ಶೀಘ್ರ ಅರ್ಕಾವತಿ ಬಡಾವಣೆಯಲ್ಲಿ ಸೈಟ್ ವಿತರಣೆ ಕಾರ್ಯ ಆರಂಭ

ಬೆಂಗಳೂರು, ಜೂನ್ 13: ಶೀಘ್ರ ಅರ್ಕಾವತಿ ಬಡಾವಣೆಯಲ್ಲಿ ಸೈಟ್ ವಿತರಣೆ ಕಾರ್ಯ ಆರಂಭಿಸಲಾಗುವುದು ಎಂದು ಬಿಡಿಎ ತಿಳಿಸಿದೆ.

ಇಷ್ಟು ದಿನ ಆತಂಕದಲ್ಲಿದ್ದವರಿಗೆ ಬಿಡಿಎ ಭರವಸೆ ನೀಡಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದ ಸೈಟ್ ವಿತರಣೆ ಕಾರ್ಯ ಇನ್ನೇನು ಆರಂಭವಾಗಲಿದೆ.

ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ನಾಗರಿಕ ಅಹವಾಲು ಕಾರ್ಯ ಬುಧವಾರ ಪುನರಾರಂಭಗೊಂಡಿದೆ. ಅರ್ಕಾವತಿ ಬಡಾವಣೆಯ ಸೈಟುದಾರರು ಹೊರತುಪಪಡಿಸಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಭೆ ಆಗಮಿಸಿದ್ದರು.

BDA assures site distribution at Arkavati Layout

ಅರ್ಕಾವತಿ ಬಡಾವಣೆ ಹಂಚಿಕೆದಾರರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ ಅಭಿಯಂತರ ಸದಸ್ಯ ಬಿ ಶಿವಶಂಕರ್ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಪ್ರಾಧಿಕಾರವು ನಿವೇಶನವನ್ನು ನೀಡುತ್ತದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಅಹವಾಲು ಸಭೆಯನ್ನು ತಿಂಗಳ ಎರಡು ಹಾಗೂ ನಾಲ್ಕನ ಬುಧವಾರದಂದು ನಿಯಮಿತವಾಗಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಂದಿನಂತೆ ಅಹವಾಲು ಸಭೆಗೆ ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್ ಗೈರಾಗಿದ್ದರು. ಇತರೆ ಹಿರಿಯ ಅಧಿಕಾರಿಗಳ ಪೈಕಿ ಕೆಲವರಷ್ಟೇ ಬಂದು ಅಹವಾಲು ಸ್ವೀಕರಿಸಿದರು. ಒಟ್ಟಿನಲ್ಲಿ ಆದಷ್ಟು ಬೇಗ ಅರ್ಕಾವತಿ ಬಡಾವಣೆಯಲ್ಲಿ ಸೈಟು ಹಂಚಿಕೆ ಕಾರ್ಯ ಪುನರಾರಂಭಗೊಳ್ಳಲಿದೆ.

ಬಡಾವಣೆಯಲ್ಲಿ ಬರುವ ಪ್ರದೇಶಗಳು: ಬಳ್ಳಾರಿ ರಸ್ತೆ, ಓಲ್ಡ್ ಮದ್ರಾಸ್ ರಸ್ತೆಯ ಜಕ್ಕೂರು, ರಾಜನಹಳ್ಳಿ, ಸಂಪಿಗೆ ಹಳ್ಳಿ, ಥಣಿಸಂದ್ರ, ಹೆಣ್ಣೂರು, ಕೆ.ನಾರಾಯಣಪುರ ಹಾಗೂ ಬೈರತಿ ಕಾರ್ಖಾನೆ ಸೇರಿ 13ಗ್ರಾಮಗಳು ಅರ್ಕಾವತಿ ಬಡಾವಣೆ ವ್ಯಾಪ್ತಿಗೆ ಬರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+