ಮಹಿಳೆಯರ ಬದಲು ಪುರುಷರಿಗೆ ಪಿಂಕ್‌ ಆಟೋ ನೀಡಲು ಬಿಬಿಎಂಪಿ ನಿರ್ಧಾರ

ಬೆಂಗಳೂರು, ಜು.23: ಬಿಬಿಎಂಪಿಯು ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಪಿಂಕ್‌ ಆಟೋ ಯೋಜನೆಯನ್ನು ಜಾರಿಗೆ ತಂದಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದೀಗ ಪುರುಷರಿಗಾಗಿಯೂ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ.

ಮಹಿಳೆಯರಿಗಾಗಿ ಇರುವ ಈ ಪಿಂಕ್‌ ಆಟೋಗಳಿಗೆ 75 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ನಗರದಲ್ಲಿರುವ ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವಂತೆ ಮಾಡಲು ಮಹಿಳಾ ಡ್ರೈವರ್‌ಗಳಿರುವ ಪಿಂಕ್‌ ಆಟೋ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಒಬ್ಬ ಮಹಿಳೆಯೂ ಕೂಡ ಈ ಯೋಜನೆಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಈ ಆಟೋಗಳನ್ನು ಪುರುಷರಿಗೆ ನೀಡಲು ನಿರ್ಧರಿಸಿದೆ ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.

ಮಹಿಳೆಯರ ಸುರಕ್ಷತೆಗಾಗಿ ಆಟೋಗಳಲ್ಲಿ ಸಿಸಿಟಿವಿ, ಜಿಪಿಎಸ್‌ ಅಳವಡಿಸಲಾಗುತ್ತದೆ, ಬಿಬಿಎಂಪಿ ಚುನಾವಣೆಯ ಮುಂಚಿತವಾಗಿ ಮಹಿಳೆಯರು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಅರ್ಜಿಗಳು ಬಂದಿಲ್ಲ ಎಂದು ಹೇಳಿದ್ದಾರೆ.

BBMP opens up pink auto scheme to male drivers

ಯಲಹಂಕ,ಬೊಮ್ಮನಹಳ್ಳಿಯಲ್ಲೂ ಕೂಡ ಪಿಂಕ್‌ ಆಟೋಗಳನ್ನು ಓಡಿಸಲು ಮಹಿಳೆಯರು ಆಸಕ್ತಿ ತೋರುತ್ತಿಲ್ಲ, ಮಹಿಳೆಯ ಬಳಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಕುರಿತು ಚಾಲಕರಿಗೆ ತರಬೇತಿ ನೀಡಲಾಗುತ್ತದೆ. ಶೀಘ್ರ 2 ರಿಂದ 3 ಸಾವಿರ ಪಿಂಕ್‌ ಆಟೋಗಳನ್ನು ನಗರದಲ್ಲಿ ಆರಂಭಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+