Bengaluru: ರಸ್ತೆಗುಂಡಿ ಮುಚ್ಚಲು ಹಣ ಹಂಚಿಕೆಯಲ್ಲಿ ಕಡಿತ, ಬಿಡುಗಡೆ ಆಗಿದ್ದೆಷ್ಟು? ಕೆಲಸ ಆರಂಭ ಯಾವಾಗ?
ಬೆಂಗಳೂರು, ಅಕ್ಟೋಬರ್ 24: ರಸ್ತೆಗುಂಡಿಗಳಿಂದಲೂ ಆಗಾಗ ಸುದ್ದಿಯಲ್ಲಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಆಗಿದೆ. ಮುಂದಿನ ನವೆಂಬರ್ ನಿಂದ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ಈ ಸಂಬಂಧ ಹಣ ಬಿಡುಗಡೆ ಹಣದಲ್ಲಿ ಕಡಿತ ಮಾಡಲಾಗಿದೆ. ಈ ವಿಚಾರ ಇದೀಗ ಚರ್ಚೆಯಾಗುತ್ತಿದೆ.
ಪ್ರತಿ ವರ್ಷದಂತೆ ಪ್ರತಿ ವಾರ್ಡಿಗೆ ತಲಾ 20 ಲಕ್ಷ ರೂ.ನಂತೆ ನೀಡದೆಯೇ ಈ ವರ್ಷವು ವಾರ್ಡಿಗೆ 15 ಲಕ್ಷ ರೂಪಾಯಿಯಂತೆ 225 ವಾರ್ಡ್‌ಗಳಿಗೆ ಸರ್ಕಾರ ಅನುದಾನ ಬಿಡುಗೆ ಮಾಡಿದೆ. ದುಬಾರಿ ಕಾಲದಲ್ಲಿ ಐದು ಲಕ್ಷ ಅನುದಾನ ಕಡಿತಕ್ಕೆ ಕಾರಣವನ್ನು ಸರ್ಕಾರ ತಿಳಿಸಿಲ್ಲ. ಇರುವ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ ಆಯಾಯ ವಾರ್ಡ್‌ಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಸರ್ಕಾರದ ಭೊಕ್ಕಸದಲ್ಲಿ ಹಣದ ಕೊರೆತೆ ಇರುವ ಕಾರಣದಿಂದ ಈ ಬಾರಿ ಪ್ರತಿ ವಾರ್ಡ್ ರಸ್ತೆಯ ಗುಂಡಿಯ ಮುಚ್ಚಲು 5 ಲಕ್ಷ ರೂಪಾಯಿ ಕಡಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ತುಷಾರ್ ಗಿರಿನಾಥ್ ಪ್ರತಿಕ್ರಿಯೆ
ಒಂದು ಚದರ ಮೀಟರ್ ಗುಂಡಿ ಮುಚ್ಚಲು 1200 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ರಸ್ತೆ ಗುಂಡಿ ಮುಚ್ಚಲು ತಲಾ 15 ಲಕ್ಷ ಬಿಡುಗಡೆ ಆಗಿದೆ. ಇನ್ನೂ ಕಾಮಗಾರಿಯನ್ನು ಗಮನಿಸುವಂತೆ ವಾರ್ಡ್ ಸಮಿತಿಗಳಿಗೆ ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪ್ರತಿ ವಾರ್ಡ್‌ಗಳಿಗೆ 15 ಲಕ್ಷ ರೂಪಾಯಿ ಹಣ ನೀಡಲಾಗಿದೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಗುಂಡಿ ಮುಚ್ಚು ಕಾರ್ಯ ಆರಂಭಗೊಂಡಿದೆ. ಉಳಿದ ವಾರ್ಡ್‌ಗಳಲ್ಲಿ ನವೆಂಬರ್ ತಿಂಗಳಿನಿಂದ ಕೆಲಸ ಆರಂಭಗೊಳ್ಳಲಿದೆ ಎಂದರು.
ಇಷ್ಟು 1200ಕ್ಕೂ ಹೆಚ್ಚು ರಸ್ತೆಗುಂಡಿ ಮುಚ್ಚಬಹುದು?
ಪ್ರತಿ ವಾರ್ಡ್‌ಗೆ ಹಂಚಿಕೆಯಾದ 15 ಲಕ್ಷ ರೂಪಾಯಿ ಹಣದಲ್ಲಿ 1200ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಬಹುದು. ಆದರೆ ಎಂಜಿನಿಯರ್‌ಗಳು ಹಣ ಬಳಕೆಯಲ್ಲಿ ಬುದ್ಧಿವಂತಿಕೆ ಉಪಯೋಗಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬಿಬಿಎಂಪಿ ವ್ಯಾಪ್ತಿಯ ಯೋಜನೆ,ಕಾಮಗಾರಿ, ಗುತ್ತಿಗೆದಾರರು ಹಾಗೂ ಇನ್ನಿತರ ವಿವರಗಳ ಬಗ್ಗೆ ಗಮನ ಕೊಡಲು ಮಂಡಳಿಗಳನ್ನು ನಿಯೋಜನೆಗೆ ಪಾಲಿಕೆಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications