ಬಿಬಿಎಂಪಿಯಿಂದ ಕೆಂಪೇಗೌಡ ದಿನಾಚರಣೆ: ಪ್ರಶಸ್ತಿಗೆ 123 ಅರ್ಜಿ ಸಲ್ಲಿಕೆ
ಬೆಂಗಳೂರು, ಜು.3: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ 123 ಅರ್ಜಿಗಳು ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆ ಮಾಡಿದ ನಂತರ ಬಿಬಿಎಂಪಿಯು ಕೂಡ ಆಚರಿಸಲು ನಿರ್ಧರಿಸಿದೆ.
ಪ್ರತಿವರ್ಷವು ಬೆಂಗಳೂರು ಕರಗ ನಡೆಯುವ ದಿನ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಈ ವರ್ಷ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮುಂದೂಡಲಾಗಿತ್ತು. ಇದೀಗ ಜುಲೈ ಅಂತ್ಯದೊಳಗೆ ಕೆಂಪೇಗೌಡ ದಿನಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಅಂದು ನೀಡಲಾಗುವ ಕೆಂಪೇಗೌಡ ಪ್ರಶಸ್ತಿಗೆ ಈವರೆಗೆ 123 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷದ ಕಾರ್ಯಕ್ರಮದಲ್ಲಿ 200 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ಎಷ್ಟು ಮಂದಿಗೆ ಪ್ರಶಸ್ತಿ ನೀಡಬೇಕು ಎಂಬುದನ್ನು ಬಿಬಿಎಂಪಿ ನಿರ್ಧರಿಸಿಲ್ಲ. ಆದರೆ ಈ ಬಾರಿಯೂ 200 ಸಾಧಕರಿಗೆ ಪ್ರಶಸ್ತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಶಸ್ತಿಗಾಘಿ ಈವರೆಗೆ ಕ್ರೀಡಾ ಕ್ಷೇತ್ರದಿಂದ 26, ರಂಗಭೂಮಿ ಯಿಂದ 21, ಸಮಾಜಸೇವೆಯಿಂದ 19 ಸೇರಿ ಒಟ್ಟು 16 ಕ್ಷೇತ್ರಗಳಿಂದ ಅರ್ಜಿ ಸಲ್ಲಿಎಕಯಾಗಿದೆ. ಕೆಂಪೇಗೌಡ ದಿನಾಚರಣೆಯನ್ನು ನಡೆಸಲು 8 ಸಮಿತಿಗಳನ್ನು ರಚಿಸಲಾಗಿದೆ. ಆಯೋಜನೆಯ ಉಸ್ತುವಾರಿಗೆ ರಚಿಸಿರುವ ಸ್ವಾಗತ ಮತ್ತು ಸನ್ಮಾನ ಸಮಿತಿಗೆ ಮೇಯರ್ ಅಧ್ಯಕ್ಷರಾಗಿರುತ್ತಾರೆ.











Click it and Unblock the Notifications