ಬೆಂಗಳೂರು ಟ್ರಾಫಿಕ್ ಇಳಿಕೆಗೆ 2 ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ
ಬೆಂಗಳೂರು, ಅಕ್ಟೋಬರ್ 03: ಸಂಚಾರ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರು ನಗರದಲ್ಲಿ ಮತ್ತೆರಡು ಮೇಲ್ಸೇತುವೆ (Two New Flyover) ನಿರ್ಮಾಣಕ್ಕೆ ಬಿಬಿಎಂಪಿಯು ಮುಂದಾಗಿದೆ. ಈ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಿ ಸರಾಗ ವಾಹನಗಳ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳು ಸಮಗ್ರ ಯೋಜನಾ ವರದಿ (DPR) ತಯಾರಿಕೆಗೆ ಟೆಂಡರ್ ಸಹ ನಡೆಸಿತ್ತು.
ಕನಕಪುರ ರಸ್ತೆಯಲ್ಲಿ ಎಂಎನ್ ಕೃಷ್ಣರಾವ್ ಪಾರ್ಕ್‌ನಿಂದ 2.5-ಕಿಮೀ ವರೆಗೆ, ಬನಶಂಕರಿ ಮಾರುಕಟ್ಟೆಯಿಂದ ಸಾರಕ್ಕಿ ಜಂಕ್ಷನ್‌ವರೆಗೆ ಎರಡು ನೂತನ ಮೇಲ್ಸೇತುವೆಗಳು ಮುಂದಿನ ದಿನಗಳಲ್ಲಿ ತಲೆ ಎತ್ತಲಿವೆ. ಇವುಗಳ ಬೈಪಾಸ್ ಆಗುವುದನ್ನು ಖಚಿತಪಡಿಸಲಿವೆ ಎಂದು ಡಿಎಚ್ ವರದಿ ಮಾಡಿದೆ.

ತಿಂಗಳ ಹಿಂದಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡೂ ಯೋಜನೆಗಳಿಗೆ ಕಾರ್ಯಸಾಧ್ಯತಾ ವರದಿ ಮತ್ತು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ನಡೆಸಲಾಯಿತು. ಈ ಮೂಲಕ ಸಂಚಾರ ದಟ್ಟಣೆ ಇಳಿಕೆಗೆ ಬಿಬಿಎಂಪಿ ಮತ್ತೊಂದು ಹೆಜ್ಜ ಇಟ್ಟಿದೆ.
ಮೆಟ್ರೋ ಹಸಿರು ಮಾರ್ಗ ಪಕ್ಕ ಮೇಲ್ಸೇತುವೆ
ಕನಕಪುರ ರಸ್ತೆಯ ಒಂದು ಭಾಗವು 'ನಮ್ಮ ಮೆಟ್ರೋ' ಉತ್ತರ-ದಕ್ಷಿಣ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೂ ಪ್ರಸ್ತಾಪಿಸಲಾದ ಈ ಮೇಲ್ಸೇತುವೆಗಳು ಮೆಟ್ರೋದ ಹಸಿರು ಮಾರ್ಗದ ಪಕ್ಕದಲ್ಲಿ ಸಮಾನವಾಗಿ ಎತ್ತರ ವಿನ್ಯಾಸದಲ್ಲಿ ನಿರ್ಮಾಣಗೊಳ್ಳಲಿವೆ.
ಎಂಎನ್ ಕೃಷ್ಣರಾವ್ ಪಾರ್ಕ್‌ನಿಂದ ಹೊರ ವರ್ತುಲ ರಸ್ತೆಯವರೆಗಿನ ವಿಸ್ತರಣೆಯು ಅನೇಕ ಮಾನವ ಸಹಿತ ಮತ್ತು ಮಾನವ ರಹಿತ ಛೇದಕಗಳಿಂದ ಕೂಡಿರುವುದರಿಂದ ಪ್ರಸ್ತಾವಿತ ಮೇಲ್ಸೇತುವೆಗಳು ದಟ್ಟಣೆಗೆ ಕಡಿವಾಣ ಹಾಕಲಿವೆ. ಈ ಜೋಡಿ ಮೇಲ್ಸೇತುವೆ ಯೋಜನೆಯಲ್ಲಿ ನಿರ್ಮಾಣ ಕೆಲಸ ಸವಾಲಾಗಿದೆ. ಕಿರಿದಾದ ಪ್ರದೇಶದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವುದು ಅಗತ್ಯವಾಗಿರಲಿದೆ. ಇದೇ ರೀತಿಯ ಮೂಲ ಸೌಕರ್ಯ ಯೋಜನೆಗಳಲ್ಲಿ ವಿಳಂಬಕ್ಕೆ ಪ್ರಮುಖ ಕಾರಣ ಸಿಕ್ಕಿದೆ.

ಬನಶಂಕರಿ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ
ಬನಶಂಕರಿ ದೇವಸ್ಥಾನ ಹಾಗೂ ಕೃಷ್ಣರಾವ್ ಪಾರ್ಕ್ ನಡುವೆ ಕನಿಷ್ಠ ಆರು ಸಿಗ್ನಲ್ ಗಳು ಇವೆ. ಅವುಗಳಲ್ಲಿ ಕೆಲವುಗಳು ಸಂಚಾರಕ್ಕೆ ತೊಂದರೆ ನೀಡುವಂತಿವೆ. ಬನಶಂಕರಿ ಜಂಕ್ಷನ್‌ಗೆ ಹತ್ತಿರವಾಗುತ್ತಿದ್ದಂತೆ ರಸ್ತೆ ಕಿರಿದಾಗುವುದರಿಂದ ದಟ್ಟಣೆ ಕಂಡು ಬರುತ್ತದೆ. ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸದ್ಯ ಯೋಜನೆ ಜಾರಿಗೆ ಇನ್ನೂ ಕಾಲಾವಕಾಶ ಬೇಕಿದೆ. ಅದರ ಜೊತೆ ಜೊತೆಗ ಬನಶಂಕರಿ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅದರ ನಿರ್ವಹಣೆಗೆ ಗಮನ ಹರಿಸಬೇಕಿದೆ. ಸದ್ಯ ಈ ಎರಡು ಮೇಲ್ಸೇತುವೆ ಯೋಜನೆ ಪ್ರಸ್ತಾವನೆ ಹಂತದಲ್ಲಿದೆ.
ಯೋಜನೆಯ ಆರ್ಥಿಕ ಮತ್ತು ತಾಂತ್ರಿಕ ಕಾರ್ಯಸಾಧ್ಯತೆ ಅಧ್ಯಯನ ಮಾಡಬೇಕು ಎಂದು ಬಿಬಿಎಂಪಿಯ ಯೋಜನಾ ಕೋಶದ ಮುಖ್ಯ ಎಂಜಿನಿಯರ್ ಎಂ.ಲೋಕೇಶ್ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ದಕ್ಷಿಣ ಬೆಂಗಳೂರು ಕುರಿತು ಹಲವು ಯೋಜನೆಗಳ ಪರಿಶೀಲನೆ ವೇಳೆ ಕನಕಪುರ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಮೇಲ್ಸೇತುವೆ ನಿರ್ಮಾಣ ಕುರಿತು ಸಲಹೆ ಕೇಳಿ ಬಂದಿದೆ. ಅಲ್ಲಿಂದ ಈ ಮೇಲ್ಸೇತುವೆ ಪರಿಕಲ್ಪನೆ ಜೀವ ಪಡೆಯಿತು ಎಂದು ಅಧಿಕಾರಿಗಳು ಹೇಳಿದರು.
ಜೆಸಿ ರಸ್ತೆ ಮೇಲ್ಸೇತುವೆ ಕಥೆ ಏನಾಯ್ತು?
ಅಂದಾಜು 270 ಕೋಟಿ ವೆಚ್ಚದಲ್ಲಿ ನಗರದ ಜೆಸಿ ರಸ್ತೆಯಲ್ಲಿ 1.8 ಕಿ.ಮೀ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ತನ್ನ ಹಿಂದಿನ ಯೋಜನೆ ಬಗ್ಗೆ ಮರು ಚಿಂತನೆ ಆರಂಭಿಸಿದೆ. ದಶಕಗಳಷ್ಟು ಹಳೆಯದಾದ ಪ್ರಸ್ತಾವನೆಗೆ ಕೆಲವು ಬಾರಿ ಪನರ್‌ಜೀವ ಸಿಕ್ಕಿದೆ. ವೆಚ್ಚದ ಕಾರಣದಿಂದ ಯೋಜನೆ ಕಾರ್ಯರೂಪಕ್ಕೆ ಬರುತ್ತಿಲ್ಲ ಎನ್ನಲಾಗಿದೆ.












Click it and Unblock the Notifications