದು ಎರಡು ವರ್ಷ ಆಗಿದೆ, ಪತಿ ಬೆಂಗಳೂರಿನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ,, ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುತ್ತಿದ್ದೇನೆ, ಇಂತಹ ಪುಷ್ಪ ಪ್ರದರ್ಶನ ನಾನೆಲ್ಲಿಯೂ ನೋಡಿಲ್ಲ ತುಂಬಾ ಸಂತೋಷವಾಗಿದೆ.ಯೂಕೋಕ್‌-ಜಪಾನ್‌

ಅಮರ್‌ ಜವಾನ್‌ ಸ್ಮಾರಕ ನೋಡಿದರೆ ಕಣ್ತುಂಬಿ ಬರುತ್ತದೆ

ಅಮರ್‌ ಜವಾನ್‌ ಸ್ಮಾರಕ ನೋಡಿದರೆ ಕಣ್ತುಂಬಿ ಬರುತ್ತದೆ

ನಾನು ಚಿಕ್ಕವಳಿದ್ದಾಗಿನಿಂದಲೂ ಲಾಲ್‌ಬಾಗ್‌ ಪುಷ್ಪ ಪ್ರದರ್ಶನಕ್ಕೆ ಬರುತ್ತಿದ್ದೇನೆ, ಪ್ರತಿ ವರ್ಷವೂ ವಿವಿಧ ಥೀಮ್‌ಗಳನ್ನು ಇಟ್ಟುಕೊಂಡು ಪ್ರದರ್ಶನ ಏರ್ಪಡಿಸುತ್ತಾರೆ, ಈ ಬಾರಿಯ ಪ್ರದರ್ಶನದ ವಿಷಯವಸ್ತು ನನಗೆ ತುಂಬಾ ಇಷ್ಟವಾಗಿದೆ. ನಮ್ಮನ್ನು ಕಾಯುವ ಯೋಧರ ಬಗ್ಗೆ ನಮಗೆಷ್ಟು ಗೊತ್ತು ಎನ್ನುವುದನ್ನು ಯೋಚನೆ ಮಾಡಲೇ ಬೇಕು. ಇದೊಂದು ಹೊಸ ಸಂಶೋಧನೆ ಎಂದೇ ಹೇಳಬಹುದು. ಕವನಾ, ಬೆಂಗಳೂರು

ಇಸ್ರೋ ಎಚ್‌ಎಎಲ್‌ ಮಾದರಿಗಳು ತುಂಬಾ ಸೊಗಸಾಗಿದೆ

ಇಸ್ರೋ ಎಚ್‌ಎಎಲ್‌ ಮಾದರಿಗಳು ತುಂಬಾ ಸೊಗಸಾಗಿದೆ

ಗಾಜಿನ ಮನೆಯಲ್ಲಿ ಇಸ್ರೋ ನಿರ್ಮಿತ ಉಪಗ್ರಹ ಉಡಾವಣಾ ಮಾದರಿ, ಆಕಾಶ್‌ ಮತ್ತು ಬ್ರಹ್ಮೋಸ್‌ ಕ್ಷಿಪಣಿ ಮಾದರಿ ಕಣ್ತುಂಬಿಕೊಳ್ಳಬಹುದು ಬೆಂಗಳೂರಲ್ಲಿ ವಾಸಿಸುವ ಪ್ರತಿಯೊಬ್ಬರೂ ಈ ಪ್ರದರ್ಶನವನ್ನೂ ಮಿಸ್‌ ಮಾಡಿಕೊಳ್ಳಬಾರದು- ರೇಖಾ, ಬೆಂಗಳೂರು

ಕಾಲೇಜಿಗೆ ಚೆಕ್ಕರ್‌, ಫ್ಲವರ್‌ಶೋ ಗೆ ಹಾಜರ್‌

ಕಾಲೇಜಿಗೆ ಚೆಕ್ಕರ್‌, ಫ್ಲವರ್‌ಶೋ ಗೆ ಹಾಜರ್‌

ನಾನು ವಿಜಯಾ ಕಾಲೇಜಿನಲ್ಲಿ ಓದಿದ್ದು, ಆಗ ಕಾಲೇಜಿಗೆ ಚೆಕ್ಕರ್‌ ಹೊಡೆದು ಫ್ಲವರ್‌ ಶೋ ನೋಡೋಕೆ ಸ್ನೇಹಿತರೊಂದಿಗೆ ಬರ್ತಿದ್ವಿ, ಈಗಲೂ ಕೂಡ ಆ ನೆನಪುಗಳು ಹಾಗೆಯೇ ಇದೆ, ಪ್ರತಿ ವರ್ಷ ಹೋದಂತೆ ಒಂದೊಂದು ವಿಷಯವಸ್ತು ಇಟ್ಟುಕೊಂಡು ಆಯೋಜನೆ ಮಾಡುತ್ತಿದ್ದಾರೆ, ಮುಂದಿನ ಪುಷ್ಪ ಪ್ರದರ್ಶನ ಹೇಗಿರುತ್ತೋ ಎಂದು ಈಗಲೇ ಎಕ್ಸೈಟೆಡ್‌ ಆಗಿದೀನಿ. ಪ್ರಿಯಾಂಕಾ

English summary
All roads in Bangalore leading towards Lalbagh botanical park as famous and beautiful flower show kicked off on Saturday on the occasion of independence day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X