ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಟ್ ಪೊಲೀಸರ ಸಮಯ ಪ್ರಜ್ಞೆ- ರೆಡ್ ಹ್ಯಾಂಡ್‌ ಸಿಕ್ಕಿಬಿದ್ದ ಬೈಕ್‌ ಕಳ್ಳರು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಪೊಲೀಸರು ನಮ್ಮನ್ನು ಕಾಯುವ ಕಾವಲುದಾರರು. ನಮ್ಮ ಧನ ಕನಕಾಧಿಗಳನ್ನು ಕಾಯುವ ಕಾಯಕ ಯೋಗಿಗಳು. ಪೊಲೀಸರು ಸಮಯ ಪ್ರಜ್ಞೆಯಿಂದ ಕೆಲಸವನ್ನು ಮಾಡಿದರೇ ಕಳ್ಳರ ಉಪಟಳಕ್ಕೆ ಕಡಿವಾಣ ಹಾಕಬಹುದು ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಬೀಟ್ ಪೊಲೀಸರ ಸಮಯ ಪ್ರಜ್ಞೆಯಿಂದ ಕಳ್ಳರು ಬಂಧನವಾಗಿದ್ದಾರೆ. 15 ಲಕ್ಷ ಮೌಲ್ಯದ ಬೈಕ್‌ಗಳು ರಿಕವರಿಯಾಗಿದೆ.

ಬಂಡೇಪಾಳ್ಯ ಠಾಣೆಯ ಸಿಬ್ಬಂದಿ ಫಿರೋಜ್ ಘಜ್ನಿ ಮತ್ತು ಸಂದೀಪ್ ಕಾಂಬ್ಲೆ ಎಂಬುವವರು ಬಂಡೆಪಾಳ್ಯದ ಮುನಿಯಪ್ಪ ಕಾಂಪ್ಲೆಕ್ಸ್ ಬಳಿ ವಾಹನ ತಪಾಸಣೆಯನ್ನು ಮಾಡುತ್ತಿರುತ್ತಾರೆ. ಈ ವೇಳೆಯಲ್ಲಿ ಇಬ್ಬರು ಅನುಮಾನಸ್ಪದವಾಗಿ ಉತ್ತರವನ್ನು ಕೊಡುತ್ತಾರೆ. ಆ ಇಬ್ಬರ ಮೇಲೆ ಅನುಮಾನಪಟ್ಟ ಪೊಲೀಸ್ ಸಿಬ್ಬಂದಿಗಳು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಯನ್ನು ಮಾಡುತ್ತಾರೆ.

ಬಂಡೇಪಾಳ್ಯ ಪೊಲೀಸ್‌ ಠಾಣೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆಯನ್ನು ನಡೆಸಿದ ಮೇಲೆ ಇಬ್ಬರು ಕಳ್ಳರು ಎಂದು ತಿಳಿದು ಬಂದಿದೆ. ಇಬ್ಬರು ತಮಿಳು ನಾಡಿನ ಆಸಾಮಿಗಳಾಗಿದ್ದು. ಪ್ರತಿಷ್ಠಿತ ಬೈಕ್ ಗಳನ್ನು ಕದ್ದುಕೊಂಡು ಹೋಗಿ ತಮಿಳುನಾಡಿನ ಹೊಸೂರು ಸುತ್ತಮುತ್ತ ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದು ಪ್ರಾಥಮಿಕ ತನಿಖೆಯ ವೇಳೆಯಲ್ಲಿ ತಿಳಿದು ಬರುತ್ತದೆ. ಆ ಬಳಿಕ ಬಂಡೇ ಪಾಳ್ಯ ಪೊಲೀಸರು ಅಲರ್ಟ್‌ ಆಗಿ ಬೈಕ್ ರಿಕವರಿಗೆ ಮುಂದಾಗುತ್ತಾರೆ.

 ಹ್ಯಾಂಡಲ್ ಲಾಕ್ ಮುರಿದು ಕಳ್ಳತನ

ಹ್ಯಾಂಡಲ್ ಲಾಕ್ ಮುರಿದು ಕಳ್ಳತನ

ಮನೆ ಅಂಗಳದಲ್ಲಿ ಜಾಗವಿಲ್ಲದೆ ಜನ ರಸ್ತೆ ಬದಿಯೋ, ಫುಟ್ಪಾತ್ ನಲ್ಲೋ ವಾಹನಗಳನ್ನ ನಿಲ್ಲಿಸಿರುತ್ತಾರೆ. ಇದೇ ಕಳ್ಳರಿಗೆ ವರದಾನವಾಗಿದೆ. ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರವಾಹನಗಳ ಹ್ಯಾಂಡಲ್ ನ್ನು ಕಾಲಿನಿಂದ ಒದ್ದು ಮುರಿದು ಹಾಕುತ್ತದ್ದರು. ನಂತರ ಅದನ್ನ ಇಗ್ನೀಷಿಯನ್ ಕಿತ್ತು ಇಂಜೀನ್ ಡೈರೆಕ್ಟ್ ಮಾಡಿ‌ ಸ್ಟ್ರಾರ್ಟ್ ಮಾಡಿ ಅಲ್ಲಿಂದ ನೇರವಾಗಿ‌ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು. ಅಲ್ಲಿ ನಂಬರ್ ಪ್ಲೇಟ್ ಗಳನ್ನ ಬದಲಾಯಿಸುತ್ತಿದ್ದರು ಅಥವಾ ಕೆಲವೊಂದು ಗಾಡಿಗಳಿಗೆ ನಂಬರ್ ಪ್ಲೇಟೇ ಹಾಕುತ್ತಿರಲಿಲ್ಲ.

 ಫಾರೆಸ್ಟ್ ಆಫೀಸರ್ ಬೈಕ್ ಕದ್ದು ಮಾರಾಟ

ಫಾರೆಸ್ಟ್ ಆಫೀಸರ್ ಬೈಕ್ ಕದ್ದು ಮಾರಾಟ

ಕದ್ದ ವಾಹನವನ್ನು ತಿರುವಣಾಮಲೈನ ಕುಗ್ರಾಮಗಳಿಗೆ ತೆಗೆದುಕೊಂಡು ಹೋಗಿ ಹತ್ತು ಹದಿನೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಕುಗ್ರಾಮಗಳಲ್ಲೇ ಓಡಾಡುವ ವಾಹನಗಳನ್ನು ಯಾವ ಪೊಲೀಸ್ ಕೂಡ ಚೆಕ್ ಮಾಡಲ್ಲ ಎಂಬ ನಂಬಿಕೆ ಹಿನ್ನಲೆ ಅಮಾಯಕರನ್ನೆೇ ಖದೀಮರು ಟಾರ್ಗೆ್ೇಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇನ್ನು ನಗರದ ಮಡಿವಾಳ , ಹುಳಿಮಾವು ,‌ಕೋರಮಂಗಲ, ಹೆಚ್ ಎಸ್ ಆರ್ ಲೇಔಟ್ ಸೇರಿ‌ ಹಲವೆಡೆ ಕಳ್ಳತನವನ್ನು ಮಾಡಿದ್ದರು. ಧರ್ಮಪುರಿಯ ಫಾರೆಸ್ಟ್ ಆಫೀಸರ್ ನ ಜಯಬಾಲ್ ಎಂಬುವವರ ರಾಯಲ್‌ ಎನ್ ಫೀಲ್ಡ್ ಬೈಕನ್ನೂ ಕದ್ದು ಬೇರೆಯವರಿಗೆ ಮಾರಿ ಬಿಟ್ಟಿದ್ದರು ತಮಿಳುನಾಡಿನ ಕಳ್ಳರು.

 ಬಂಡೇ ಪಾಳ್ಯ ಪೊಲೀಸರು ರಿಕವರಿ ಮಾಡಿದ್ದು, ಒಂದು ಆಟೋ ಸೇರಿ 29 ದ್ವಿಚಕ್ರವಾಹನಗಳು. ಅಂದರೆ ಒಂದೆರಡು ವರ್ಷಗಳಿಂದ ಅವರು ಕದ್ದಿದ್ದೆಷ್ಟು ಎಂಬ ಲೆಕ್ಕಾಚಾರ ಹಾಕಿದ್ರೆ ಕೋಟಿಗಟ್ಟಲೆ ಮೌಲ್ಯದ ದ್ವಿಚಕ್ರವಾಹನ ಕದ್ದು ವಿಲೇವಾರಿ ಮಾಡಿರುವ ಸಾಧ್ಯತೆ ಇದೆ. ಯಸ್ ಶಾನ್ , ಶೆಹೆಂನ್ಷಾ, ರಂಜಿತ್ ಕುಮಾರ್ ಹಾಗು ಶಿವ ಎಂಬ ನಾಲ್ವರನ್ನ ಬಂಧಿಸಿ 15 ಲಕ್ಷ ಮೌಲ್ಯದ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.

 ಡಿಸಿಪಿ ಸಿಕೆ ಬಾಬರಿಂದ ಮೆಚ್ಚುಗೆ

ಡಿಸಿಪಿ ಸಿಕೆ ಬಾಬರಿಂದ ಮೆಚ್ಚುಗೆ

ಬಂಡೇಪಾಳ್ಯ ಠಾಣೆಯ ಸಿಬ್ಬಂದಿ ಫಿರೋಜ್ ಘಜ್ನಿ ಮತ್ತು ಸಂದೀಪ್ ಕಾಂಬ್ಲೆ ಎಂಬುವವರು ಬಂಡೆಪಾಳ್ಯದ ಮುನಿಯಪ್ಪ ಕಾಂಪ್ಲೆಕ್ಸ್ ಬಳಿ ವಾಹನ ತಪಾಸಣೆಯನ್ನು ಮಾಡುತ್ತಿರುತ್ತಾರೆ. ಈ ವೇಳೆಯಲ್ಲಿ ಇಬ್ಬರು ಅನುಮಾನಸ್ಪದವಾಗಿ ಉತ್ತರವನ್ನು ಕೊಡುತ್ತಾರೆ. ಆ ಇಬ್ಬರ ಮೇಲೆ ಅನುಮಾನಪಟ್ಟ ಪೊಲೀಸ್ ಸಿಬ್ಬಂದಿಗಳು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಯನ್ನು ಮಾಡುತ್ತಾರೆ. ಇದರಿಂದ ಬೈಕ್‌ ಕಳ್ಳರನ್ನು ಹಿಡಿಯಲು ಸಾಧ್ಯವಾಯಿತು ಎಂದು ತಮ್ಮ ಸಿಬ್ಬಂದಿಯ ಕಾರ್ಯವೈಕರಿಯನ್ನು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
The police are our real watchmen. Kayaka yogis who guard our money and Golds. This story is an example of how if the police work in a timely manner, they can curb the crime of thieves. Due to the punctuality of the beat police, the thieves were arrested. Bikes worth 15 lakhs have been recovered, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X