ಬೆಂಗಳೂರಿಗರ ಆಸ್ತಿ ಮೇಲೆ ಬೀಳುತ್ತೆ ಶೇ.25-30 ರಷ್ಟು ಅಧಿಕ ತೆರಿಗೆ ಹೊರೆ

ಬೆಂಗಳೂರು, ನವೆಂಬರ್ 22: ಬೆಂಗಳೂರು ಮಹಾನಗರ ಪಾಲಿಕೆ 2019-2020ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಬೆಂಗಳೂರಿಗರ ಮೇಲೆ ಶೇ.25ರಷ್ಟು ವಸತಿ ಸ್ವತ್ತುಗಳಿಗೆ ಮತ್ತು ಶೇ.30ರಷ್ಟು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಮುಂದಾಗಿದೆ.

ಈ ಕುರಿತು ಪಾಲಿಕೆ ಅಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದರ ಅನುಮೋದನೆಗಾಗಿ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಮುಂದೆ ಬಿಬಿಎಂಪಿ ಆಯುಕ್ ಎನ್ ಮಂಜುನಾಥ್ ಪ್ರಸಾದ್ ಅವರು ಟಿಪ್ಪಣಿ ಮಂಡಿಸಿದ್ದಾರೆ.

ಬಿಬಿಎಂಪಿಯ ಕೆಮೆಂಸಿ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲು ಮತ್ತೆ ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಆದರೂ 2008ರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಮುಂದೂಡಿಕೊಂಡು ಬಂದಿದ್ದ ಬಿಬಿಎಂಪಿ 2016-17 ನೇ ಸಾಲಿನಲ್ಲಿ ಪರಿಷ್ಕರಿಸಿ ವಸತಿ ಸ್ವತ್ತುಗಳಿಗೆ ಶೇ.20ರಷ್ಟು ಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿತ್ತು.

2019ನೇ ಸಾಲಿನಲ್ಲಿ ತೆರಿಗೆ ಶೇ.25ರಿಂದ 30ರಷ್ಟು ಹೆಚ್ಚಿಸಲು ಸಿದ್ಧತೆ

2019ನೇ ಸಾಲಿನಲ್ಲಿ ತೆರಿಗೆ ಶೇ.25ರಿಂದ 30ರಷ್ಟು ಹೆಚ್ಚಿಸಲು ಸಿದ್ಧತೆ

ಬಿಬಿಎಂಪಿ 2016-17ನೇ ಸಾಲಿನಲ್ಲಿ ಪರಿಷ್ಕರಿಸಿಶೇ.20-25ರಷ್ಟು ತೆರಿಗೆ ಹೆಚ್ಚಳ ಮಾಡಿತ್ತು, ಇದೀಗ ತೆರಿಗೆ ಹೆಚ್ಚಿಸಿ ಮತ್ತೆ ಮೂರು ವರ್ಷ ಕಳೆಯುತ್ತಿರುವುದರಿಂದ 2019ನೇ ಸಾಲಿನಲ್ಲಿ ಮತ್ತೆ ತೆರಿಗೆಯನ್ನು ಶೇ.25-30ರಷ್ಟು ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ.

 2016ರ ತೆರಿಗೆಗಿಂತ ಶೇ.5ರಷ್ಟು ಹೆಚ್ಚುವರಿ

2016ರ ತೆರಿಗೆಗಿಂತ ಶೇ.5ರಷ್ಟು ಹೆಚ್ಚುವರಿ

ಆಯುಕ್ತರು ಮಂಡಿಸಿರುವ ಆಸ್ತಿ ತೆರಿಗೆ ಹೆಚ್ಚಿಸುವ ಟಿಪ್ಪಣಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಕೂಡ ಮಂಡಿಸಿ ಯಥಾವತ್ತಾಗಿ ಅನುಮೋದನೆ ದೊರೆತರ 2019ರ ಏಪ್ರಿಲ್ ನಿಂದ ತೆರಿಗೆ ಹೆಚ್ಚಳವಾಗಲಿದೆ. ಇದು 2016ರಲ್ಲಿ ಏರಿಸಲಾಗಿದ್ದ ಆಸ್ತಿ ತೆರಿಗೆ ಪ್ರಮಾಣಕ್ಕಿಂತ ಶೇ.5ರಷ್ಟು ಹೆಚ್ಚುವರಿಯಾಗಲಿದೆ.

ತೆರಿಗೆ ಸಂಗ್ರಹಕ್ಕೆ ವಲಯ ವರ್ಗೀಕರಣ

ತೆರಿಗೆ ಸಂಗ್ರಹಕ್ಕೆ ವಲಯ ವರ್ಗೀಕರಣ

ಸ್ಥಿರಾಸ್ತಿಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆರು ವಲಯಗಳನ್ನು ವರ್ಗೀಕರಣ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಇದಕ್ಕಾಗಿ ಎಬಿಸಿಡಿಇಎಫ್ ಎಂಬ ವಲಯಗಳನ್ನು ವಿಂಗಡಣೆ ಮಾಡಿಕೊಳ್ಳಲಾಗಿದೆ. ಒಂದೊಂದು ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ಮಾಡಿ ಸ್ವತ್ತುಗಳ ಮಾಲೀಕರಿಂದ ಸಂಗ್ರಹಿಸಲಾಗುತ್ತದೆ.

ತೆರಿಗೆ ಸಂಗ್ರಹ ಹೇಗೆ

ತೆರಿಗೆ ಸಂಗ್ರಹ ಹೇಗೆ

ಆಗಿನ ದರಂದತೆ ಎ ವಲಯದಲ್ಲಿನ ವಸತಿ ಕಟ್ಟಡಗಳಿಗೆ ಚದರಡಿಗೆ 2.50ರೂ, ವಾಣಿಜ್ಯ ಸ್ವತ್ತುಗಳಿಗೆ 5 ರೂ, ಬಿ ವಲಯಯದ ವಸತಿ ಕಟ್ಟಡಗಳಿಗೆ 2 ರೂ ಮತ್ತು ವಾಣಿಜ್ಯ ಕಟ್ಟಡಗಳಿಗೆ 4 ರೂ ತೆರಿಗೆ ನಿಗದಿಪಡಿಸಲಾಗಿದೆ.

2016-17ರಲ್ಲಿ ಎ ವಲಯದ ವಸತಿ ಕಟ್ಟಡಗಳಿಗೆ 3 ರೂ, ವಾಣಿಜ್ಯ ಸ್ವತ್ತುಗಳಿಗೆ 6 ರೂ ನಿಗದಿಪಡಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಲಯ ವರ್ಗೀಕರಣ ಕೈಬಿಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+