Dravid & Kumble: ಬೆಂಗಳೂರಿನ ನಡು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಬ್ಯಾಟಿಂಗ್ & ಅನಿಲ್ ಕುಂಬ್ಳೆ ಬೌಲಿಂಗ್!

ನಮ್ಮ ಬೆಂಗಳೂರು ಅಂದ್ರೆ ಒಂದು ರೀತಿ ಕ್ರಿಕೆಟ್ ತವರು ಇದ್ದಂತೆ ಯಾಕಂದ್ರೆ ಭಾರತೀಯ ಕ್ರಿಕೆಟ್ ತಂಡಕ್ಕೆ ಬೆಂಗಳೂರು ಹಲವು ಸ್ಟಾರ್ ಕ್ರಿಕೆಟಿಗರನ್ನ ಕೊಟ್ಟಿದೆ. ಬೌಲಿಂಗ್ ಲೋಕದ ದಂತಕಥೆ ಅನಿಲ್ ಕುಂಬ್ಳೆ, ಬ್ಯಾಟಿಂಗ್ ವಾಲ್ ಎನಿಸಿಕೊಂಡ ರಾಹುಲ್ ದ್ರಾವಿಡ್, ಬೆಂಕಿ ಬೌಲರ್ ಆಗಿದ್ದ ವೆಂಕಟೇಶ್ ಪ್ರಸಾದ್ ಸೇರಿ ಹತ್ತಾರು ಜನರು ಭಾರತ ಕ್ರಿಕೆಟ್ ತಂಡ ಸೇರಿ ಸೇವೆ ಸಲ್ಲಿಸಿದ್ದರು. ಈಗ ದಿಢೀರ್ ಆಟಗಾರರು ಬೆಂಗಳೂರಿನ ನಡುವೆ ರಸ್ತೆಯಲ್ಲಿ ಬ್ಯಾಟಿಂಗ್ & ಬೌಲಿಂಗ್ ಮಾಡುತ್ತಿದ್ದಾರೆ!

ಭಾರತ ಕ್ರಿಕೆಟ್ ದೇಶ, ಇಲ್ಲಿ ಕ್ರಿಕೆಟ್ ಕೇವಲ ಆಟವಲ್ಲ ಕ್ರಿಕೆಟ್ ಒಂದು ಧರ್ಮವೇ ಆಗಿದೆ. ಹೀಗಾಗಿ ಕ್ರಿಕೆಟ್‌ನ ಸಂಭ್ರಮಿಸುತ್ತಾರೆ ಭಾರತೀಯರು. ಅದರಲ್ಲೂ ಕನ್ನಡಿಗರು ಕೂಡ ಇದೇ ಟ್ರೆಂಡ್‌ಗೆ ಮಾರು ಹೋಗಿದ್ದಾರೆ. ಕರ್ನಾಟಕದಲ್ಲಿ ಕೂಡ ಕ್ರಿಕೆಟ್ ಅಭಿಮಾನ ದೊಡ್ಡದಾಗಿ ಇದೆ. ಅದನ್ನ ಮತ್ತೊಮ್ಮೆ ಈಗ ಇಡೀ ಜಗತ್ತಿಗೆ ತೋರಿಸುವ ಕಾರ್ಯ ನಡೆದಿದೆ.

BBMP Painted Indian Cricket Legends Pictures Under Bengalurus Busy Flyover Pillars

ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದಷ್ಟು ಕ್ರಿಕೆಟ್ ಅಭಿಮಾನ, ಬೇರೆ ಯಾವುದೇ ರಾಜ್ಯ ಹೊಂದಿಲ್ಲ. ಹೀಗಿದ್ದಾಗ ಕನ್ನಡಿಗರ ಕ್ರಿಕೆಟ್ ಪ್ರೇಮವನ್ನು ಇಡೀ ಜಗತ್ತಿಗೆ ತೋರಿಸಲು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದೇ ಕಾರಣಕ್ಕೆ ಸ್ಟಾರ್ ಕ್ರಿಕೆಟ್ ಆಟಗಾರರು ರಸ್ತೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ದಿಢೀರ್ ಕ್ರಿಕೆಟ್ ಆಟಗಾರರು ಹೀಗೆ, ರಸ್ತೆಗೆ ಎಂಟ್ರಿ ಕೊಡಲು ಕಾರಣ ಏನು?

ದ್ರಾವಿಡ್ ಬ್ಯಾಟಿಂಗ್ & ಕುಂಬ್ಳೆ ಬೌಲಿಂಗ್!

ನಮ್ಮ ಬೆಂಗಳೂರು ಎಷ್ಟು ಸುಂದರ ಅನ್ನೋದು ನಿಮಗೆಲ್ಲಾ ಗೊತ್ತು, ಅದರಲ್ಲೂ ನಮ್ಮ ಬೆಂಗಳೂರಿಗೆ ಉದ್ಯಾನ ನಗರಿ & ಸಿಲಿಕಾನ್ ಸಿಟಿ ಎಂಬ ಬಿರುದು ಕೂಡ ಇದೆ. ಹೀಗಿದ್ದಾಗ ಬೆಂಗಳೂರಿನ ಅಂದವನ್ನ ಹೆಚ್ಚಿಸಲು, ಮೇಲ್‌ಸೇತುವೆ ಅಂದ್ರೆ ಫ್ಲೈಓವರ್‌ಗೆ ಬಿಬಿಎಂಪಿಯ ಕಡೆಯಿಂದ ಪೇಂಟಿಂಗ್ ಮಾಡಿಸಲಾಗುತ್ತಿದೆ. ಇದೇ ರೀತಿ ಕ್ರಿಕೆಟ್ ಪರಿಕಲ್ಪನೆಯಲ್ಲಿ ಕೂಡ ಪೇಂಟಿಂಗ್ ಮಾಡಿಸಿ ಸಂಭ್ರಮಿಸಲಾಗಿದೆ.

ಇನ್ನು ಈ ರೀತಿ ಫ್ಲೈಓವರ್‌ಗೆ ಪೇಂಟಿಂಗ್ ಮಾಡಿಸುವಾಗ ಬೇರೆ ಬೇರೆ ಪರಿಕಲ್ಪನೆ ಬಳಸಿದೆ ಬಿಬಿಎಂಪಿ. ಹಾಗೇ ಕ್ರಿಕೆಟ್ ಪರಿಕಲ್ಪನೆಯಲ್ಲಿ ಮೇಲ್‌ಸೇತುವೆಗೆ ಪೇಂಟ್ ಮಾಡಿಸುವಾಗಲೇ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿ ಲೆಜೆಂಡ್ ಆಟಗಾರರ ಚಿತ್ರವನ್ನ ಬೆಂಗಳೂರಿನ ಫ್ಲೈಓವರ್ ಕಂಬಗಳಲ್ಲಿ ಅಂದರೆ ಪಿಲ್ಲರ್ ಮೇಲೆ ಬಿಡಿಸಲಾಗಿದೆ. ಹಾಗಾದ್ರೆ ಎಲ್ಲಿ ಗೊತ್ತಾ?

BBMP Painted Indian Cricket Legends Pictures Under Bengalurus Busy Flyover Pillars

'ರಿಚ್‌ಮಂಡ್' ಬಳಿ ಕ್ರಿಕೆಟ್ ಸರ್ಕಲ್ ನಿರ್ಮಾಣ!

ಹೌದು, ಬಿಬಿಎಂಪಿ ಈಗ ಬೆಂಗಳೂರಿನ ಖ್ಯಾತ ಪ್ರದೇಶವಾದ ರಿಚ್‌ಮಂಡ್ ಟೌನ್ ಬಳಿಯ ಫ್ಲೈಓವರ್‌ಗೆ ಕ್ರಿಕೆಟ್ ರೂಪ ಕೊಟ್ಟಿದೆ. ಹೀಗಾಗಿ ರಿಚ್‌ಮಂಡ್ ಮೇಲ್‌ಸೇತುವೆ ಪಿಲ್ಲರ್‌ಗಳಿಗೆ ಕ್ರಿಕೆಟ್ ಆಟಗಾರರ ಪೇಂಟಿಂಗ್ ಮಾಡಿಸಿದೆ ಬಿಬಿಎಂಪಿ. ದ್ರಾವಿಡ್ ಬ್ಯಾಟಿಂಗ್ ಶೈಲಿ ಮತ್ತು ಅನಿಲ್ ಕುಂಬ್ಳೆ ಅವರ ಬೌಲಿಂಗ್ ಶೈಲಿಯನ್ನ ಫ್ಲೈಓವರ್ ಪಿಲ್ಲರ್ ಮೇಲೆ ಬಿಡಿಸಲಾಗಿದೆ.

ಸಯ್ಯದ್ ಕಿರ್ಮಾನಿ ಕೀಪಿಂಗ್!

ಇಷ್ಟೇ ಅಲ್ಲದೆ ಭಾರತ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿದ್ದ ಸಯ್ಯದ್ ಕಿರ್ಮಾನಿ & ಬಿ.ಎಸ್. ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್ ಸೇರಿದಂತೆ ಹಲವು ಸಾಧಕರ ಚಿತ್ರಗಳನ್ನು ಪಿಲ್ಲರ್‌ನ ಮೇಲೆ ಬಿಡಿಸಲಾಗಿದೆ. ಹಾಗೆ ಇನ್ನು ಹಲವು ಸ್ಟಾರ್ ಕ್ರಿಕೆಟ್ ಆಟಗಾರರನ್ನ ಪಿಲ್ಲರ್ ಮೇಲೆ ಬಿಡಿಸಿ, ಅದಕ್ಕೆ 'ಕ್ರಿಕೆಟ್ ಸರ್ಕಲ್' ಎಂದು ಹೆಸರು ಇಟ್ಟಿದೆ 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ'. ಹೀಗೆ ಬಿಬಿಎಂಪಿ ಕೈಗೊಂಡ ಈ ಕಾರ್ಯ ಎಲ್ಲೆಡೆ ಪ್ರಶಂಸಗೆ ಪಾತ್ರವಾಗಿದೆ.

ಟ್ರಾಫಿಕ್ ಇದ್ದಾಗ ಫುಲ್ ಎಂಜಾಯ್

ಒಟ್ನಲ್ಲಿ ಬೆಂಗಳೂರಿನ ಫ್ಲೈಓವರ್ಸ್ ಈಗ ರಂಗು ರಂಗಾಗುತ್ತಿವೆ. ಅದರಲ್ಲೂ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಗೆ ಇದು ಸಿಕ್ಕಾಪಟ್ಟೆ ಇಷ್ಟವಾಗಿದೆ. ಸಿಗ್ನಲ್ ಬಿದ್ದ ಸಮಯದಲ್ಲಿ ವಾಹನ ಸವಾರರು ಬೇಸರ ಮಾಡಿಕೊಳ್ಳುವ ಬದಲು, ಭಾರತೀಯ ಕ್ರಿಕೆಟ್ ಆಟಗಾರರ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+