E-Khata in Online: ಬಿಬಿಎಂಪಿಯಿಂದ ಸಂಪರ್ಕರಹಿತ, ಫೇಸ್ ಲೆಸ್ ಆನ್‌ಲೈನ್ ಇ-ಖಾತಾ ವ್ಯವಸ್ಥೆ: ಹೇಗೆ?

ಬೆಂಗಳೂರು, ನವೆಂಬರ್ 17: ಆದಾಯ ಹೆಚ್ಚಿಸಲು, ವಂಚನೆಗೆ ಕಡಿವಾಣ ಹಾಕಲು ಹಾಗೂ ನಾಗರಿಕರಿಗೆ ಕೈಗೆಟುಕುವ ಸೌಲಭ್ಯ ದೊರೆಯುವಂತೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಇ-ಖಾತೆ ಪಡೆಯಲು ಪ್ರತ್ಯೇಕ ಪೋರ್ಟಲ್ ತೆರೆಯಲಿದೆ. ಅಲ್ಲದೇ ಬಿಬಿಎಂಪಿಯು ಸಂಪರ್ಕರಹಿತ, ಫೇಸ್ ಲೆಸ್ ಮತ್ತು ಆನ್‌ಲೈನ್ ಮೂಲಕ ಇ-ಖಾತಾ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಬೆಂಗಳೂರಿನಲ್ಲಿ ಬಿಬಿಎಂಪಿಯು ಈಗಾಗಲೇ 22 ಲಕ್ಷ ಖಾತೆಗಳನ್ನು ಡಿಜಿಟಲೀಕರಣ ಮಾಡಿದೆ. ಇವೆಲ್ಲವನ್ನು ಪ್ರತ್ಯೇಕ ಪೋರ್ಟಲ್ ನಲ್ಲಿ ಅಳವಡಿಸಿ, ನಾಗರಿಕರಿಗೆ ಸುಲಭವಾಗಿ ಆನ್‌ಲೈನ್‌ನಲ್ಲಿ ಸಿಗುವಂತೆ ಮಾಡಲಿದೆ. ಇನ್ನೂ ಒಟ್ಟು 05 ಲಕ್ಷ ಇ- ಖಾತೆಗಳನ್ನು ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಿದ್ದಾರೆ.

BBMP Open Separate Portal for E-Khata How to Get E-Khata in Online Links here

ಬಿಬಿಎಂಪಿ ಈ ಸಂಪರ್ಕರಹಿತ, ಫೇಸ್ ಲೆಸ್, ಆನ್‌ಲೈನ್ ತಂತ್ರಾಂಶದ ವಿನ್ಯಾಸವು ನಾಗರಿಕರ ನಿಯಂತ್ರಣದಲ್ಲಿ ಇರಿಸಲಾಗಿದೆ. ಸಾರ್ವಜನಿಕರು ತಾವೇ ಸ್ವತಃ ಆನ್ ಲೈನ್ https://bbmpeaasthi.karnataka.gov.in ಮೂಲಕ ಹೆಚ್ಚಿನ ಮಾಹಿತಿ ನೀಡಿ ಅಂತಿಮ ಇ-ಖಾತಾ ಅನ್ನು ಪಡೆಯಬಹುದಾಗಿದೆ.

ಬಿಬಿಎಂಪಿ ಖಾತಾ ವ್ಯವಸ್ಥೆಯನ್ನು ಅಧಿಕಾರಶಾಹಿಯಿಂದ ಮುಕ್ತಗೊಳಿಸುವುದು ಪ್ರಮುಖ ಗುರಿಯಾಗಿದೆ. ಇದರಿಂದ ನಾಗರಿಕರು ಸಬಲರಾಗುತ್ತಾರೆ ಮತ್ತು ಇ-ಖಾತಾ ಅಥವಾ ಖಾತಾ ಸೇವೆಗಳಿಗಾಗಿ ಪಾಲಿಕೆ ಸಿಬ್ಬಂದಿ ಅವಲಂಬನೆ ತಪ್ಪುತ್ತದೆ.

BBMP Open Separate Portal for E-Khata How to Get E-Khata in Online Links here

ಈ ನಾಗರಿಕ ಸಬಲೀಕರಣ ವ್ಯವಸ್ಥೆಯಲ್ಲಿ ಅಂತರ್ಗತವಾಗಿ ನಾಗರಿಕನ ನಿಯಂತ್ರಣದಲ್ಲಿರುತ್ತದೆ ಹಾಗೂ ಅವನ / ಅವಳ ಅಂತಿಮ ಇ-ಖಾತಾವನ್ನು ಸ್ವತಃ ತಾನೇ ಪಡೆಯಬಹುದು. ಈಗಾಗಲೇ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಾಗರಿಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆಯಲು ಅವಕಾಶ ನೀಡಲಾಗಿದೆ.

ಇ-ಖಾತೆ ಪಡೆಯಲು ಜನರಿಗೆ ಮಾರ್ಗದರ್ಶನ ವಿಡಿಯೋ

ಹೇಗೆ ಆನ್‌ಲೈನ್ ಮೂಲಕ ಇ ಖಾತಾ ಪಡೆಯಬೇಕು ಎಂಬುದರ ಕುರಿತು ಯೂಟ್ಯೂಬ್‌ನಲ್ಲಿ ತರಬೇತಿಯ ವೀಡಿಯೋ ಅಪ್ಲೊಡ್ ಮಾಡಲಾಗಿದೆ. ಇವು ಜನರಿಗೆ ಮಾರ್ಗದರ್ಶನ ನೀಡಲಿವೆ. ಅದಕ್ಕಾಗಿ ಕನ್ನಡಿಗರು https://youtu.be/JR3BxET46po?si=jDoSKqy2V1IFUpf6 ಲಿಂಕ್ ಮೇಲೆ, ಕನಡೇತರರು ಈ ಲಿಂಕ್ https://youtu.be/GL8CWsdn3wo?si=Zu_EMs3SCw5-wQwT ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಬಿಬಿಎಂಪಿಯು ಮುಂಬರುವ ವಾರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇ-ಖಾತಾ ಪಡೆಯುವ ಕುರಿತು ತರಬೇತಿ ನೀಡಲಾಗುವುದು. ಬಿಬಿಎಂಪಿ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ. ಅವರೇ ಅವರ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.

ನಾಗರಿಕರು "ತಮ್ಮದೇ ಅಂತಿಮ ಇ-ಖಾತಾವನ್ನು ಮುದ್ರಿಸಲು" ಅಧಿಕಾರವನ್ನು ಹೊಂದಿದ್ದಾರೆ. ಬಿಬಿಎಂಪಿಯಲ್ಲಿನ ಯಾವುದೇ ಅಧಿಕಾರಿಯು ಅಂತಿಮ ಇ-ಖಾತಾ ಅನ್ನು ಅನುಮೋದಿಸುವುದಿಲ್ಲ. ಇದು ಬಿಬಿಎಂಪಿಯ ಫೇಸ್ ಲೆಸ್, ಸಂಪರ್ಕವಿಲ್ಲದ, ಆನ್‌ಲೈನ್ ಇ-ಖಾತಾ ವ್ಯವಸ್ಥೆಯ ನಿಜವಾದ ತಿಳುವಳಿಕೆಯಾಗಿದೆ.

ತಾಂತ್ರಿಕ ಸಮಸ್ಯೆಗಳು(ಯಾವುದಾದರೂ ಇದ್ದಲ್ಲಿ) ಮತ್ತು ಇತರೆ ಸಹಾಯವನ್ನು ಹೆಚ್ಚಿನ ಆದ್ಯತೆಯ ಮೇಲೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+