ಮಂಗಮ್ಮನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಪುನರಾರಂಭ
ಬೆಂಗಳೂರು, ಮೇ 16: ಜಾಗದ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿದ್ದ ವಿವಾದ ಬಗೆಹರಿದಿದ್ದು, ಮಂಗಲಮ್ಮನಪಾಲ್ಯದಲ್ಲಿ ಇಂದಿರಾ ಕ್ಯಾಂಟೀನ್ ಪುನರಾರಂಭಗೊಂಡಿದೆ.
ಕ್ಯಾಂಟೀನ್ ನಿರ್ಮಾಣವಾಗಿದ್ದ ಜಾಗ ಖಾಸಗಿಯವರಿಗೆ ಸೇರಿದ್ದು ಎಂಬ ವಿಷಯವಾಗಿ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳಿನಿಂದ ಕ್ಯಾಂಟೀನ್ ಸೇವೆ ಸ್ಥಗಿತಗೊಂಡಿತ್ತು. ಕಳೆದ 15 ದಿನಗಳ ಹಿಂದೆ ಬಿಬಿಎಂಪಿ ಪರ ಕೋರ್ಟ್ ತೀರ್ಪು ನೀಡಿತ್ತು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕ್ಯಾಂಟೀನ್ ಪುನರಾರಂಭಕ್ಕೆ ಜನಪ್ರತಿನಿಧಿಗಳು ಮುಂದಾಗಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳೇ ಮುಂದೆ ನಿಂತು ಸೋಮವಾರ ಕ್ಯಾಂಟೀನ್ ಪುನರ್ ಆರಂಭಿಸಿದ್ದಾರೆ.

ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಹಬ್ಬಸ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಉಪಹಾರ ಸೇವಿಸಲು ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು. ಈ ಕ್ಯಾಂಟೀನ್ ಕೂಡ ನಗರದಲ್ಲಿರುವ ಉಳಿದಲೆಲ್ಲಾ ಇಂದಿರಾ ಕ್ಯಾಂಟೀನ್ ರೀತಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications