ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100% ಜನರಿಗೆ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲು ಬಿಬಿಎಂಪಿ ಯೋಜನೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಬಿಬಿಎಂಪಿ ವ್ಯಾಪ್ತಿಯಲ್ಲಿ 100% ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡುವ ಯೋಜನೆಯನ್ನು ಬಿಬಿಎಂಪಿ ಹಮ್ಮಿಕೊಂಡಿದೆ.

ಮುಂದಿನ 45 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಹಾಗೂ 100% ಮೊದಲ ಡೋಸ್ ಲಸಿಕೆ ಗುರಿಯನ್ನು ಸಾಧಿಸಲು ಕ್ರಿಯಾಯೋಜನೆ ಹೊರತಂದಿದೆ. ತನ್ನ ವ್ಯಾಪ್ತಿಯ ಶೇ 100ರಷ್ಟು ಮಂದಿಗೆ ಕೊರೊನಾ ಮೊದಲ ಡೋಸ್ ಲಸಿಕೆ ನೀಡಲು ಬಿಬಿಎಂಪಿ ಗುರಿ ಹೊಂದಿರುವುದಾಗಿ ತಿಳಿಸಿದೆ.

ಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿಬೆಂಗಳೂರಲ್ಲಿ ಲಸಿಕೆ ಪಡೆಯುವವರಿಗೆ ಸಿಹಿಸುದ್ದಿ

ಈ ಗುರಿ ಸಾಧಿಸಲು ಲಸಿಕೆ ನೀಡುವ ಸಮಯವನ್ನು ವಿಸ್ತರಿಸಿದ್ದು, ಸಂಜೆ 4ರಿಂದ ರಾತ್ರಿ 9 ಗಂಟೆವರೆಗೂ ಸಮಯ ವಿಸ್ತರಣೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎರಡು ಲಸಿಕಾ ಕೇಂದ್ರಗಳು ದಿನವೂ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿರುವುದಾಗಿ ತಿಳಿಸಿದೆ.

BBMP Plans For 100 Percent Cover Of First Corona Vaccine Dose

'ಈಗ ಪ್ರತಿದಿನ ಒಂದು ಲಕ್ಷ ಲಸಿಕೆ ಪೂರೈಕೆ ಲಭ್ಯವಿದೆ. ಮುಂದಿನ 45 ದಿನಗಳಲ್ಲಿ ಉದ್ದೇಶಿತ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಈಗ ನಮಗೆ ಸಾಕಷ್ಟು ಲಸಿಕೆಗಳ ಲಭ್ಯವಿದೆ. ಈ ಮುನ್ನ ದಿನನಿತ್ಯ ಲಸಿಕೆಗಳ ಪೂರೈಕೆ 35-50 ಸಾವಿರ ಇದ್ದದ್ದು ಈಗ ಒಂದು ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಸ್ಟ್‌ 29ರವರೆಗೆ 75% ಮೊದಲ ಡೋಸ್ ಪೂರೈಕೆ ಹಾಗೂ 27% ಎರಡೂ ಡೋಸ್‌ಗಳ ಪೂರೈಕೆ ಮಾಡಲಾಗಿದೆ. ಹೆಚ್ಚು ಜನರಿಗೆ ಲಸಿಕೆ ನೀಡುವ ಉದ್ದೇಶದಿಂದ 'ಬೃಹತ್ ಲಸಿಕಾ ಶಿಬಿರ' ಎಂಬ ಮೆಗಾ ಕ್ಯಾಂಪ್ ಕೂಡ ಆರಂಭಿಸಿದೆ. ಮಲ್ಲೇಶ್ವರಂ ಆಟದ ಮೈದಾನ, ಯಲಹಂಕ ನ್ಯೂಟೌನ್‌ನ ಎಪಿಡೆಮಿಕ್ ಡಿಸೀಸಸ್ ಆಸ್ಪತ್ರೆ, ಅಂಬೇಡ್ಕರ್ ಭವನದಲ್ಲಿ ಶಿಬಿರವನ್ನು ಹಮ್ಮಿಕೊಂಡಿದೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮನೆ- ಮನೆಗೆ ಕೊರೊನಾ ಲಸಿಕೆ ಸಾಧ್ಯತೆಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮನೆ- ಮನೆಗೆ ಕೊರೊನಾ ಲಸಿಕೆ ಸಾಧ್ಯತೆ

ಕೊಳೆಗೇರಿ ಹಾಗೂ ಇನ್ನಿತರೆ ಕಡೆಗಳಲ್ಲಿ ಲಸಿಕೆ ನೀಡಲು ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲು ಬಿಬಿಎಂಪಿ ಯೋಜನೆ ಹಾಕಿಕೊಂಡಿದೆ. ಮೊಬೈಲ್ ಲಸಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಬಸ್, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸರ್ಕಾರಿ ಕಚೇರಿಗಳ ಬಳಿ ಶಿಬಿರಗಳನ್ನು ಹಮ್ಮಿಕೊಳ್ಳಲಿದ್ದು, ಹಿರಿಯ ನಾಗರಿಕರಿಗೆ ಹಾಗೂ ತೀವ್ರ ಅನಾರೋಗ್ಯ ಹೊಂದಿರುವವರಿಗೆ ಮನೆಗೇ ಹೋಗಿ ಲಸಿಕೆ ನೀಡಲಿದೆ.

BBMP Plans For 100 Percent Cover Of First Corona Vaccine Dose

ಪ್ರತಿ ಬುಧವಾರ 'ಲಸಿಕಾ ಮೇಳ' ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಕೊಳೆಗೇರಿ ನಿವಾಸಿಗಳಿಗೆ ಪ್ರತಿ ದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರು ವಾಸ ಮಾಡುವ ಸ್ಥಳದಲ್ಲೇ ಸಿಬ್ಬಂದಿ ನಿಯೋಜಿಸಿ ಅಲ್ಲೇ ಲಸಿಕೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ24 ಗಂಟೆ ಲಸಿಕೆ ನೀಡುವ ಕೇಂದ್ರ
ಲಸಿಕೆ ನೀಡುವ ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿರುವ ಬಿಬಿಎಂಪಿ, ಬೆಂಗಳೂರು ನಗರ ಪ್ರದೇಶದಲ್ಲಿ 24 ಗಂಟೆ ಲಸಿಕೆ ನೀಡುವ ಕೇಂದ್ರ ತೆರೆಯಲಿದೆ. ಪ್ರತಿ ವಲಯದಲ್ಲಿ ಕೇಂದ್ರ ತೆರೆಯಲು ಆಲೋಚಿಸುತ್ತಿದೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾತನಾಡಿ, "ದಿನದ 24 ಗಂಟೆಯೂ ಲಸಿಕೆ ಸಿಗುವಂತೆ ಮಾಡಲು ನಿರ್ಧರಿಸಿದ್ದೇವೆ. ಅಲ್ಲದೇ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸಮಯ ವಿಸ್ತರಣೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.

English summary
BBMP has come out with an plan to speed up vaccination and achieve 100% first dose coverage in the next 45 days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X