BBMP E-Khata: ಬಿಬಿಎಂಪಿಯಿಂದ ಹೊಸ ಡಿಜಿಟಲ್ ವ್ಯವಸ್ಥೆ ಆರಂಭ
ಬೆಂಗಳೂರು, ಸೆಪ್ಟಂಬರ್ 19: ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿಯು ಲಕ್ಷಾಂತರ ಆಸ್ತಿ ಖಾತೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಿದೆ. ಇದೀಗ ಫೇಸ್‌ಲೆಸ್ ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ GPS ಆಧಾರಿತ ಮಾಹಿತಿಯನ್ನು ಪಡೆದು ಅದನ್ನು ಡಿಜಿಟಲೀಕರಣಗೊಳಿಸಲಿದೆ.
ಹೌದು, ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವ ಮತ್ತು ನಿರ್ದೇಶನದಲ್ಲಿ ಬಿಬಿಎಂಪಿಯು ಫೇಸ್‌ಲೆಸ್ ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಆರಂಭಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಜಿಪಿಎಸ್ ಮಾಹಿತಿಗಾಗಿ ಮನೆ ಮನೆ ಭೇಟಿ
ಬಿಬಿಎಂಪಿಯು ರಿಜಿಸ್ಟರ್‌ಗಳಲ್ಲಿನ ಎಲ್ಲಾ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ರೋಲ್-ಔಟ್ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. ಡಿಜಿಟಲ್ ವ್ಯವಸ್ಥೆ ಮಾಡುವಾಗ ಆಯಾ ಸ್ಥಳದ (ಆಸ್ತಿ) ಜಿಪಿಎಸ್ ಅಗತ್ಯವಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿಯು ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿ.ಪಿ.ಎಸ್. (GPS coordinates) ಮಾಹಿತಿ ಸೆರೆ ಹಿಡಿಯಲಿದೆ.
ಬಿಬಿಎಂಪಿಯಿಂದ ನಿಮ್ಮ ಆಸ್ತಿಯ ಡಿಜಿಟಲ್ ಖಾತಾ (eKhata) ಪಡೆಯಲು ಪ್ರತಿ ಆಸ್ತಿಯ ಜಿಪಿಎಸ್ ಕಡ್ಡಾಯಗೊಳಿಸಲಾಗಿದೆ. ಸದರಿ ಪ್ರಾಪರ್ಟಿ GPS ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿದೆ. ಆದ್ದರಿಂದ ಬಿಬಿಎಂಪಿಯ ಎಲ್ಲ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕರಹಿತ ಮತ್ತು ಆನ್‌ಲೈನ್ ವಿತರಣೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಡಿಜಿಟಲ್ ವ್ಯವಸ್ಥೆಗೆ ಸಾರ್ವಜನಿಕ ಸಹಕಾರ ಮುಖ್ಯ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಂಟು ವಲಯಗಳ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸದುದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹಕಾರಣದಲ್ಲಿ ನಿಮಗೆ ಉತ್ತಮ ಸೇವೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಬಿಬಿಎಂಪಿ ಆಡಳಿತವು ಬಲಗೊಂಡಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ನಿಮ್ಮ ಮನೆಗೆ ಜಿಪಿಎಸ್ ಮಾಹಿತಿ ಸಂಗ್ರಹಿಸಲು ಬಂದಾಗ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಬಿಬಿಎಂಪಿ ಅಧಿಕಾರಿಗಲು ಜನರ ಸೇವೆಗಾಗಿಯೇ ಇದೆ. ನಮ್ಮ ಸೇವೆಗಳು ನಿಮ್ಮ ಮನೆಬಾಗಿಲಿಗೆ ತಲುಪಲಿವೆ. ಡಿಜಿಟಲ್ ವ್ಯವಸ್ಥೆ ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲ ಇಷ್ಟಪಡುವ ನಗರವನ್ನು ರಚಿಸಲು ನಿಮ್ಮ ಸಹಕಾರವು, ಸಲಹೆಗಳೂ ಅಗತ್ಯವಾಗಿರುತ್ತದೆ ಎಂದು ತುಷಾರ್ ಗಿರಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಪಾಲಿಕೆ ಜೊತೆಗೆ ವಿಲೀನಗೊಳಿಸುವ ಮೊದಲು ಗ್ರಾಮ ಪಂಚಾಯಿತಿಯಿಂದ ಇ-ಖಾತಾ ನೀಡಲಾಗುತ್ತಿತ್ತು. ಅಂತಹ ಹಳೆಯ ಇ-ಖಾತಾ ಹೊಂದಿದ್ದ ನಗರದ ಮಲ್ಲಸಂದ್ರ ಕಾವಲ್ ಗ್ರಾಮಗಳ ವ್ಯಾಪ್ತಿಯ 2500 ಸತ್ತುಗಳನ್ನು ಬಿಬಿಎಂಪಿ ಸ್ವಯಂಚಾಲಿತ ಇ-ಖಾತಾ ಆಗಿದೆ ಮಾಡಿದೆ.












Click it and Unblock the Notifications