BDA: ಬೆಂಗಳೂರು ಜನರಿಗೆ ಗುಡ್ ನ್ಯೂಸ್: ಟೋಲ್ ಫ್ರೀ ರಸ್ತೆ ಸಂಚಾರದ ಅಪ್ಡೇಟ್
ಬೆಂಗಳೂರು, ಫೆಬ್ರವರಿ 17: ರಾಜಧಾನಿ ಬೆಂಗಳೂರಿನಲ್ಲಿ ಹೊಸ ಹೊಸ ಯೋಜನೆಗಳು ಚಾಲ್ತಿಯಲ್ಲಿರುತ್ತವೆ. ಸಂಚಾರ ದಟ್ಟಣೆ ನಿವಾರಣೆಗೆ ಮಾತ್ರವಲ್ಲದೇ ಸಾರ್ವಜನಿಕ ಸಂಚಾರಕ್ಕೆ ಅನುಕೂಲಕರ ಯೋಜನೆಗಳು ಆರಂಭವಾಗಿವೆ. ಮುಂದಿನ ಕೆಲವೇ ದಿನಗಳಲ್ಲಿ ನೀವು ಬೆಂಗಳೂರಿನ ಈ ಭಾಗದಲ್ಲಿ ಟೋಲ್ ರಸ್ತೆ ಇಲ್ಲದೇ, ಟೋಲ್ ಫ್ರೀ ಆಗಿ ಓಡಾಡಬಹುದಾಗಿದೆ. ಯೋಜನೆ ಏನಿದು? ಎಲ್ಲಿಂದ ಎಲ್ಲಿಗೆ ಸಂಪರ್ಕ ಇಲ್ಲಿ ತಿಳಿಯಿರಿ.
ದಕ್ಷಿಣ ಬೆಂಗಳೂರು ಪ್ರದೇಶವು ನಗರದ ಪಶ್ಚಿಮ ಭಾಗದೊಂದಿಗೆ ಸಂಪರ್ಕಿಸುವ 10.8 ಕಿ.ಮೀ. ಉದ್ದದ ರಸ್ತೆ ಯೋಜನೆ ನಡೆಯುತ್ತಿದೆ. ಇದು ಸಂಪೂರ್ಣ ಟೋಲ್-ಫ್ರೀ ಮೇಜರ್ ಆರ್ಟೀರಿಯಲ್ ರಸ್ತೆ (MAR) ಆಗಿರಲಿದೆ. ಇಲ್ಲಿ ನೀವು ಶುಲ್ಕ ಇಲ್ಲದೇ ಸಂಚಾರ ನಡೆಸಬಹುದು. ಒಂದೆರಡು ತಿಂಗಳಲ್ಲಿ ಈ ರಸ್ತೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಮೈಸೂರು ರಸ್ತೆ ಚಲ್ಲಘಟ್ಟದಿಂದ (ನಮ್ಮ ಮೆಟ್ರೋ ಡಿಪೋ) ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ವರೆಗೆ 10-ಪಥ ರಸ್ತೆ ಇದ್ದು, ಸುಮಾರು 2 ಕಿ.ಮೀ ದೂರದಲ್ಲಿ ಟೋಲ್ ಸಂಗ್ರಹಿಸುವ ಟೋಲ್ ರಸ್ತೆ ಪಕ್ಕದಲ್ಲಿ ಸಮಾನಾಂತರವಾಗಿ ಸಾಗುತ್ತದೆ.
1.5 ಗಂಟೆ ಸಂಚಾರ ಸಮಯ 10 ನಿಮಿಷಕ್ಕೆ..
ಈ ಹೊಸ ರಸ್ತೆಯೋಜನೆಯು ನೈಸ್ ಕಾರಿಡಾರ್‌ಗೆ ಸಮಾನಾಂತರವಾಗಿ ನಿರ್ಮಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಡಪ್ರಭು ಕೆಂಪೇಗೌಡ ಲೇಔಟ್ ಸಂಪರ್ಕವನ್ನು ಒದಗಿಸುತ್ತದೆ. ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ಬೆಂಗಳೂರನ್ನು ಸಂಪರ್ಕಿಸುತ್ತದೆ. ಈ ಮೊದಲು ಇದರ ಸಂಪರ್ಕಕ್ಕೆ 1.5 ಗಂಟೆ ಬೇಕಿತ್ತು. ಇದೀಗ ಆ ಸಮಯ ಕೇಲವ 10 ನಿಮಿಷಕ್ಕೆ ಇಳಿಯಲಿದೆ.

ಆರಂಭದಲ್ಲಿ ಈ ರಸ್ತೆ ಯೋಜನೆಗೆ 465 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ರಸ್ತೆ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನ ಯೋಜನೆಗೆ ಒಟ್ಟು 585 ಕೋಟಿ ರೂ. ವೆಚ್ಚವಾಗಿದೆ. BDA ನಿರ್ಮಿಸಿದ ಈ ರಸ್ತೆ ಕಂಬಿಪುರ, ಕೆ. ಕೃಷ್ಣ ಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಕೆಂಚನಾಪುರ ಮತ್ತು ಸೂಲಿಕೆರೆ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಬೆಂಗಳೂರು ಸೇರಿದಂತೆ ಈ ಭಾಗದ ಜನರಿಗೂ ಈ ರಸ್ತೆಯಿಂದ ಹೆಚ್ಚಿನ ಅನುಕೂಲ ಸಿಗಲಿದೆ.
ಒಟ್ಟು ಯೋಜನೆಗೆ 321.1 ಎಕರೆ ಭೂಮಿ ಅಗತ್ಯವಿದೆ. ಅದರ ಸ್ವಾಧೀನಪಡಿಸಿಕೊಳ್ಳುವಲ್ಲಿ ಆರಂಭಿಕ ಅಡೆತಡೆ ಉಂಟಾಗಿತ್ತು. ಒಂದಷ್ಟು ಮಾತುಕತೆ ನಡೆದಿದೆ. ಬಿಡಿಎ ಈಗ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿದೆ.
300 ಮೀಟರ್ ರಸ್ತೆ ಅಭಿವೃದ್ಧಿಗೆ ಕಾಯುವಿಕೆ
ರೈಲ್ವೆ ಅಂಡರ್‌ಪಾಸ್‌ನ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಮೈಸೂರು ರಸ್ತೆ ಬದಿಯ ಸುಮಾರು 300 ಮೀಟರ್ ರಸ್ತೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ನಾವು ಚಲ್ಲಘಟ್ಟ ಮೆಟ್ರೋ ಡಿಪೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕಾಯಬೇಕಿದೆ. ಇನ್ನೆರಡು ತಿಂಗಳಲ್ಲಿ ಇಲ್ಲಿ ಮೂಲ ಸೌಲಭ್ಯಗಳಿಗೆ ಮುಕ್ತಿ ಸಿಗಲಿದೆ. ಉತ್ತಮ ರಸ್ತೆ ಜನರದ್ದಾಗಲಿದೆ. ಮೇಜರ್ ಆರ್ಟಿಯಲ್ ರಸ್ತೆ (MAR) ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ಎಂಎಆರ್ ರಸ್ತೆಗೆ 2011 ರ ಜುಲೈ 27ರಂದು ಭೂಮಿ ಸ್ವಾಧಿನ ನಡೆದಿತ್ತು. ಯೋಜನೆಯು 2017ರ ಸೆಪ್ಟೆಂಬರ್ ಟೆಂಟರ್ ಕರೆದು, ಕೆಲಸ ಮುಗಿಸಲು 2019 ಆಗಸ್ಟ್ ತಿಂಗಳ ಗಡುವು ನೀಡಲಾಗಿತ್ತು. ಆದರೆ ಅದು ಮುಂದೂಡಿಕೆ ಆಗುತ್ತಾ ಇದೀಗ 2025ರವರೆಗೆ ಬಂದು ನಿಂತಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ರಸ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.












Click it and Unblock the Notifications