Bengaluru-ಸಿಹಿ ಸುದ್ದಿ: ನಗರದ ಗಾಳಿ ಗುಣಮಟ್ಟ ಸುಧಾರಣೆಗೆ ನೂರಾರು ಇ-ಬೈಕ್ ಖರೀದಿಗೆ ಬಿಬಿಎಂಪಿ ಸಜ್ಜು, ಹೇಗೆ?

ಬೆಂಗಳೂರಲ್ಲಿನ ವಾಯು ಮಾಲಿನ್ಯದ ಗುಣಮಟ್ಟ ಸುಧಾರಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೂರಾರು ವಿದ್ಯುತ್ ಚಾಲಿತ ಬೈಕ್‌ಗಳನ್ನು ಖರೀದಿಸಲು ಮುಂದಾಗಿದೆ. ಅವುಗಳ ಬಳಕೆ, ಪ್ರಯೋಜನ ಏನು? ತಿಳಿಯಿರಿ.

ಬೆಂಗಳೂರು, ಮಾರ್ಚ್ 09: ಹೆಚ್ಚು ಜನದಟ್ಟಣೆ ಇರುವ ಮತ್ತು ನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ಉಂಟಾಗುವುದು ಸಾಮಾನ್ಯ ಎಂಬಂತಾಗಿದೆ. ಇಂತಹ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೂರಾರು ವಿದ್ಯುತ್ ಚಾಲಿತ ಬೈಕ್‌ಗಳನ್ನು ಖರೀದಿಸಲು ಮುಂದಾಗಿದೆ.

ಬಿಬಿಎಂಪಿಯು ನಗರದ ಗಾಳಿಯ ಗುಣಮಟ್ಟ ಸುಧಾರಿಸುವ ಪ್ರಯತ್ನದಲ್ಲಿದೆ. ಈ ಸಂಬಂಧ, ಕೇಂದ್ರ ಸರ್ಕಾರವು ನಡೆಸುತ್ತಿರುವ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (NCAP) ಅಡಿಯಲ್ಲಿ ಬಿಬಿಎಂಪಿಯು 270 ಇ-ಬೈಕ್‌ಗಳನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಸಜ್ಜಾಗಿದೆ.

Bengaluru : BBMP Will Be Buy 270 EV Bike For improve City Air Quality Soon

ಇಷ್ಟೊಂದು ಬೈಕ್‌ಗಳ ಖರೀದಿ ಏಕೆ?

ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ 243 ವಾರ್ಡ್‌ಗಳಲ್ಲಿನ ದುರ್ಬಲ ಕಸ-ಸಂಗ್ರಹಣೆ ಕೇಂದ್ರಗಳಲ್ಲಿ ಬೆಂಕಿಯ ಘಟನೆಗಳನ್ನು ನಿಭಾಯಿಸಲು ಈ ಇ-ಬೈಕ್ ಗಳು ಮುಖ್ಯ ಪಾತ್ರ ನಿರ್ವಹಿಸಲಿವೆ. ಬೆಂಕಿ ನಂದಿಸಿ ಹೊಗೆ/ಮಾಲಿನ್ಯ ಕಡಿಮೆ ಮಾಡಲು ಅಗ್ನಿಶಾಮಕ ಸಾಧನಗಳ ಅಗತ್ಯವಿರುತ್ತದೆ. ಅಂತಹ ಸಾಧನಗಳನ್ನು ಇ-ಬೈಕ್‌ಗೆ ಅಳವಡಿಸಲಾಗುವುದು.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರು, ಪಾಲಿಕೆಯ ನಮ್ಮ ಮಾರ್ಷಲ್‌ಗಳು ಮತ್ತು ಆರೋಗ್ಯ ನಿರೀಕ್ಷಕರು ಕಸದ ರಾಶಿಗಳ ಮೇಲೆ ನಿಗಾ ಇಡಲು ಈ ಇ-ಬೈಕ್‌ಗಳನ್ನು ಬಳಸಲಿದ್ದಾರೆ. ಇ- ವಾಹನಗಳು ಜಿಪಿಎಸ್-ಶಕ್ತಗೊಂಡಿದ್ದು, ಬಿಬಿಎಂಪಿಯ ಕಮಾಂಡ್ ಸೆಂಟರ್ ಅವರ ಚಲನವಲನಗಳನ್ನು ಪತ್ತೆ ಮಾಡಲು ಸಹ ಇವು ಅನುಕೂಲಕರವಾಗಿವೆ ಎಂದು ಅವರು ವಿವರಿಸಿದರು.

Bengaluru : BBMP Will Be Buy 270 EV Bike For improve City Air Quality Soon

ನಗರದಲ್ಲಿ ಗಾಳಿಯ ಗುಣಮಟ್ಟದ ಸುಧಾರಣೆಗೆ ಇ-ಬೈಕ್‌ಗಳ ಖರೀದಿಗೆ ನಿರ್ಧರಿಸಲಾಗಿದೆ. ಕೆಲವು ಸ್ಥಳಗಳಲ್ಲಿ ದುರ್ಬಲ ಸ್ಥಳಗಳಲ್ಲಿ ದೂರಿನ ಮೇರೆಗೆ ಇ-ಬೈಕ್ ಸಮೇತ ಬೆಂಕಿ ನಂದಿಸಲು ಮಾರ್ಷಲ್‌ಗಳು ಹಾಜರಾಗುತ್ತಾರೆ ಎಂದರು.

ಬೆಂಗಳೂರಿನಲ್ಲಿ ಅವೈಜ್ಞಾನಿಕ ಕಸ ವಿಲೇವಾರಿ ಹೆಚ್ಚಾಗಿದೆ. ಹೀಗೆ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ್ದರ ಹಿನ್ನೆಲೆ ಬಿಬಿಎಂಪಿ ಮಾರ್ಷಲ್‌ಗಳು ಅಪಾರ ಪ್ರಮಾಣದಲ್ಲಿ ದಂಡ ಸಂಗ್ರಹಿಸಿದ್ದಾರೆ. 2019ರ ಸೆಪ್ಟೆಂಬರ್ ನಿಂದ 2023ರ ಜನವರಿ ಮಧ್ಯೆದಲ್ಲಿ ಸಾರ್ವಜನಿಕರಿಂದ, ಅಪಾರ್ಟ್‌ಮೆಂಟ್‌ಗಳಲ್ಲಿನ ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಈ ಅವಧಿಯಲ್ಲಿ ಸುಮಾರು 27 ಕೋಟಿ ರೂಪಾಯಿ ದಂಡ ಕಟ್ಟಿದ್ದಾರೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+