ಕೆಲವು ಕೋವಿಡ್ ಕೇರ್ ಸೆಂಟರ್ ಮುಚ್ಚಲಿದೆ ಬಿಬಿಎಂಪಿ
ಬೆಂಗಳೂರು, ಆಗಸ್ಟ್ 26: ಬೆಂಗಳೂರು ನಗರದಲ್ಲಿನ ಕೆಲವು ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಲು ಬಿಬಿಎಂಪಿ ಚಿಂತನೆ ನಡೆಸಿದೆ. ನಗರದಲ್ಲಿನ 4576 ಹಾಸಿಗೆಗಳ ಪೈಕಿ 2786 ಮಾತ್ರ ಭರ್ತಿಯಾಗಿದೆ.
Recommended Video
ಕೋವಿಡ್ ಸೋಂಕಿತರು, ಸೋಂಕಿತರ ಜೊತೆ ಸಂಪರ್ಕದಲ್ಲಿ ಇದ್ದವರು ಕೋವಿಡ್ ಕೇರ್ ಸೆಂಟರ್‌ಗಿಂತ ಹೋಂ ಐಸೊಲೇಷನ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ, ಕೇರ್ ಸೆಂಟರ್ ಮುಚ್ಚುವ ಚಿಂತನೆ ನಡೆದಿದೆ.
ಕೋವಿಡ್ ಸೋಂಕು ಇರುವುದು ಖಚಿತವಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ರೋಗಿಗಳ ಸಂಖ್ಯೆ ಕೇವಲ ಶೇ 5ರಷ್ಟು ಮಾತ್ರ. ಉಳಿದವರು ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಬೆಂಗಳೂರು ನಗರದಲ್ಲಿ 2294 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,12,087ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35,430.

ದೇಶದಲ್ಲೇ ದೊಡ್ಡ ಕೋವಿಡ್ ಸೆಂಟರ್
ದೇಶದಲ್ಲಿಯೇ ದೊಡ್ಡ ಕೋವಿಡ್ ಕೇರ್ ಸೆಂಟರ್ ಬೆಂಗಳೂರು ಹೊರವಲಯದ ಬಿಐಇಸಿಯಲ್ಲಿದೆ. 10 ಹಾಸಿಗೆಯ ಈ ಸೆಂಟರ್‌ನಲ್ಲಿ 6,500 ಹಾಸಿಗೆ ರೋಗಿಗಳಿಗೆ ಲಭ್ಯವಿದೆ. 1500 ಹಾಸಿಗೆಗಳನ್ನು ರೋಗಿಗಳಿಗೆ ಓಪನ್ ಮಾಡಲಾಗಿದೆ. 550 ರೋಗಿಗಳು ಇಲ್ಲಿದ್ದಾರೆ.

12 ಕೋವಿಡ್ ಕೇರ್ ಸೆಂಟರ್‌ಗಳು
ಬೆಂಗಳೂರು ನಗರದಲ್ಲಿ 12 ಕೋವಿಡ್ ಕೇರ್ ಸೆಂಟರ್‌ಗಳಿವೆ. ಬಿಬಿಎಂಪಿ ನೀಡುವ ಮಾಹಿತಿಯಂತೆ 4576 ಹಾಸಿಗೆಗಳು ಪ್ರಸ್ತುತ ಲಭ್ಯವಿದೆ. ಇವುಗಳಲ್ಲಿ 2786 ಹಾಸಿಗೆಗಳು ಭರ್ತಿಯಾಗಿವೆ. ಉಳಿದಂತೆ ಹಾಸಿಗೆಗಳು ಖಾಲಿ ಇದ್ದು ಕೇರ್ ಸೆಂಟರ್‌ಗಳ ನಿರ್ವಹಣೆಯೂ ಬಿಬಿಎಂಪಿಗೆ ಹೊರೆಯಾಗಿದೆ.

ಕೋವಿಡ್ ಕೇರ್ ಸೆಂಟರ್‌ಗೆ ಬರುವ ಪ್ರಕರಣ
ಜುಲೈ 1ರಿಂದ ಆಗಸ್ಟ್ 18ರ ತನಕ 92,212 ಕೋವಿಡ್ ಪ್ರಕರಣಗಳು ನಗರದಲ್ಲಿ ದಾಖಲಾಗಿವೆ. ಇವುಗಳಲ್ಲಿ 39.1 ಶೇ ಪ್ರಕರಣಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿವೆ. ಶೇ 35.1 ರಷ್ಟು ಪ್ರಕರಣಗಳು ಹೋಂ ಐಸೊಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿವೆ. ಕೋವಿಡ್ ಕೇರ್ ಸೆಂಟರ್‌ಗೆ ಬಂದ ಪ್ರಕರಣಗಳು ಶೇ 15.1ರಷ್ಟು ಮಾತ್ರ.

ಕೋವಿಡ್ ಕೇರ್ ಸೆಂಟರ್ ಬಂದ್
ಕೋವಿಡ್ ಕೇರ್ ಸೆಂಟರ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು, "ಹಲವು ರೋಗಿಗಳು ಹೋಂ ಐಸೊಲೇಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಕೋವಿಡ್ ಕೇರ್ ಸೆಂಟರ್ ಮುಚ್ಚುವ ಕುರಿತು ಚಿಂತನೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications